ದುರಂದ್ ಕಪ್‌ನಲ್ಲಿ ಮಿಂಚಿದಬೆಂಗಳೂರು ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಪ್ರತಿಭೆ ಡಾನಿಯಲ್

 ದುರಂದ್ ಕಪ್‌ನಲ್ಲಿ ಮಿಂಚಿದಬೆಂಗಳೂರು ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಪ್ರತಿಭೆ ಡಾನಿಯಲ್


ಬೆಂಗಳೂರು, ಆಗಸ್ಟ್ 6: ದುರಂದ್ ಕಪ್ ಭಾರತೀಯ ಫುಟ್ ಬಾಲ್ ನ ಮಹತ್ತರ ವೇದಿಕೆಯಾಗಿದ್ದು, ಅನೇಕ


ಭವಿಷ್ಯದ ತಾರೆಗಳು ತಮ್ಮ ಪ್ರತಿಭೆಯನ್ನು ಮಿಂಚಿಸಿ ಬಳಿಕ ಯಶಸ್ವಿ ವೃತ್ತಿಪಥ ಕಟ್ಟಿಕೊಂಡಿದ್ದಾರೆ. ಈ ಐಕಾನಿಕ್ ಟೂರ್ನಿಯಲ್ಲೇ ಸುನಿಲ್ ಕ್ಷೇತ್ರಿ ಮೊದಲ ಬಾರಿಗೆ ಗಮನ ಸೆಳೆದಿದ್ದರು. ಇಂಡಿಯನ್ ಆಯಿಲ್ ದುರಂದ್ ಕಪ್‌ 134ನೇ ಆವೃತ್ತಿಯಲ್ಲಿ ಮಕಾಯುಮ್ ಡಾನಿಯಲ್ ತಮ್ಮ ಚೊಚ್ಚಲ ಪ್ರದರ್ಶನದಲ್ಲಿ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಪರ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.


ಇಂಡಿಯನ್ ಏರ್ ಫೋರ್ಸ್ ಎಫ್ ಟಿ ವಿರುದ್ಧದ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿ ತಂಡವನ್ನು 3-3 ಕಡೆಗೆ ತಲುಪಿಸಿದರು. ಡಾನಿಯಲ್ ತಮ್ಮ ಫುಟ್ ಬಾಲ್ ತರಬೇತಿಯನ್ನು ISL ಕ್ಲಬ್ ಚೆನ್ನೈಯನ್ ಯು-17 ಮತ್ತು ರಿಸರ್ವ್ ತಂಡಗಳಲ್ಲಿ ಶುರುಮಾಡಿ, ಬಳಿಕ ಬೆಂಗಳೂರಿನ ಸೌತ್ ಯುನೈಟೆಡ್ ಎಫ್ ಸಿಗೆ ಸೇರ್ಪಡೆಯಾದರು.


ಈ ಬಗ್ಗೆ ಮಾತನಾಡಿದ ಡಾನಿಯಲ್" ದುರಂದ್ ಕಪ್ ನಲ್ಲಿ ಆಟವಾಡುವುದು ನನ್ನ ಕನಸಾಗಿತ್ತು ಎಂದರು. ನಾನು ನನ್ನ ಸಹೋದರರೊಂದಿಗೆ ಮೋಜಿಗಾಗಿ ಫುಟ್ ಬಾಲ್ ಆಡಲು ಪ್ರಾರಂಭಿಸಿದೆ. ಬಳಿಕ ನನಗೆ ಆಸಕ್ತಿ ಬಂತು ಆದರೆ ಆರಂಭದಲ್ಲಿ ನನಗೆ ಯಾವುದೇ ಬೆಂಬಲವಿರಲಿಲ್ಲ ಜೊತೆಗೆ ನನ್ನ ತಂದೆ ಕೂಡ ನಾನು ಫುಟ್ ಬಾಲ್ ಆಡುವುದು ಇಷ್ಟವಿರಲಿಲ್ಲ. ಪ್ಯೂಚರ್ ಫುಟ್ ಬಾಲ್ ಕೋಚಿಂಗ್ ಸೆಂಟರ್ ಅಂಗ್ತಾ (FFCC Angtha)ಗೆ ಆಯ್ಕೆಯಾದಾಗ ಎಲ್ಲರು ಸಂತಸ ವ್ಯಕ್ತಪಡಿಸಿದರು.ಈಗ ನನ್ನ ಪೋಷಕರು ನನ್ನ ಆಟವನ್ನು ನೋಡಿಹೆಮ್ಮೆಪಡುತ್ತಿದ್ದಾರೆ ಎಂದರು.


ಡಾನಿಯಲ್ ಮಣಿಪುರ ಸ್ಟೇಟ್ ಲೀಗ್ ನ ಈಸ್ಟರ್ನ್ ಸ್ಪೋರ್ಟಿಂಗ್ ಯೂನಿಯನ್ ತಂಡಕ್ಕೂ ಆಡಿದ್ದು, ಹಾಗೆಯೇ ಭಾರತದ ಅಂಡರ್ 19 ಸ್ಯಾಫ್‌ ಚಾಂಪಿಯನ್ ಶಿಪ್ ಗಾಗಿ ಕೂಡ ಆಯ್ಕೆಯಾಗಿದ್ದರು.


ಫುಟ್ ಬಾಲ್ ಕ್ಷೇತ್ರದಲ್ಲಿ ಭಾರತವನ್ನು ಪ್ರತಿನಿಧಿಸಬೇಕು ಎಂಬುದು ನನ್ನ ಕನಸು ಹಾಗು ನಾನು ಭಾರತೀಯ ಫುಟ್ ಬಾಲ್ ನಲೆಜೆಂಡ್ ಆಗಬೇಕೆಂಬುದು ನನ್ನ ಗುರಿ ಎಂದರು.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims