ಸಾಮಾಜಿಕ ನ್ಯಾಯದಡಿಯಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸೂಕ್ತ ಪ್ರಾತಿನಿದ್ಯವನ್ನು ಕಲ್ಪಿಸಿಕೊಡುವ ಮೀಸಲಾತಿ.
ಸಾಮಾಜಿಕ ನ್ಯಾಯದಡಿಯಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸೂಕ್ತ ಪ್ರಾತಿನಿದ್ಯವನ್ನು ಕಲ್ಪಿಸಿಕೊಡುವ ಮೀಸಲಾತಿ.
ಈ ಮೂಲಕ G ಸಮುದಾಯಗಳನ್ನು ಸಾಮಾಜಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ, ಸಬಲಿಕರಣಗೊಳಿಸುವ ಪರಿಣಾಮಗಾರಿ ಯೋಜನೆ ಆಗಿದೆ. ಇದು ಒಳಮೀಸಲಾತಿಗೂ ಅನ್ವಯಿಸುತ್ತದೆ. ಪರಿಶಿಷ್ಟಜಾತಿಗೆ ಒಳಮೀಲಾತಿ ಹಂಚಿಕೆ : 19.08.202550 ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ನೆತೃತ್ವದ ರಾಜ್ಯ ಸಚಿವ ಸಂಪುಟಸಭೆ ಅತಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಮುಖ್ಯಮಂತ್ರಿಗಳ ಅಧ್ಯಕ್ಷೆಯಲ್ಲಿ ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ಾಸ್ ನೇತೃತ್ವದ ಏಕಸದಸ್ಯ ಆಯೋಗ ಸಲ್ಲಿಸಿದ ವರದಿ ಕುರಿತು ಚರ್ಚಿಸಿ ಒಳಮೀಸಲಾತಿ ಬಗ್ಗೆ ತೀರ್ಮಾನ ತೆಗೆದುಕೊಂಡಿರುವುದು ನಮ್ಮೆಲ್ಲರಿಗೂ ಸಂತೋಷ ಉಂಟುಮಾಡಿದೆ.
ಪರಿಶಿಷ್ಟ ಸಮುದಾಯಗಳ ಮೂರು ದಶಕಗಳ ಕಾಲದ ಬೇಡಿಕೆ ಹಾಗೂ ಹೋರಾಟ ಕೊನೆಗೂ ಗೆಲವು ಕಂಡಿದೆ ಒಳಮೀಸಲಾತಿ ಹಂಚಿಕೆಯ ಮಹತ್ತರ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟಕೈಗೊಂಡಿದೆ. ಪರಿಶಿಷ್ಟ ಜಾತಿಗಳನ್ನು ಮೂರು ವರ್ಗಿಕರಣ ಮಾಡಿ ಶೇ 17%ರಷ್ಟು ಎಸ್.ಸಿ ಮೀಸಲು ಪ್ರಮಾಣವನ್ನು ಬಲಗೈ ಹೊಲೆಯ/ಛಲವಾದಿಗೆ ಶೇ-6% ಹಾಗೂ ಎಡಗೈ ಮಾದಿಗ ಜನಾಂಗಕ್ಕೆ ಶೇ-6% ಹಾಗೂ ಸ್ಪಷ್ಟ ಜಾತಿಗಳಿಗೆ ಶೇ-5% ಒಳಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ.
ಇಂತಹ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡಿರುವ ಸಾಮಾಜಿಕ ನ್ಯಾಯದ ಹರಿಕಾರ, ರಾಜಕೀಯ ಮುತ್ಸದ್ದಿ, ಬದ್ಧತೆ ಹೊಂದಿದ ಬಡವರ ಬಂಧು ಶ್ರೀ.ಸಿದ್ದರಾಮಯ್ಯ. ಮುಖ್ಯಮಂತ್ರಿಗಳಿಗೂ ಹಾಗೂ ಶ್ರೀ.ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಗಳಿಗೂ ಹಾಗೂ ಸಂಪುಟ ದರ್ಜೆಯ ಸಚಿವರಾದ ಸ್ವಾಭಿಮಾನಿ, ಡಾ.ಬಿ.ಆರ್.ಅಂಬೇಡ್ಕರವರ ಅನುಯಾಯಿಯಾದ ಡಾ.ಹೆಚ್.ಸಿ.ಮಹಾದೇವ್ ರವರಿಗೆ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪೂರ, ಶಿವರಾಜ ತಂಗಡಗಿ ಹಾಗೂ ಸಭೆಯಲ್ಲಿ ಹಾಜರಿದ್ದ ಎಲ್ಲಾ ಸಚಿವರಿಗೂ ನಮ್ಮ ಸಮಿತಿಯಿಂದ ಮತ್ತು ನಾಡಿನ ಎಲ್ಲಾ ಜನತೆಯ ಪರವಾಗಿ ಹೃದಯಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ.
ಮಾರುತಿ ಬೌಧೆ ರಾಜ್ಯ ಸಂಘಟನಾ ಸಂಚಾಲಕರು ಬೀದರ್
ಫೈ.ಸಿ.ಮಯೂರ್ ಜಿಲ್ಲಾ ಸಂ.ಸಂಚಾಲಕರು ವಿಜಯಪುರ
ಶ್ರೀ.ಅಣ್ಣಯ್ಯ ರಾಜ್ಯ ಸಂಚಾಲಕರು ದ.ಸಂ.ಸ.,ಕರ್ನಾಟಕ, ಬೆಂಗಳೂರು
ಮಲ್ಲೇಶಿ ಚಿಂಚನಳ್ಳಿ ಜಿಲ್ಲಾ ಸಂಚಾಲಕರು ಮೈಸೂರು
ಡಾ.ಡಿ.ಜಿ.ಸಾಗರ್ ರಾಜ್ಯ ಸಂಚಾಲಕರು, ಕೆ.ಆರ್.ಡಿ.ಎಸ್.ಎಸ್..ಬೆಂಗಳೂರು
ಮಂಜುನಾಥ ಅಣ್ಣಯ್ಯ ವಿಭಾಗೀಯ ಸಂಚಾಲಕರು, ಬೆಂಗಳೂರು

Comments
Post a Comment