ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರುಗಳ ಹಲವಾರು ಸಮಸ್ಯೆಗಳ ಬಗ್ಗೆ

 ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರುಗಳ ಹಲವಾರು ಸಮಸ್ಯೆಗಳ ಬಗ್ಗೆ 

 ಸನ್ಮಾನ್ಯ ಶ್ರೀ ಕೆ. ಜೆ. ಜಾರ್ಜ್ ರವರಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: ಕರಾಅಪವಿಗುಸಂ/ಕೇಂದ್ರ ಸಮಿತಿ/389/2024-25 2: 14.03.2025.

ಮಾನ್ಯ ವ್ಯವಸ್ಥಾಪಕರು ಬೆ.ವಿ.ಕಂ ರವರಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: ಕರಾಅಪವಿಗುಸಂ/ಕೇಂದ್ರ ಸಮಿತಿ/01/2025-26 ໖: 08.04.2025.


ಅಪರ ಮುಖ್ಯ ಕಾರ್ಯದರ್ಶಿ ರವರಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: ಕರಾಅಪವಿಗುಸಂ/ಕೇಂದ್ರ ಸಮಿತಿ/05/2025-26 2: 17.04.2025.

ತಾಂತ್ರಿಕ ನಿರ್ದೇಶಕರು ಬೆ.ವಿ.ಕಂ ರವರಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: ಕರಾಅಪವಿಗುಸಂ/ಕೇಂದ್ರ ಸಮಿತಿ/10/2025-26 2: 25.04.20

. ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: ಕರಾಅಪವಿಗುಸಂ/ಕೇಂದ್ರ ಸಮಿತಿ/13/2025-26 2: 25.04.2025.

ಸನ್ಮಾನ್ಯ ಉಪ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: ಕರಾಅಪವಿಗುಸಂ/ಕೇಂದ್ರ ಸಮಿತಿ/12/2025-26 2: 25.04.2025.

ಕಾರ್ಯದರ್ಶಿ, ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ ರವರಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: 2/ 3/421/2024-25 2: 20.03.2025

ನಮ್ಮ ಸಂಘದ ವತಿಯಿಂದ ಬೇಡಿಕೆಗಳು :-

 ಘನ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ: 14604/2024 ಮತ್ತು 14605/2024 ໖໐: 17.12.2024 ໘ ໙ 09.04.2025 ರ ಒಳಗಾಗಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ವಿವಿಧ ಹಂತಗಳಲ್ಲಿ ನಿರ್ಮಾಣ ಹಂತದಲ್ಲಿರುವ / ಮುಗಿದಿರುವ ಕಟ್ಟಡಗಳಿಗೆ ಪೂರ್ಣ ಪ್ರಮಾಣ ಪತ್ರ /ಸ್ವಾಧೀನಾನುಭವ ಪತ್ರಕ್ಕೆ ವಿನಾಯಿತಿ ನೀಡುವ ಬಗ್ಗೆ,

ಈಗಾಗಲೇ ಎಸ್ಕಾಂಗಳಲ್ಲಿ ಬೃಹತ್ ಟೆಂಡರ್‌ಗಳನ್ನು ಕರೆದಿದ್ದು, ಸದರಿ ಟೆಂಡರ್‌ಗಳನ್ನು ರದ್ದುಮಾಡಿ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕೆಂದು ಮಾನ್ಯ ಇಂಧನ ಸಚಿವರಿಗೆ ಮನವಿ ನೀಡಿರುತ್ತೇವೆ. ಮಾನ್ಯ ಇಂಧನ ಸಚಿವರು, ಇಂಧನ ಇಲಾಖೆಯ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶ ಮಾಡಿದ್ದು, ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳನ್ನು ಕರೆದು ಚರ್ಚಿಸಿ, ಸ್ಥಳೀಯವಾಗಿ ಯಾವ ಯಾವ ಕಾಮಗಾರಿಗಳನ್ನು ನೀಡಬಹುದೆಂದು ಚರ್ಚಿಸಿ 5 ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡಿದ ನಂತರ ಟೆಂಡರ್ ಪ್ರಕ್ರಿಯೆಗಳ ಚರ್ಚೆ ಮಾಡಲು ತಿಳಿಸಿರುತ್ತಾರೆ. ಆದರೆ ಇದುವರೆಗೂ ಯಾವುದೇ ಸಭೆ ನಡೆದಿರುವುದಿಲ್ಲ, ಕೂಡಲೇ ಸಭೆ ಕರೆದು 5 ಕಂಪನಿಯ ನಿರ್ದೇಶಕರಿಗೆ ಸ್ಥಳೀಯವಾಗಿ 1 ರಿಂದ 5 ಲಕ್ಷಗಳವರೆಗೆ ತುಂಡು ಗುತ್ತಿಗೆಯನ್ನು ನೀಡುವ ಬಗ್ಗೆ.

