ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ದಲಿತ ಮತ್ತು ಮಾದಿಗ ಸಂಘಟನೆಗಳು ಕಳೆದ 30 ವರ್ಷಗಳಿಂದ ಬೀದಿಗಿಳಿದು ಹೋರಾಡಿದ ಪರಿಣಾಮದಿಂದಲೇ ಸಾಮಾಜಿಕ ನ್ಯಾಯವಾದ ಒಳ ಮೀಸಲಾತಿ ವರ್ಗೀಕರಣವು ದ


ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ದಲಿತ ಮತ್ತು ಮಾದಿಗ ಸಂಘಟನೆಗಳು ಕಳೆದ 30 ವರ್ಷಗಳಿಂದ ಬೀದಿಗಿಳಿದು ಹೋರಾಡಿದ ಪರಿಣಾಮದಿಂದಲೇ ಸಾಮಾಜಿಕ ನ್ಯಾಯವಾದ ಒಳ ಮೀಸಲಾತಿ ವರ್ಗೀಕರಣ

ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ದಲಿತ ಮತ್ತು ಮಾದಿಗ ಸಂಘಟನೆಗಳು ಕಳೆದ 30 ವರ್ಷಗಳಿಂದ ಬೀದಿಗಿಳಿದು ಹೋರಾಡಿದ ಪರಿಣಾಮದಿಂದಲೇ ಸಾಮಾಜಿಕ ನ್ಯಾಯವಾದ ಒಳ ಮೀಸಲಾತಿ ವರ್ಗೀಕರಣವು ದಿಲ್ಲಿಯಿಂದ ರಾಜ್ಯ ರಾಜ್ಯಧಾನಿಯವರೆಗೆ ಗೆಲುವು ಕಂಡಿದೆ. 2022ರ ಫ್ರೀಡಂ ಪಾರ್ಕ್ ಐತಿಹಾಸಿಕ ಹೋರಾಟದಿಂದ ಹಂತ ಹಂತವಾಗಿ ಒಳಮೀಸಲಾತಿ ಹೋರಾಟವು ಯಶಸ್ವಿಯಾಗಿ ಮುಂದೆ ಸಾಗಿದೆ.

ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗವು ಪರಿಶಿಷ್ಟ ಜಾತಿಗಳ ಸಂವಿಧಾನಿಕ ಸೌಲಭ್ಯಗಳ ಹಂಚಿಕೆಯಲ್ಲಿ ಉಂಟಾದ ತಾರತಮ್ಯಗಳ ನಿವಾರಣಾ ಸಮಿತಿಯು ಭಾರತದಲ್ಲಿ ಮೊದಲ ಬಾರಿಗೆ ಮನೆಮನೆಯ ಸಮೀಕ್ಷೆಯನ್ನು ನಡೆಸಿ ಅಂಕಿ ಅಂಶಗಳನ್ನು ವೈಜ್ಞಾನಿಕವಾಗಿ ಕ್ರೋಢೀಕರಿಸಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲು ದಿನಾಂಕ: 06.06.2012 ರಂದು ಕರ್ನಾಟಕ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇಲ್ಲಿಯವರೆಗೂ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷಗಳೂ ಒಳಮೀಸಲಾತಿ ಸಮಸ್ಯೆಯನ್ನು ಒಂದು ಸಾಮಾಜಿಕ ನ್ಯಾಯವೆಂದು ಪರಿಗಣಿಸದೆ ರಾಜಕೀಯ ದಾಳವಾಗಿ ಉಪಯೋಗಿಸಿರುವುದು ದುರಂತದ ವಿಷಯ. ಇದು ಖಂಡನೀಯ.

ಮಾನ್ಯ ಸುಪ್ರೀಂ ಕೋರ್ಟ್ ದಿನಾಂಕ 1.8.2024ರಂದು ಒಳ ಮೀಸಲಾತಿ ನೀಡುವ ಅಧಿಕಾರವು ರಾಜ್ಯ ಸರಕಾರಕ್ಕೆ ಇದೆ ಎಂದು ತೀರ್ಪು ನೀಡಿ ಮೂರು ತಿಂಗಳು ಕಳೆದಿದೆ. ಕರ್ನಾಟಕ ರಾಜ್ಯ ಸರಕಾರದಲ್ಲಿ ಸಾಕಷ್ಟು ದತ್ತಾಂಶಗಳು ಲಭ್ಯವಿದ್ದರೂ ಶೀಘ್ರವೇ ಕ್ರಮ ಜರುಗಿಸದೆ ಅನಾವಶ್ಯಕವಾಗಿ ಏಕಸದಸ್ಯ ಆಯೋಗದ ಮೊರೆಹೋಗಿರುವುದು ನಿಧಾನ ದ್ರೋಹವಾಗಿದೆ. ದಿನಾಂಕ 28.10.2024 ರಂದು ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ವರ್ಗೀಕರಣವನ್ನು ಒಪ್ಪಿಕೊಂಡು ಜಾರಿಗಾಗಿ ಎರಡು ತಿಂಗಳ ಗಡುವು ವಿಧಿಸಿದೆ ನ್ಯಾಯಮೂರ್ತಿ ನಾಗಮೂಹನದಾಸ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಅದರ ಅವಧಿಯು ಡಿಸೆಂಬರ್ 28 12.2024ಕ್ಕೆ ಎರಡು ತಿಂಗಳು ಕಳೆಯುತ್ತದೆ, ಇದುವರೆಗೂ ಆಯೋಗಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಸರ್ಕಾರವು ನಿರ್ಲಕ್ಷ್ಯದಿಂದ ವಿಳಂಬ ಧೋರಣೆಯನ್ನು ಮುಂದುವರಿಸಿರುವುದರಿಂದ ಆಯೋಗದ ಅಧ್ಯಕ್ಷರು ಕಾರ್ಯಪ್ರೌವೃತ್ತರಾಗಲು ಸಾಧ್ಯವಾಗುತ್ತಿಲ್ಲ. ಇದು ಖಂಡನೀಯ.

ಒಂದು ರೀತಿಯಲ್ಲಿ ಏಕಸದಸ್ಯ ಆಯೋಗದ ನೇಮಕವು ಅನಾವಶ್ಯಕವಾಗಿತ್ತು. ಈಗಾಗಲೇ ಕಾನೂನೆ ಚಿವರಾದ ಜೆ.ಸಿ.ಮಾಧುಸ್ವಾಮಿಯವರು ನ್ಯಾಯಮೂರ್ತಿ ಸದಾಶಿವರವರ ಆಯೋಗದ ವರದಿಯ ಸಮೀಕ್ಷೆಯ ಒಳಮೀಸಲಾತಿ ಜಾರಿಗಾಗಿ ದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ

-2- ಅಂಶಗಳನ್ನು ಪರಿಗಣಿಸಿ ಆಯೋಗದ ಶಿಫಾರಸ್ಸುಗಳನ್ನು ಮಾತ್ರ ರದ್ದುಪಡಿಸಿ ಶೇ. 17 ರ ಹೆಚ್ಚುವರಿ ಅನುಪಾತದಲ್ಲಿ ಒಳಮೀಸಲಾತಿ ವರ್ಗೀಕರಣವನ್ನು ಮಾದಿಗ ಸಂಬಂಧಿತ ಉಪಜಾತಿಗಳಿಗೆ ಶೇ 6 ರಂತೆ, ಹೊಲೆಯ ಸಂಬಂಧಿತ ಉಪಜಾತಿಗಳಿಗೆ ಶೇ.5.5, ಬೋವಿ ಲಂಬಾಣಿ ಕೊರಮ ಕೊರಚ ಸಮುದಾಯಗಳಿಗೆ ಶೇ.4.5 ರಂತೆ, ಅಲೆಮಾರಿ ಸಮುದಾಯಗಳಿಗೆ ಶೇ 1 ರಂತೆ ಶಿಫಾರಸ್ಸು ಮಾಡಿತು. ಬಿಜೆಪಿ ಸಚಿವ ಸಂಪುಟವು. ಅನುಮೋದಿಸಿ ಅದನ್ನು ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳೂ ಸಹ ಒಪ್ಪಿ ಒಳಮೀಸಲಾತಿ ವರ್ಗೀಕರಿಸಲು ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಲಾಗಿತ್ತು ಒಳಮೀಸಲಾತಿ ವರ್ಗೀಕರಣಕ್ಕೆ ಬೇಕಾದಂತಹ 2011ರ ಜನಸಂಖ್ಯಾ ಜನಗಣತ, ಸದಾಶಿವರ ಆಯೋಗದ ವರದಿ, ಕಾಂತರಾಜ್ ಆಯೋಗದ ವರದಿ, ನಾಗಮೋಹನ್ ದಾಸ್ ಆಯೋಗದ ವರದಿ ಸೇರಿದಂತೆ ಲಭ್ಯವಿರುವ ಎಲ್ಲಾ ದತ್ತಾಂಶಗಳ ಅಂಶಗಳನ್ನು ಒಪ್ಪಿಕೊಂಡಿದ್ದರೆ ಸಾಕಾಗಿತ್ತು. ಆದರೆ ಸಾಮಾಜಿಕ ನ್ಯಾಯವನ್ನು ಕೂಡಲು ರಾಜಕೀಯ ಇಚ್ಛಾಶಕ್ತಿ ಇಲ್ಲದ ಕಾರಣ ಉದ್ದೇಶಪೂರ್ವಕವಾಗಿ ನಾಗಮೋಹನ್ ದಾಸ್ ರವರ ಆಯೋಗವನ್ನು ರಚಿಸಲಾಗಿದೆ.

