ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಕಾನೂನುನಾತ್ಮಕ ನಾಡದ್ವಜ’ಕೋರಿ ಆಗ್ರಹ
ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಕಾನೂನುನಾತ್ಮಕ ನಾಡದ್ವಜ’ಕೋರಿ ಆಗ್ರಹ 1. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ “ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಕಾನೂನುನಾತ್ಮಕ ನಾಡಧ್ವಜ” ವನ್ನು ಕೋರಿ ಈ ಹಿಂದೆ ಶ್ರೇಷ್ಠ ಬರಹಗಾರರಾದ ಶ್ರೀಯುತ.ಪಾಟಿಲ್ ಪುಟ್ಟಪ್ಪ ರವರು ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು ಹಾಗೂ ಬೆಳಗಾವಿಯ ಸಾಮಾಜಿಕ ಹೋರಾಟಗಾರರಾದ ಶ್ರೀಯುತ.ಭೀಮಪ್ಪ ಗಡಾದ್ ರವರು ಸಹ ರಾಜ್ಯ ಸರ್ಕಾರಕ್ಕೆ ಮನವಿಯನ್ನು ನೀಡಿ “ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ” ವನ್ನು ಕೋರಿ ಅನೇಕ : ಮನವಿಗಳನ್ನು ಸಲ್ಲಿಸುತ್ತಾ ಕಳೆದ 10 ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರವು ಈ ಕುರಿತಂತೆ ರಾಜ್ಯ ಸರ್ಕಾರವು ಕವಿಗಳು, ಹೋರಾಟಗಾರರನ್ನು ಒಳಗೊಂಡಂತೆ 9 ಜನ ತಜ್ಞರ ಸಮಿತಿ ರಚಿಸಿ, ಪ್ರತ್ಯೇಕ ಧ್ವಜ ಹೊಂದುವಂತೆ ಸಮಿತಿ ನೀಡಿದ್ದ ವರದಿಯ ಆದಾರದ ಮೇಲೆ ಅಂದಿನ ಸಚಿವ ಸಂಪುಟವು ಒಪ್ಪಿಗೆಯನ್ನು ಸೂಚಿಸಿತ್ತು ಹಾಗೂ ಅಂದಿನ ಕರ್ನಾಟಕ ಅಡ್ವಕೇಟ್ ಜನರಲ್ ಸಹ ಈ ಕುರಿತಂತೆ ಅಭಿಪ್ರಾಯವನ್ನು ಸಕಾರಾತ್ಮಕವಾಗಿ ಸೂಚಿಸಿರುತ್ತಾರೆ. 2. ತದನಂತರದಲ್ಲಿ ಅಂದಿನ ಮತ್ತು ಇಂದಿನ ಮುಖ್ಯ ಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ ರವರು 2018 ರಲ್ಲಿ ಸಮಿತಿಯ ಸಲಹೆ ಮೇರೆಗೆ ಪ್ರತ್ಯೇಕ ಧ್ವಜವನ್ನು ಅನಾವರಣಗೊಳಿಸಿದ್ದರು. ಆದರೆ ಅನಂತರ ಯಾವುದೇ ಬೆಳವಣಿಗೆಯಾಗದೇ ಇರುವುದರಿಂದ ಶ್ರೀ.ಬೀಮಪ್ಪ ...