2012 ರ ಹಿಂದೆ ಎರಡನೇ ದರ್ಜೆ ಪರವಾನಗಿ ವಿದ್ಯುತ್ ಗುತ್ತಿಗೆದಾರರಿಗೆ ಒಂದನೇ ದರ್ಜೆ ಪರವಾನಗಿ ಪಡೆಯಲು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಗೆ ವಿನಾಯಿತಿ ನೀಡಿ ಅನುಭವದ ಆಧಾರದ ಮೇಲೆ ಪ್ರಥಮ ದರ್ಜೆ ವಿದ್ಯುತ್ ಪರವಾನಗಿ ನೀಡುವ ಬಗ್ಗೆ.

66/11ಕೆವಿ ಹಾಗೂ 110/11 ವಿದ್ಯುತ್ ವಿತರಣಾ ಕೇಂದ್ರಗಳ ಪಾಳಿ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸಲು ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಿಗೆ ಅನುಮತಿಯನ್ನು ನೀಡುವ ಬಗ್ಗೆ.

 2 ಮೆಗಾ ವ್ಯಾಟ್ ಹಾಗೂ ಮತ್ತು ಅದಕ್ಕಿಂತ ಹೆಚ್ಚು ಮೆಗಾ ವ್ಯಾಟ್ ಸಂಪರ್ಕ ಪಡೆಯುವಾಗ ವಿಳಂಭವಾಗುತ್ತಿರುವ ಬಗ್ಗೆ.

ಎಸ್ಕಾಂಗಳಲ್ಲಿ ವಿದ್ಯುತ್ ಗುತ್ತಿಗೆದಾರರು ಕೂಲಿ ಕೆಲಸಗಳನ್ನು (Labour Award) ನಿರ್ವಹಿಸುವಾಗ ನೌಕರರುಗಳಿಗೆ ವಿದ್ಯುತ್ ಅವಗಡಗಳಾದಂತಹ ಸಂಧರ್ಭದಲ್ಲಿ ಅಪಘಾತವಾದ / ಮರಣವನ್ನು ಹೊಂದಿದ ಕಾರ್ಮಿಕರಿಗೆ ಕಂಪನಿ ವತಿಯಿಂದ (ಎಸ್ಕಾಂ) ಪರಿಹಾರವನ್ನು ನೀಡುವ ಬಗ್ಗೆ.

ಸರ್ಕಾರಿ ಆದೇಶದ ಸಂಖ್ಯೆ: ಎನರ್ಜಿ/107/ವಿಎಸ್‌ಸಿ/2025 ಬೆಂಗಳೂರು ದಿನಾಂಕ: 15.04.2025ರಂದು ಹೊರಡಿಸಿರುವ ಆದೇಶದಲ್ಲಿ ನವೀಕೃತ ಶೀಘ್ರ ವಿದ್ಯುತ್ ಯೋಜನೆ ದಿನಾಂಕ: 15.04.2025 ರಂದು ಜಾರಿಯಾಗಿದ್ದು, ಸದರಿ ಯೋಜನೆಯಡಿಯಲ್ಲಿ ಹಲವಾರು ಗ್ರಾಹಕರಿಗೆ ಅನುಕೂಲವಾಗುತ್ತಿದೆ. ಅದಕ್ಕೆ ಸಂಘದ ಪರವಾಗಿ ಸ್ವಾಗತಾರ್ಹ.

