ದಿನಾಂಕ: 20-08-2025ರಂದು ರಾಜ್ಯ ಸಕ್ಕರೆ ಕಾರ್ಖಾನೆ ಮಾಲೀಕರ ಕಾರ್ಮಿಕ ವಿರೋಧಿ ಧೋರಣೆ ವಿರುದ್ಧ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ
ದಿನಾಂಕ: 20-08-2025ರಂದು ರಾಜ್ಯ ಸಕ್ಕರೆ ಕಾರ್ಖಾನೆ ಮಾಲೀಕರ ಕಾರ್ಮಿಕ ವಿರೋಧಿ ಧೋರಣೆ ವಿರುದ್ಧ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ
ಉಲ್ಲೇಖ: 1) ದಿನಾಂಕ:20-02-2025ರ ತ್ರಿಪಕ್ಷೀಯ ಸಕ್ಕರೆ ಬೇತನ ಸಮಿತಿಯ ಪ್ರಥಮ ಸಭೆ ವರದಿ.
20 02 05-2007 2008 ಸಭೆಯ ವರದಿ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಈ ಮೂಲಕ ತಮ್ಮ ಅವಗಾಹನೆಗೆ ತರಲಿಚ್ಛಿಸುವುದೇನೆಂದರೆ, ರಾಜ್ಯ ಸಕ್ಕರೆ ಕಾರ್ಮಿಕರಿಗೆ 7ನೇ ತ್ರಿಪಕ್ಷೀಯ ಸಕ್ಕರೆ ವೇತನ ಪರಿಷ್ಕರಣೆ ಮಾಡಿ ಹೊರಡಿಸಿದ್ದ ಸರ್ಕಾರಿ ಆದೇಶದ ವಿರುದ್ಧ ಕೆಲವು ಕಾರ್ಖಾನೆ ಮಾಲೀಕರು ರಾಜ್ಯದ ಉಚ್ಚ ನ್ಯಾಯಾಲಯದಿಂದ ಮಧ್ಯಂತರ ಆದೇಶವನ್ನು ಪಡೆಯುವ ಮೂಲಕ ಕಾರ್ಮಿಕ ವಿರೋಧಿ ನೀತಿ ಹೊಂದಿರುವುದು ಸರಿಯಷ್ಟೇ. ಈ ಬಗ್ಗೆ ಮೇಲ್ಕಂಡ ಉಲ್ಲೇಖ (1)ರಂತೆ ತಾವುಗಳು 8ನೇ ತ್ರಿಪಕ್ಷೀಯ ವೇತನ ಸಮಿತಿ ಸಭೆ ನಡೆಸಿ ಕೈಗೊಂಡ ನಿರ್ಣಯದಂತೆ ಉಲ್ಲೇಖ (2)ರಲ್ಲಿ ಮಾನ್ಯ ಕಾರ್ಮಿಕ ಆಯುಕ್ತರವರ ಅಧ್ಯಕ್ಷತೆಯಲ್ಲಿ ಕೈಗೊಂಡ ತೀರ್ಮಾನಗಳಿಂದ ಕೂಡ ಮಾಲೀಕ ವರ್ಗದವರು ಮೊಕದ್ದಮೆ ಹಿಂತೆಗೆದುಕೊಳ್ಳದೇ 7ನೇ ವೇತನ ಒಪ್ಪಂದ ಜಾರಿಗೊಳ್ಳದಂತೆ ಹಾಗೂ 8ನೇ ತ್ರಿಪಕ್ಷೀಯ ವೇತನ ಸಮಿತಿಯ ಸಭೆಗಳು ಕೂಡ ನಡೆಯದಂತೆ ಮಾಡಿ ಕಾರ್ಮಿಕರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ವೇತನ ಹೆಚ್ಚಳ ಮತ್ತು ಇತರೆ ಸೌಲಭ್ಯಗಳಿಂದ ವಂಚಿತರಾಗುವಂತೆ ಮಾಡಿದೆ.
8ನೇ ವೇತನ ಒಪ್ಪಂದದನ್ವಯ ದಿನಾಂಕ: 01-04-2022 ರಿಂದ ದಿನಾಂಕ: 31-03-2026ರ ವರೆಗಿನ ಅವಧಿ ಇನ್ನು ಕೆಲವೇ ತಿಂಗಳುಗಳಿದ್ದರೂ ಮಾಲೀಕ ವರ್ಗವಾಗಲೀ ಹಾಗೂ ಘನ ಸರ್ಕಾರವಾಗಲೀ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ.
ರಾಜ್ಯ ಸಕ್ಕರೆ ಕಾರ್ಖಾನೆಗಳ ಮಾಲೀಕರ ಕಾರ್ಮಿಕ ವಿರೋಧಿ ಧೋರಣೆ ಹಾಗೂ ಸರ್ಕಾರದ ಉದಾಸೀನತೆ ವಿರುದ್ಧ ದಿನಾಂಕ: 20-08-2025ನೇ ಬುಧವಾರ ಬೆಳಗ್ಗೆ 10-30 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯದ "ಸಕ್ಕರೆ ಕಾರ್ಮಿಕರ ಬೃಹತ್ ಸಮಾವೇಶ" ವನ್ನು ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ತಾವುಗಳು ದಯವಿಟ್ಟು ರಾಜ್ಯ ಸಕ್ಕರೆ ಕಾರ್ಖಾನೆಗಳ ಮಾಲೀಕರುಗಳು ಸರ್ಕಾರದ ಆದೇಶದ ವಿರುದ್ಧ ಹೂಡಿರುವ ಮೊಕದ್ದಮೆಯನ್ನು ಸ್ವತಃ ಅವರೇ
ಹಿಂತೆಗೆದುಕೊಳ್ಳುವಂತೆ ಮಾಡುವುದರ ಮೂಲಕ 7ನೇ ವೇತನ ಒಪ್ಪಂದದ ಆದೇಶ ಜಾರಿಗೊಳ್ಳುವಂತೆ ಹಾಗೂ 8ನೇ ತ್ರಿಪಕ್ಷೀಯ ಸಕ್ಕರೆ ವೇತನ ಸಮಿತಿ ಸಭೆಗಳು ಆದಷ್ಟು ಬೇಗ ನಡೆದು ಹೊಸ ವೇತನ ಒಪ್ಪಂದವೇರ್ಪಡಲು ಕ್ರಮ ಕೈಗೊಳ್ಳುವಂತೆ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಪ್ರಮುಖ ಬೇಡಿಕೆಗಳು
1) 7ನೇ ತ್ರಿಪಕ್ಷೀಯ ಸಕ್ಕರೆ ವೇತನ ಪರಿಷ್ಕರಣೆಯ ಸರ್ಕಾರಿ ಆದೇಶದ ವಿರುದ್ಧ ಘನ ನ್ಯಾಯಾಲಯದಲ್ಲಿ ರಾಜ್ಯದ 10 ಸಕ್ಕರೆ ಕಾರ್ಖಾನೆಗಳ ಮಾಲೀಕರು ಹೂಡಿರುವ ಮೊಕದ್ದಮೆಗಳನ್ನು ಕಾರ್ಮಿಕರ ಹಿತದೃಷ್ಟಿಯಿಂದ ಸ್ವತಃ ಅವರೇ ವಾಪಸ್ಸು ಪಡೆಯುವುದರ ಮೂಲಕ ಕಾನೂನಾತ್ಮಕ ಅಡಚಣೆಯನ್ನು ನಿವಾರಿಸಿ 7ನೇ ತ್ರಿಪಕ್ಷೀಯ ಸಕ್ಕರೆ ವೇತನ ಪರಿಷ್ಕರಣೆ ಆದೇಶವನ್ನು ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಜಾರಿಗೊಳ್ಳುವಂತೆ ಕ್ರಮಕೈಗೊಳ್ಳುವುದು.
2) 8ನೇ ತ್ರಿಪಕ್ಷೀಯ ಸಕ್ಕರೆ ವೇತನ ಒಪ್ಪಂದದ ಅವಧಿಯು ದಿನಾಂಕ 01-04-2022 ರಿಂದ ದಿನಾಂಕ: 31-03-2026ಕ್ಕೆ ಮುಕ್ತಾಯಗೊಳ್ಳಲಿದ್ದಾರೆ. ಈ ಬಗ್ಗೆ ಸಭೆಗಳು ನಡೆಯದೇ (ಕಾನೂನು ಸಮಸ್ಯೆಯಿಂದ) ಕಾಲ ವಿಳಂಬವಾಗಿರುವುದರಿಂದ ಆರ್ಥಿಕವಾಗಿ ತೊಂದರೆಗೊಳಗಾಗಿರುವ ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿನ ಎಲ್ಲಾ ವರ್ಗದ ಕಾರ್ಮಿಕರಿಗೆ ಮಧ್ಯಂತರ ಪರಿಹಾರವಾಗಿ ರೂ 5,000/- ಗಳನ್ನು ದಿನಾಂಕ: 01-01-2025 ರಿಂದಲೇ ಪೂರ್ವಾನ್ವಯವಾಗಿ ಈ ಕೂಡಲೇ ಪಾವತಿಸುವಂತೆ ಆದೇಶ ನೀಡುವುದು.
3) 8ನೇ ತ್ರಿಪಕ್ಷೀಯ ಸಕ್ಕರೆ ವೇತನ ಸಭೆಗಳನ್ನು ಆದಷ್ಟು ಬೇಗ ನಡೆಸಿ ದಿನಾಂಕ: 01-04-2022 00 : 31-03-20260 ដកដ ដ ថ ಪರಿಷ್ಕರಣೆ ಒಪ್ಪಂದವೇರ್ಪಡುವಂತೆ ಸೂಕ್ತ ಕ್ರಮ ವಹಿಸುವುದು.
4) ಹಿಂದಿನ ಎಲ್ಲಾ ತ್ರಿಪಕ್ಷೀಯ ವೇತನ ಒಪ್ಪಂದಗಳನ್ನು ಜಾರಿಗೊಳಿಸದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡು ಆದಷ್ಟು ಬೇಗ ಎಲ್ಲಾ ಒಪ್ಪಂದಗಳು ಅನುಷ್ಟಾನಗೊಳ್ಳುವಂತೆ ಕ್ರಮ ಕ್ರಮ ಕೈಗೊಳ್ಳಬೇಕು

Comments
Post a Comment