ಕರ್ನಾಟಕ ರಾಜ್ಯ ಸಂಪುಟವು 28-10-2024 ರಂದು ಸರ್ವೋಚ್ಚನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಎಸ್ಟಿ ಎಸ್ಪಿ ಸಮುದಾಯಗಳಿಗೆ ಒಳಮೀಸಲಾತಿ (Internal Reservation) ಕೊಡಲು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ಜೊತೆಯಲ್ಲಿಯೇ ಸರ್ಕಾರವು ಒಳಮೀಸಲು ವರ್ಗೀಕರಣ ಜಾರಿಯಾಗುವವರೆಗೂ ಹೊಸ ನೇಮಕಾತಿಯನ್ನು ತಡೆಯುವಂತೆಯೂ ಕೂಡ ಆದೇಶಿಸಿದೆ. ಆದರೂ ನೇಮಕಾತಿಗಳೂ ನಡೆಯುತ್ತಲೇ ಇದೆ. ಒಂದು ಕಡೆ ಈ ಹಿಂದೆ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳಲ್ಲಿರುವ ನೇಮಕಾತಿ ಸಂಖ್ಯೆಗಳನ್ನು ಹೆಚ್ಚಳ ಮಾಡಲು ಪ್ರಯತ್ನಿಸುತ್ತಿರುವುದು, ಇನ್ನೂ ಕೆಲವು ನೇಮಕಾತಿಯ ಅಧಿಸೂಚನೆಗಳಿಗೆ ಹಿಂದಿನ ದಿನಾಂಕಗಳನ್ನು ಹಾಕಿ ಪ್ರಕಟಿಸುತ್ತಿರುವುದು ಹಾಗೂ ಡಾ/ ಜಿ ಪರಮೇಶ್ವರ್ ರವರ ಗೃಹ ಮತ್ತು ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ವಿಶೇಷ ಅನುಮತಿ ನೀಡಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಯಾರಿ ಮಾಡಿರುವುದು ಎಷ್ಟು ಸರಿ?

ಸಚಿವ ಸಂಪುಟದ ನಿರ್ಣಯವನ್ನು ಸಮಾಜ ಕಲ್ಯಾಣ ಇಲಾಖೆಯು 15 ದಿನಗಳ ನಂತರ ಸಿಬ್ಬಂಧಿ ಮತ್ತು ಆಡಳಿತಾತ್ಮಕ ಸುಧಾರಣಾ (DPAR) ಇಲಾಖೆಗೆ ರವಾನಿಸಿ ನಂತರ ಇಲಾಖೆಯು ಮೂರು ವಾರಗಳ ತಡಮಾಡಿ ದಿನಾಂಕ: 25.11.2024 ರಂದು ಎಲ್ಲಾ ಇಲಾಖೆಗಳಿಗೆ ಸೂಚಿಸಿದೆ. ಈ ರೀತಿ ಪರೋಕ್ಷವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರೈಸಿಕೊಳ್ಳಲು ಕುತಂತ್ರ ಮಾಡುತ್ತಿರುವುದನ್ನು ಖಂಡಿಸುತ್ತೇವೆ.

ಆಯೋಗಕ್ಕೆ ಸರ್ಕಾರವೇ ನಿಗಧಿಪಡಿಸಿದಂತೆ ಎರಡು ತಿಂಗಳ ಕಾಲಾವಕಾಶವು ಡಿಸೆಂಬರ್ 28.12.2024 ರಂದು ಪೂರ್ಣಗೊಳ್ಳಲಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಆಯೋಗಕ್ಕೆ ಕಛೇರಿ ಮತ್ತು ಅಗತ್ಯ ಸೌಲಭ್ಯಗಳನ್ನೂ ಕೂಡ ಇಲ್ಲಿಯವರೆಗೂ ಒದಗಿಸಿಲ್ಲ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ -ವಿರೋಧಿಗಳ ಒತ್ತಡಕ್ಕೆ ಮಣಿದು ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಇದನ್ನು ಒಕ್ಕೂಟವು ಖಂಡಿಸುತ= ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims