ಪಾಕೆಟ್ ಎಫ್ ಎಂ' ಸೌಂಡ್ ಆಫ್ ಕರೇಜ್' ಕಥೆಯಲ್ಲಿ ಮಿಂಚಿದಭಾರತದ ಮಹಿಳಾ ಐಸ್ ಹಾಕಿ ತಂಡ!
ಪಾಕೆಟ್ ಎಫ್ ಎಂ' ಸೌಂಡ್ ಆಫ್ ಕರೇಜ್' ಕಥೆಯಲ್ಲಿ ಮಿಂಚಿದಭಾರತದ ಮಹಿಳಾ ಐಸ್ ಹಾಕಿ ತಂಡ!
ಆಗಸ್ಟ್ 12, ಭಾರತ 2025: ಇಡೀ ಜಗತ್ತೇ ಶಬ್ದ ಗೊಂದಲಗಳಿಂದ ತುಂಬಿರೋವಾಗ, ವಿಶ್ವದ ಅತಿದೊಡ್ಡ ಆಡಿಯೋ ಸೀರೀಸ್ ಪ್ಲಾಟ್ ಫಾರ್ಮ್ ಆಗಿರುವ ಪಾಕೆಟ್ ಎಫ್ ಎಂ ಅರ್ಥಪೂರ್ಣ ಕಥೆಗಳ ಮೂಲಕ ಜನರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.
ಪಾಕೆಟ್ ಎಫ್ ಎಂನ ಇಂಡಿಯಾ, ಕುಚ್ ಅಚ್ಚಾ ಸುನೋ' ಅಭಿಯಾನವು ಭಾರತೀಯ ಮಹಿಳಾ ಐಸ್ ಹಾಕಿ ತಂಡದ ಅದ್ಭುತ ನೈಜ ಕಥೆಯನ್ನು ಎತ್ತಿ ಹಿಡಿಯಲಿದೆ. ಇಲ್ಲಿ ಕುಟುಂಬದ ವಿರೋಧ, ಸಮಾಜದ ಒತ್ತಡ ಮತ್ತು 'ಪುರುಷರ ಆಟ' ಎಂದು ಹಾಸ್ಯ ಟೀಕೆಗಳನ್ನು ಎದುರಿಸಿದ ಪ್ರತಿಯೊಬ್ಬ ಆಟಗಾರ್ತಿಯ ಕಥೆ ಇರಲಿದೆ. ಇದ್ಯಾವ ಟೀಕೆಗಳಿಗೆ ಬಗ್ಗದೇ ಭಾರತವನ್ನು ಪ್ರತಿನಿಧಿಸಿ ಏಷ್ಯಾಕಪ್ ನಲ್ಲಿ ಐತಿಹಾಸಿಕ ಕಂಚಿನ ಪದಕವನ್ನು ಗೆದ್ದರು.
ಲಡಾಖ್ ನ ಹಿಮ್ಮೆಟ್ಟಿದ ಸರೋವರಗಳಿಂದ ಅಂತರರಾಷ್ಟ್ರೀಯ ವೇದಿಕೆವರೆಗೆ ಅವರ ಅದ್ಭುತ ಪ್ರಯಾಣವನ್ನು ಈಗ ಪಾಕೆಟ್ ಎಫ್ ಎಂ ತನ್ನ 'ಇಂಡಿಯಾ, ಕುಚ್ ಅಚ್ಚಾ ಸುನೋ! ಅಭಿಯಾನದ ಭಾಗವಾಗಿ ಪ್ರಾರಂಭಿಸಿದ 'ಸೌಂಡ್ ಆಫ್ ಕರೇಜ್ ಎಂಬ ಬ್ರಾಂಡ್ ಫಿಲ್ಡ್ ನಲ್ಲಿಜೀವಂತವಾಗಿಸಿದೆ.
ಭಾರತ ಮಹಿಳಾ ಐಸ್ ಹಾಕಿ ತಂಡದ ನಾಯಕಿ ಟ್ಟೇವಾಂಗ್ ಚುಸ್ಕಿಟ್ ಹೇಳುವಂತೆ' ಐಸ್ ಹಾಕಿ ಕಡೆಗಿನ ನಮ್ಮ ಪ್ರಯಾಣ ಮನೆ ಮಂದಿಗೆಲ್ಲ ಸಂಶಯ ಹುಟ್ಟಿಸಿತ್ತು. ಸೌಂಡ್ ಆಫ್ ಕರೇಜ್ ನಮ್ಮ ಕಷ್ಟ, ಟೀಕೆಗಳ ಜೊತೆಗೆ ಸತ್ಯವನ್ನು ಕೂಡ ಪ್ರತಿಬಿಂಬಿಸುತ್ತದೆ ಎಂದರು.
ಐಸ್ ಹಾಕಿ ಅಸೋಸಿಯೇಷನ್ ಆಫ್ ಇಂಡಿಯಾನ ಪ್ರಧಾನ ಕಾರ್ಯದರ್ಶಿ ಮತ್ತು WHF ಏಷ್ಯಾ ಸಮಿತಿಯ ಸದಸ್ಯ ಹರ್ಜಿಂದರ್ ಸಿಂಗ್' ಜಿಂದಿ' ಮಾತನಾಡಿ ನಾವು ಕೇವಲ ಒಂದು ಪದಕ ಗೆದ್ದಿಲ್ಲ, ಎಲ್ಲ ಅಡೆತಡೆಗಳನ್ನು ಮೀರಿ ನಾವು ಉತ್ಸಾಹಕ್ಕೆ ಯಾವುದೇಗಡಿ ಇಲ್ಲವೆಂಬುದನ್ನು ಸಾಬೀತುಪಡಿಸಿದ್ದೇವೆ ಎಂದರು.
ಪಾಕೆಟ್ ಎಫ್ ಎಂನ ಬ್ರಾಂಡ್ ಮಾರ್ಕೆಟಿಂಗ್, ಸಂವಹನ ಮತ್ತು ಸಹಭಾಗಿತ್ವಗಳ ಎಸ್ ವಿಪಿ ಮತ್ತು ಮುಖ್ಯಸ್ಥ ವಿನೀತ್ ಸಿಂಗ್ ಮಾತನಾಡಿ 'ಸೌಂಡ್ ಆಫ್ ಕರೇಜ್ ಕೇವಲ ಒಂದು ಚಿತ್ರವಲ್ಲ, ಅಡೆತಡೆಗಳನ್ನು ಎದುರಿಸಿದ ಪ್ರತಿಯೊಬ್ಬ ಆಟಗಾರ್ತಿಯ ಕಥೆಯಾಗಿದೆ ಎಂದರು.
ಪದ್ಮಶ್ರೀ ಪುರಸ್ಕೃತ ಮೊರುಪ್ ನಾಮ್ಯಾಲ್ ಅವರು ಈ ವೀಡಿಯೋಗೆ ಧ್ವನಿ ನೀಡಿದ್ದಾರೆ. ಈ ಚಿತ್ರ ಕೇವಲ ಐಸ್ ಹಾಕಿಯ ಕುರಿತು ಮಾತ್ರವಲ್ಲ. ಇದು ತಮ್ಮದೇದಾರಿಯನ್ನು ಆಯ್ದ ಪ್ರತಿಯೊಬ್ಬ ಭಾರತೀಯಮಹಿಳೆಯಕುರಿತಾಗಿದೆ.
ಈ ಚಿತ್ರದಲ್ಲಿ ಭಾರತದ ಮಹಿಳಾ ಐಸ್ ಹಾಕಿ ತಂಡದ ಆಟಗಾರ್ತಿಯರು ಟ್ರೇವಾಂಗ್ ಚುಸ್ಕಿಟ್, ಸೋನಂ ಅಂಗೋ, ಸೋನಂ ಅಂಗೋ (ಕಾಂಜಿ), ಸ್ಕರ್ಮಾ ರಿಂಚೆನ್, ರಿಂಚೆನ್ ಡೋಲ್ಮಾ, ಶೆರಾಪ್ ಜಾಂಗೋ, ಪದ್ಮಾ ಚೊರೋಲ್, ರಿಗ್ನಿನ್ ಯಾಂಗೋಲ್, ಡೆಚೆನ್ ಡೋಲ್ಕರ್ ಮತ್ತು ಡಿಸ್ಕಿಟ್ ಸಿ ಅಂಗೋ ಇದ್ದಾರೆ.

Comments
Post a Comment