ಆದರೆ ದಿನಾಂಕ: 15.04.2025 ರ ಹಿಂದೆ 2 ಎಂ.ಎಂ.ಡಿ ಪಾವತಿ ಮಾಡಿ ವಿದ್ಯುತ್ ಸಂಪರ್ಕ ಮಾಡಿರುವ ಸ್ಥಾವರಗಳಿಗೂ ರೂ. 15.000/- ಸಾವಿರ ರೂಗಳ ದಂಡ ಶುಲ್ಕಗಳ ಪಾವತಿ ಮಾಡಬೇಕೆಂದು ಎಸ್ಕಾಂ ವ್ಯಾಪ್ತಿಯಲ್ಲಿ ರೈತರಿಗೆ ನೋಟೀಸ್ ಜಾರಿ ಮಾಡಿರುತ್ತಾರೆ.

ಸದರಿ ನೋಟೀಸ್‌ಗಳಿಗೆ ಅದರಿಂದ ವಿನಾಯಿತಿ ಕೊಟ್ಟು ದಿ: 15.04.2025 ರ ನಂತರ ಯಾರು ಕೃಷಿ ವಿದ್ಯುತ್ ಸಂಪರ್ಕಕ್ಕೆ ಪಡೆಯುತ್ತಾರೋ ಅಂತಹವರಿಗೆ ಈಗಾಗಲೇ ಆದೇಶದಂತೆ ರೂ. 15,000/- ಹಣ ಪಾವತಿಸಲು ಸಿದ್ಧರಿದ್ದಾರೆ. ಆದರೆ ಈಗಾಗಲೇ ಕೃಷಿ ವಿದ್ಯುತ್ ಸಂಪರ್ಕ ಪಡೆಯಲು ನೋಂದಣಿಯಾಗಿರುವ/ ಮಂಜೂರಾತಿ / ಕಾರ್ಯಾದೇಶ ಆಗಿರುವ ಕೃಷಿ ವಿದ್ಯುತ್ ಸಂಪರ್ಕಕ್ಕೆ ವಿನಾಯಿತಿ ನೀಡಬೇಕಾಗಿ ತಮ್ಮಲ್ಲಿ ಮನವಿ.

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ದಿನಾಂಕ: 18.03.2025 ರಂದು ನಡೆದ ಅನಿರ್ಧಿಷ್ಟವಧಿ ಕಾಲದ ಮೌನ ಪ್ರತಿಭನಟನೆಗೆ ಸ್ಪಂದಿಸಿ ಸನ್ಮಾನ್ಯ ಇಂಧನ ಸಚಿವರ ಗೃಹ ಕಛೇರಿಯಲ್ಲಿ ಮಾನ್ಯ ಇಂಧನ ಕಾರ್ಯದರ್ಶಿಗಳು, ಮಾನ್ಯ ವ್ಯವಸ್ಥಾಪಕ ನಿರ್ದೇಶಕರುಗಳನ್ನು ಒಳಗೊಂಡ ಸಭೆ ಕರೆದು, ಈ ಮೇಲಿನ ಬೇಡಿಕೆಗಳಲ್ಲಿ ಕ್ರಮ ಸಂಖ್ಯೆ: (3) (4) (5) ಮತ್ತು (6) ಗಳನ್ನು ಈಡೇರಿಸುವುದಾಗಿ ಆಶ್ವಾಸನೆಯನ್ನು ನೀಡಿರುತ್ತಾರೆ ಆದರೆ ಇದುವರೆಗೂ ಬೇಡಿಕೆಗಳು ಈಡೇರಿರುವುದಿಲ್ಲ ಎಂದು ತಿಳಿಸಲು ವಿಶಾದಿಸುತ್ತೇವೆ.

ಈ ಮೇಲಿನ ಎಲ್ಲಾ ಸಮಸ್ಯೆಗಳು ಬಗೆಹರೆಯದಿದ್ದರೆ ಕರ್ನಾಟಕ ರಾಜ್ಯದ ಎಲ್ಲಾ ವಿದ್ಯುತ್ ಗುತ್ತಿಗೆದಾರರು, ವಿದ್ಯುತ್ ಗ್ರಾಹಕರು, ಕರ್ನಾಟಕ ಪರ ಹೋರಾಟಗಾರರು, ಸಾಹಿತಿಗಳು, ರೈತರು ಸೇರಿ ದಿನಾಂಕ: 20.08.2025ರಂದು ಉಫ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಈ ಮೂಲಕ ತಿಳಿಯಪಡಿಸುತ್ತೇವೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims