ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವರ್ಗ: ಜಾತಿ ಜನಗಣತಿ ಕಾಲಂನಲ್ಲಿ ನಮೂದಿಸಬೇಕು*

 *ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವರ್ಗ: ಜಾತಿ ಜನಗಣತಿ ಕಾಲಂನಲ್ಲಿ ನಮೂದಿಸಬೇಕು*


ಬೆಂಗಳೂರು:ಒಬಿಸಿ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ 2027ರಲ್ಲಿ ಕೇಂದ್ರ ಸರ್ಕಾರ ನಡೆಸುವ ಜಾತಿ ಜನಗಣತಿಯಲ್ಲಿ ಒಬಿಸಿ ಕಾಲಂ ಸೇರಿಸುವ ಕುರಿತು ಮಾಧ್ಯಮಗೋಷ್ಠಿ.

ಬಜಾರ ಗುರುಪೀಠ ಶ್ರೀ ಶ್ರೀ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಮಹಾಲಕ್ಷ್ಮಿ ಮಹಾಸಂಸ್ಥಾನ ಜಗದ್ದುರು ಶ್ರೀ ಶ್ರೀ ಶ್ರೀ ಜ್ಞಾನಾನಂದಪುರಿ ಮಹಾಸ್ವಾಮಿಗಳು, ಕುಂಬಾರ ಗುರುಪೀಠ ಬಸವಕುಂಬಾರ ಮಹಾಸ್ವಾಮಿಗಳು, ಮಾಜಿ ಶಾಸಕರಾದ ಮುಖ್ಯಮಂತ್ರಿ ಚಂದ್ರು, ಒಬಿಸಿ ಫೆಡರೇಷನ್ ಆಫ್ ಇಂಡಿಯಾ ಜೆ.ಎಂಜೇರಪ್ಪರವರು, ರಾಷ್ಟ್ರೀಯ ಒಬಿಸಿ ಮುಖಂಡ ನಾರಾಯಣ ತೋಸೂರು ಮಾಧ್ಯಮಗೋಷ್ಠಿ ಭಾಗವಹಿಸಿದ್ದರು.

*ಶ್ರೀ ಶ್ರೀ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿರವರು* ಮಾತನಾಡಿ ಹಿಂದುಳಿದ ವರ್ಗದ ಹೋರಾಟದಲ್ಲಿ ಜಯ ಸಿಕ್ಕಿದೆ. ಅವರಿಗೆ ಬೇಕಾದ ಸೌಲಭ್ಯ, ಸೌವಲತ್ತು ಸರ್ಕಾರ ಕೊಡಬೇಕು. ನಾವು ಸಲ್ಲಿಸಿದ ಅರ್ಜಿ ಸುಪ್ರಿಂಕೋರ್ಟ್ ಮಾನ್ಯ ಮಾಡಿದೆ.

ಕೇಂದ್ರ ಸರ್ಕಾರ ನಡೆಸುವ ಜಾತಿ ಜನಗಣತಿ ಸಮರ್ಪಕವಾಗಿ ನಡೆಸಬೇಕು. ಗುಡ್ಡಗಾಡು ಪ್ರದೇಶದಲ್ಲಿ ಹಿಂದುಳಿದ ವರ್ಗದವರು ನೆಲಸಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಒಂದು ತಿಂಗಳ ಅಭಿಯಾನ ಹಮ್ಮಿಕೊಳ್ಳಲಾಗುವುದು.

*ಶ್ರೀ ಶ್ರೀ ಶ್ರೀ ಜ್ಞಾನಾನಂದಪುರಿ ಮಹಾಸ್ವಾಮಿಗಳು* ಮಾತನಾಡಿ ಕರ್ನಾಟಕದಲ್ಲಿ 198ಹಿಂದುಳಿದ ವರ್ಗ ಸಮುದಾಯವಿದೆ ಅದರಲ್ಲಿ 4ಜಾತಿಗಳು ಮಾತ್ರ ಬಲಿಷ್ಠವಾಗಿ ಬೆಳದಿದ್ದಾರೆ ಮಿಕ್ಕ ಹಿಂದುಳಿದ ವರ್ಗ ಜಾತಿಯವರು ಬಹಳ ಹಿಂದುಳಿದಿದ್ದಾರೆ ಅವರಲ್ಲಿ ಒಬ್ಬರು ಸಹ ಗ್ರಾಮ, ಜಿಲ್ಲಾ ಪಂಚಾಯಿತಿ ಸದಸ್ಯರಿಲ್ಲ ಮತ್ತು ಶಿಕ್ಷಣದಲ್ಲಿ ಯಾವುದೇ ಸೌವಲತ್ತು ಪಡೆಯದೇ ಅನ್ಯಾಯಕ್ಕೆ ಒಳಗಾಗಿದ್ದಾರೆ. ಹಿಂದುಳಿದ ವರ್ಗದ ಪರವಾಗಿ ದೇಶಾದ್ಯಂತ ದೊಡ್ಡ ಮಟ್ಟದ ಚಳುವಳಿ ಆರಂಭವಾಗಿದೆ ಎಂದು ಹೇಳಿದರು.

*ಬಸವ ಕುಂಬಾರ ಮಹಾಸ್ವಾಮಿಗಳು* ಮಾತನಾಡಿ ದೇಶಾದ್ಯಂತ ಇರುವ ಕಾಯಕ ಸಮಾಜವಾದ ಹಿಂದುಳಿದ ವರ್ಗಕ್ಕೆ ಜನಗಣತಿಯಲ್ಲಿಯೂ ಕಡಿಮೆ ತೋರಿಸುತ್ತಾರೆ. ಹಿಂದುಳಿದ ವರ್ಗದವರು ಎಲ್ಲರು ಒಗ್ಗಾಟಗಾಗಿ ಹೋರಾಟ ಮಾಡಿ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಹೇಳಿದರು.

*ಮುಖ್ಯಮಂತ್ರಿ ಚಂದ್ರು ರವರು* ಮಾತನಾಡಿ ಒಬಿಸಿ ಫೆಡರೇಷನ್ ಆಫ್ ಇಂಡಿಯಾವತಿಯಿಂದ ಹಿಂದುಳಿದ ವರ್ಗಗಳ ಪರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಸಾವಿರಾರು ಕೋಟಿ ವೆಚ್ಚದಲ್ಲಿ ಜಾತಿ ಜನಗಣತಿ ಮಾಡುತ್ತಿದೆ.

ಶೇಕಡ 56ರಷ್ಟು ಒಬಿಸಿ ಜನಸಂಖ್ಯೆ ಇದೆ. ರಾಜಕೀಯ, ಶೈಕ್ಷಣಿಕ, ಉದ್ಯೋಗದಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕು. ಅದರಿಂದ ಜಾತಿ ಜನ ಗಣತಿಯಲ್ಲಿ ಎಸ್.ಸಿ/ಎಸ್.ಟಿ ಕಾಲಂ ಇದೆ ಅದರೆ ಹಿಂದುಳಿದ ವರ್ಗಗಳಿಗೆ ಇಲ್ಲ.

ಹಿಂದುಳಿದ ವರ್ಗಗಳಿಗೆ ಜಾತಿ ನಮೂದಿಸುವುದರಿಂದ ಅವರಿಗೆ ಬೇಕಾದ ಸೌಲಭ್ಯ, ಸೌವಲತ್ತು ಪಡೆಯಲು  ಅನುಕೂಲವಾಗುತ್ತದೆ ಎಂದು ಹೇಳಿದರು.

*ಜೆ.ಎಂಜೇರಪ್ಪರವರು* ಮಾತನಾಡಿ ದೇಶದಲ್ಲಿ ಹಿಂದುಳಿದ ವರ್ಗ ಸಮುದಾಯದವರ ಜನಸಂಖ್ಯೆ 80ಕೋಟಿ ಇದೆ. ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಆರ್ಥಿಕವಾಗಿ ಹಿಂದುಳಿದ ವರ್ಗದವರು ಮುಂದೆ ಬರಲು ಜಾತಿಗಣತಿ ಕಾಲಂ ನಲ್ಲಿ ಹಿಂದುಳಿದ ವರ್ಗದ ಕಾಲಂ ಬರಬೇಕು ಎಂದು ಸುಪ್ರಿಂಕೋರ್ಟ್ ನಲ್ಲಿ ಕೇಸ್ ದಾಖಲಿಸಿ ಇದೀಗ ತೀರ್ಪು ಬಂದಿದೆ ಕಾಲಂ ನಮೂದಿಸಬೇಕು ಎಂದು ಇದರಿಂದ ಹಿಂದುಳಿದ ವರ್ಗಕ್ಕೆ ಅನುೂಲವಾಗಲಿದೆ.

ತುಳಿತಕ್ಕೆ ಒಳಗಾದ ಸಮಾಜ ಹಿಂದುಳಿದ ವರ್ಗಕ್ಕೆ ನ್ಯಾಯ ಸಿಗಬೇಕು-ಸುಪ್ರಿಂ ಕೋರ್ಟ್ ಆದೇಶ ಪಾಲನೆ ಮಾಡಿ ಜಾತಿ ಜನಗಣತಿ ಕಾಲಂನಲ್ಲಿ ಹಿಂದುಳಿದ ವರ್ಗ ನಮೂದಿಸಬೇಕು ಎಂದು ನಮ್ಮ ಒತ್ತಾಯ.

*ನಾರಾಯಣ ತೋಸುರು* ರವರು ಮಾತನಾಡಿ ಜಾತಿ ಜನಗಣತಿಯಲ್ಲಿ ಒಬಿಸಿ ಕಾಲಂ ನಮೂದನೆಯಿಂದ ಶೈಕ್ಷಣಿಕ, ಉದ್ಯೋಗ, ರಾಜಕೀಯ, ಆರ್ಥಿಕವಾಗಿ ಹಿಂದುಳಿದ ವರ್ಗದ ಸಮುದಾಯದವರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಒಬಿಸಿ ಮುಖಂಡರುಗಳಾದ ಬಿ.ಎಂ.ಪವನ್ ಸಿಂಗ್ , ಶಿವಪ್ಪ ಲಮಾಣಿ, ಉಮೇಶ್ ಬಾಬು, ದೇವಿಪೂತೂರಿ, ವಿಜಿಆರ್ ನಾರಗೋನಿ, ರೂಪಕುಮಾರ್, ಡಾ.ಮಹಾಲಕ್ಷ್ಮಿ, ಡಾ.ಧನಯ್ ಕುಮಾರ್, ಪ್ರಪ್ರುಲ್ಲ ಶ್ರೀನಿವಾಸ್, ಡಾ.ರವೀಂದ್ರನವಿಲೆ, ರಾಜೇಶ್ ರಾಂಪುರೆ, ಡಿ.ವಿ.ಹಾಲಪ್ಪ, ವೆಂಕಟೇಶ್, ನಾಗೇಶ್ ಟಿ.ಬಿ, ಸೋಮಶೇಖರ್, ರಾವುತಾರ್ ರವರು ಭಾಗವಹಿಸಿದ್ದರು.

Comments

Popular posts from this blog

ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸುವರ್ಣ ಮಹೋತ್ಸವ

ಕಾರ್ಮಿಕ ಬಂಧುಗಳನ್ನು ರದ್ದು ಮಾಡಿರುವ ಪ್ರಸ್ತಾವನೆಯನ್ನು ಹಿಂಪಡೆದು ಕಾರ್ಮಿಕ ಬಂಧುಗಳ ಕೆಲಸವನ್ನು ಮುಂದುವರಿಸುವ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲಾಯಿತು