ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ ‘ಸಂಸ್ಕೃತಿ ಸಂಗಮ’- 2024 ಪ್ರಶಸ್ತಿ ಪ್ರದಾನ ಸಮಾರಂಭ

 

ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ ‘ಸಂಸ್ಕೃತಿ ಸಂಗಮ’- 2024 ಪ್ರಶಸ್ತಿ ಪ್ರದಾನ ಸಮಾರ

ರಾಜ್ಯ ಸರ್ಕಾರದ ಹಲವಾರು ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ, ಸಹಕಾರ ಇಲಾಖೆಯ ಕಾರ್ಯದರ್ಶಿಯಾಗಿ ನಿವೃತ್ತನಾದ ನನಗೆ ಆಡಳಿತ ಅವಧಿಯಲ್ಲಿ ನನ್ನ ಆಡಳಿತ ನಿರ್ವಹಣೆಯಲ್ಲಿ ಮತ್ತು ಮಾನವೀಯ ಸಂಬಂಧಗಳಲ್ಲಿ ಮಾರ್ಗದರ್ಶನ ನೀಡಿದ್ದು ದಾರ್ಶನಿಕರ ವಚನ ಸಾಹಿತ್ಯ, ದಾಸ ಸಾಹಿತ್ಯ ಮತ್ತು ಜಾನಪದ ಸಾಹಿತ್ಯ. ವಿಶೇಷವಾಗಿ ಆಡಳಿತ ಅವಧಿಯಲ್ಲಿ ನಾನು ಹೆಚ್ಚು ಪ್ರಭಾವಿತನಾಗಿದ್ದು ವಚನ ಸಾಹಿತ್ಯದ ಆದರ್ಶ ಮೌಲ್ಯಗಳಿಂದ. ಈಗಾಗಲೇ ಕಳೆದ 28 ವರ್ಷಗಳ ಹಿಂದೆ ಬಸವ ವೇದಿಕೆಯನ್ನು ಸ್ಥಾಪಿಸಿ ಈ ಸಂಸ್ಥೆಯ ಆಶ್ರಯದಲ್ಲಿ ಶರಣರ ಆದರ್ಶ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಜನಮುಖಿ ಸೇವೆ ಸಲ್ಲಿಸಿದ ಹಿರಿಯ ಸಾಧಕರುಗಳಿಗೆ ಪ್ರತಿಷ್ಠಿತ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿಗಳನ್ನು ನೀಡುತ್ತಾ ಬರಲಾಗಿದೆ. ಇದರೊಂದಿಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಹತ್ವದ ಸಾಧನೆಯನ್ನು ಮಾಡಿದ ಹಿರಿಯರನ್ನು ಗುರುತಿಸಿ ಗೌರವಿಸಬೇಕೆಂಬುದು ನನ್ನ ಬಹು ಕಾಲದ ಆಶಯವಾಗಿತ್ತು. ಈ ದಿಸೆಯಲ್ಲಿ ನನ್ನ ಸೇವಾ ನಿವೃತ್ತಿಯ ನಂತರ ನಾನು ಮತ್ತು ನನ್ನ ಪತ್ನಿ ಶ್ರೀಮತಿ. ಸರ್ವಮಂಗಳ ಜೊತೆಗೂಡಿ ಒಂದು ಸಾಹಿತ್ಯ ಸೇವಾ ಪ್ರತಿಷ್ಠಾನ ಪ್ರಾರಂಭಿಸಬೇಕೆಂಬ ಆಶಯ 2015ರಲ್ಲಿ ಸಾಕಾರಗೊಂಡಿದೆ. ನನ್ನ ಆಡಳಿತ ಅವಧಿಯಲ್ಲಿ ಮೊದಲಿನಿಂದಲೂ ಸಂಸ್ಕೃತಿ ಹಾಗೂ ಪ್ರಗತಿ ಒಂದು ನಾಣ್ಯದ ಎರಡು ಮುಖಗಳು ಎಂಬುದು ನನ್ನ ನಂಬಿಕೆಯಾಗಿದೆ. ಹಲವಾರು ಸೃಜನಶೀಲ ಸಾಹಿತ್ಯ ಮತ್ತು ಸಾಂಸ್ಕೃತಿಕ ಯೋಜನೆಗಳನ್ನು ಈ ಪ್ರತಿಷ್ಠಾನದ ಮೂಲಕ ಅನುಷ್ಠಾನಗೊಳಿಸಬೇಕೆಂಬ ಹಂಬಲ ನಮ್ಮದಾಗಿದೆ.

ಇಂತಹ ಸಂಸ್ಕೃತಿ ಪರವಾದ ಉತ್ತಮ ಧೈಯೋದ್ದೇಶಗಳನ್ನು ಹೊಂದಿರುವ ಈ ಪ್ರತಿಷ್ಠಾನದ ಉದ್ಘಾಟನೆಯು

ದಿನಾಂಕ: 05.03.2015 ರಂದು ನೆರವೇರಿತು.

ಈ ಸಮಾರಂಭಕ್ಕೆ ಮುನ್ನ ಬೆಳಗ್ಗೆ 10 ಗಂಟೆಗೆ ಪ್ರಖ್ಯಾತ ಹಿಂದುಸ್ತಾನಿ ಗಾಯಕಿಯಾದ ಡಾ. ಜಯದೇವಿ ಜಂಗಮಶೆಟ್ಟಿ ಅವರಿಂದ ವಚನ ಗಾಯನ ಕಾರ್ಯಕ್ರಮ ನಡೆಯಲಿದೆ..

ಪ್ರಶಸ್ತಿ ಪ್ರದಾನ ಸಮಾರಂಭದ ಆಹ್ವಾನ ಪತ್ರಿಕೆ, ಪ್ರಶಸ್ತಿ ಪುರಸ್ಕೃತರ ಪರಿಚಯವನ್ನೊಳಗೊಂಡಂತೆ ಅವರುಗಳ ಭಾವಚಿತ್ರಗಳನ್ನು ಹೆಚ್ಚಿನ ಮಾಹಿತಿಗಾಗಿ ತಮಗೆ ನೀಡಲಾಗಿದೆ.

ಪ್ರತಿ ಪುರಸ್ಕಾರವು ಹತ್ತು ಸಾವಿರ ರೂಪಾಯಿಗಳ ನಗದು, ಫಲತಾಂಬೂಲಗಳೊಂದಿಗೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ದಿನಾಂಕ: 20.10.2024 ರಂದು ಭಾನುವಾರ ಬೆಳಗ್ಗೆ 10.30 ಕ್ಕೆ ಗಾಂಧಿ ಭವನದಲ್ಲಿ ನಡೆಯಲಿರುವ “ಸಂಸ್ಕೃತಿ ಸಂಗಮ” ಪ್ರದಾನ ಸಮಾರಂಭಕ್ಕೆ ತಮ್ಮ ಪ್ರತಿಷ್ಠಿತ ಮಾಧ್ಯಮದ ಪ್ರತಿನಿಧಿಗಳನ್ನು ನಿಯೋಜಿಸಿ ಈ ಕಾರ್ಯಕ್ರಮದ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಸಮಗ್ರವಾಗಿ ಛಾಯಾಚಿತ್ರದೊಂದಿಗೆ ವರದಿಯಾಗುವಂತೆ ಸಹಕರಿಸಿ ಪ್ರೋತ್ಸಾಹಿಸಬೇಕೆಂದು ತಮ್ಮಲ್ಲಿ ಕೋರುತ್ತೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಡಾ. ಸಿ. ಸೋಮಶೇಖರ, ಭಾ.ಆ.ಸೇ (ನಿ) ಪ್ರತಿಷ್ಠಾನದ ಅಧ್ಯಕ್ಷರು ತಿಳಿದಿದ್ದರು.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation