ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ *ಅಲೆಮಾರಿಗಳ ವಿಮೋಚನಾ ದಿನಾಚರಣೆ* ಕಾರ್ಯಕ್ರಮದ ನಿರ್ಣಯಗಳು
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ *ಅಲೆಮಾರಿಗಳ ವಿಮೋಚನಾ ದಿನಾಚರಣೆ* ಕಾರ್ಯಕ್ರಮದ ನಿರ್ಣಯಗಳು ೧. ಅಲೆಮಾರಿ ಸಮುದಾಯಗಳ ಇತಿಹಾಸ, ಅಸ್ಮಿತೆ, ಘನತೆ ಮತ್ತು ಪ್ರಗತಿಯ ದೃಷ್ಟಿಯಿಂದ ಆಗಸ್ಟ್ 31 ರಂದು "ಅಲೆಮಾರಿಗಳ ವಿಮೋಚನಾ ದಿನಾಚರಣೆ" ಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು. ಮುಂದಿನ ವರ್ಷ ರಾಜ್ಯ ಸರ್ಕಾರವೇ ಆಚರಣೆ ಮಾಡಬೇಕು. ೨. ಅಲೆಮಾರಿ ಸಮುದಾಯಗಳ ಮಾನವ ಹಕ್ಕುಗಳ ದಮನ ಮಾಡಲು ದುರ್ಬಳಕೆ ಆಗುತ್ತಿರುವ Habitual offenders act-1952 ಅನ್ನು ತಿದ್ದುಪಡಿ ಮಾಡಬೇಕು. ೩. ವಿಮುಕ್ತ ಅಲೆಮಾರಿ ಸಮುದಾಯಗಳ ಶಿಕ್ಷಣ, ಉದ್ಯೋಗ ಮತ್ತು ಅರ್ಥಿಕ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ *ವಿಮುಕ್ತ ಅಲೆಮಾರಿಗಳ ಶಾಶ್ವತ ಆಯೋಗ ಸ್ಥಾಪನೆ* ಮಾಡಬೇಕು. ಕೇಂದ್ರ ರಾಜ್ಯ ಸರ್ಕಾರಗಳು ಈ ಸಮುದಾಯಗಳಿಗೆ ವಿಷೇಶ ಪ್ಯಾಕೇಜ್ ನೀಡಬೇಕು. ೪. ರಾಜ್ಯದ ವಿಮುಕ್ತ ಅಲೆಮಾರಿ ಸಮುದಾಯಗಳು SC, ST, OBC ಪಟ್ಟಿಗಳಲ್ಲಿ ಹಂಚಿಹೊಗಿದ್ದಾರೆ. ಈ ಸಮುದಾಯಗಳನ್ನು ಎಲ್ಲಾ ಹಂತದಲ್ಲಿ ಸಂಘಟಿಸಲು ಯೋಜನೆ ರೂಪಿಸಲಾಗುವುದು. ೫. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಿದೆ. ಬಂಜಾರ, ಬೋವಿ, ಕೊರಮ ಜಾತಿಗಳ ಒಳಗೊಂಡ ಪ್ರವರ್ಗ-ಸಿ ಗುಂಪಿನಲ್ಲಿ ಕೊರಚ ಸೇರಿದಂತೆ ಐವತ್ತಕ್ಕೂ ಹೆಚ್ಚು ಸೂಕ್ಷ್ಮ, ಅತಿ ಸೂಕ್ಷ್ಮ ಜಾತಿಗಳನ್ನು ಸೇರಿಸಿ ಶೇಕಡಾ 5 ರಷ್ಟು ಮೀಸಲಾತಿ ಹಂಚಿಕೆ ಮಾಡಿದೆ. ಸೂಕ್ಷ್ಮ ಸಮುದಾಯಗಳು ಸಿ ಗುಂಪಿನಲ್ಲಿ ಇರಲು ಇಚ್ಚ...