ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ 2024”
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ 2024”

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ನೇ ಅವಧಿಗೆ ದಿನಾಂಕ 27-12-2024 ರಂದು ರಾಜ್ಯಾಧ್ಯಕ್ಷ ಮತ್ತು ಖಜಾಂಚಿ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ರಾಜ್ಯದ ವಿವಿಧ ವೃಂದ ಸಂಘಗಳು ಮತ್ತು ರಾಜ್ಯ ಸರ್ಕಾರಿ NPS ನೌಕರರ ಸಂಘ ಹಾಗೂ ಹಿರಿಯ ಮುಖಂಡರುಗಳು ಜಿಲ್ಲಾ ಹಾಗೂ ತಾಲೂಕು ಮುಖಂಡರುಗಳ ಒತ್ತಾಸೆಯ ಮೇರೆಗೆ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ವತಿಯಿಂದ ಅಧ್ಯಕ್ಷ ಅಭ್ಯರ್ಥಿಯಾಗಿ ಶ್ರೀ ಕೃಷ್ಣಮೂರ್ತಿಯವರನ್ನು ಹಾಗೂ ಖಜಾಂಚಿಯಾಗಿ ಶ್ರೀ ವಿವಿ ಶಿವರುದ್ರಯ್ಯ ಇವರನ್ನು ಸ್ಪರ್ಧಾಳುಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಸಮಾನತೆ, ಸಶಕ್ತ, ಸದೃಢ ಸಂಘಟನೆ ಹಾಗೂ ರಾಜಿರಹಿತ ಹೋರಾಟ ಸ್ವಾವಲಂಬನೆಯ ವೈಜ್ಞಾನಿಕ ನಿಲುವುಗಳಿಗೆ ಬದ್ಧರಾಗಿ ನೌಕರರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಮ್ಮ ತಂಡ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.
ಪ್ರಸ್ತುತ ಇರುವ ಸಂಘಟನೆಯ ನಾಯಕರು ಅವಕಾಶವಾದಿ ಮನೋಭಾವನೆ ತಳೆದಿದ್ದು ಕಳೆದ ಐದು ವರ್ಷ ತಮ್ಮ ಅನುಕೂಲಕ್ಕೆ ತಕ್ಕ ನಿಲುವುಗಳಿಗೆ ಸಂಘಟನೆಯನ್ನ ದುರುಪಯೋಗ ಮಾಡಿಕೊಂಡು ಸರ್ಕಾರಿ ನೌಕರರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರಿ ನೌಕರರ ಸಂಘವನ್ನು ಬಳಸಿಕೊಳ್ಳಲಾಗಿದೆ
2019-24 ನೇ ಅವಧಿಯಲ್ಲಿ ಸರ್ಕಾರಿ ನೌಕರ ಸಂಘದ ವತಿಯಿಂದ ಯಾವುದೇ ಸಮಸ್ಯೆಗಳ ವಿರುದ್ಧ ಹೋರಾಟಗಳು ರಚನಾತ್ಮಕವಾಗಿ ನಡೆಯದಿರುವುದರಿಂದ ನೂತನ ಪಿಂಚಣಿ ಯೋಜನೆ (NPS) ಇಲ್ಲಿಯವರೆಗೆ ರಾಗದೇ ಇರುವುದು, ಹಳೆ ಪಿಂಚಣಿ ಯೋಜನೆ, (OPS) ಮರು ಜಾರಿಗೊಳಿಸುವುದು ಗಗನ ಕುಸುಮವಾಗಿಯೇ ಉಳಿದಿದೆ.
ಈಗಿರುವ ಸರಕಾರಿ ನೌಕರ ಸಂಘದ ಆಡಳಿತ ಮಂಡಳಿಯು ಕೇಂದ್ರಕ್ಕೆ ಸರಿಸಮಾನವಾದ ವೇತನ ಕೊಡಿಸುತ್ತೇವೆ ಎಂದು ಹುಸಿ ಭರವಸೆಗಳನ್ನು ಬಿತ್ತಿ 1-7-2022 ರಿಂದ ಜಾರಿಯಾಗಬೇಕಿದ್ದ 7ನೇ ವೇತನ ‘ಆಯೋಗದ ಶಿಫಾರಸುಗಳನ್ನು 1-8-2024 ರಿಂದ ಜಾರಿಗೊಳಿಸುವ ಮೂಲಕ ಎರಡು ವರ್ಷಗಳ ಕಾಲ ವಿಳಂಬ ಮಾಡಿ ವೇತನ ಆಯೋಗ ಜಾರಿಯಾಗಿದೆ.
ಪ್ರಸ್ತುತ ಆಡಳಿತ ಮಂಡಳಿಯು ಪ್ರತಿ ತಾಲೂಕು ಜಿಲ್ಲೆಗಳಲ್ಲಿ ಮಿಸ್ಟ್ರಿ ಕ್ಯಾಂಟೀನ್ ತೆರೆಯುತ್ತೇವೆ ಎಂದು ಸುಳ್ಳು ಹೇಳಿರುವುದಲ್ಲದೆ ಕೋವಿಡ್ ಸಮಯದಲ್ಲಿ ತಡೆಹಿಡಿದ ತುಟ್ಟಿಭತ್ಯೆಗಳ ಆರ್ಥಿಕ ಸೌಲಭ್ಯಗಳನ್ನು ನೌಕರರಿಗೆ ಮರು ನೀಡದೆ ವಂಚಿಸಲಾಗಿದೆ.
ಈಗಿರುವ ಸರಕಾರಿ ನೌಕರ ಸಂಘದ ಆಡಳಿತ ಮಂಡಳಿಯು ಕೇಂದ್ರಕ್ಕೆ ಸರಿಸಮಾನವಾದ ವೇತನ ಕೊಡಿಸುತ್ತೇವೆ ಎಂದು ಹುಸಿ ಭರವಸೆಗಳನ್ನು ಬಿತ್ತಿ 1-7-2022 ರಿಂದ ಜಾರಿಯಾಗಬೇಕಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು 1-8-2024 ರಿಂದ ಜಾರಿಗೊಳಿಸುವ ಮೂಲಕ ಎರಡು ವರ್ಷಗಳ ಕಾಲ ವಿಳಂಬ ಮಾಡಿ ವೇತನ ಆಯೋಗ ಜಾರಿಯಾಗಿದೆ.
ಪ್ರಸ್ತುತ ಆಡಳಿತ ಮಂಡಳಿಯು ಪ್ರತಿ ತಾಲೂಕು ಜಿಲ್ಲೆಗಳಲ್ಲಿ ಮಿಲ್ಫ್ ಕ್ಯಾಂಟೀನ್ ತೆರೆಯುತ್ತೇವೆ ಎಂದು ಸುಳ್ಳು ಹೇಳಿರುವುದಲ್ಲದೆ ಕೋವಿಡ್ ಸಮಯದಲ್ಲಿ ತಡೆಹಿಡಿದ ಡಿಎಗಳ ಆರ್ಥಿಕ ಸೌಲಭ್ಯಗಳನ್ನು ನೌಕರರಿಗೆ ಮರು ನೀಡದೆ ವಂಚಿಸಲಾಗಿದೆ.
ತಾಲೂಕು ಚುನಾಯಿತ ಪ್ರತಿನಿಧಿಗಳಿಗೆ ರಾಜ್ಯ ಸಂಘಕ್ಕೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದೇ ಇರುವುದು ಕೂಡ ಸರ್ಕಾರಿ ನೌಕರರಿ ಇಷ್ಟು ವರ್ಷಗಳ ಕಾಲ ಇದ್ದ ಪ್ರತಿನಿಧಿಗಳ ಹಕ್ಕುಗಳನ್ನು ಮೊಟಕುಗೊಳಿಸಿದ್ದಾರೆ.
ಪ್ರಸ್ತುತ ನಮ್ಮ ತಂಡವು ಸರ್ಕಾರಿ ನೌಕರರು ಅನುಭವಿಸುತ್ತಿರುವ ವರ್ಗಾವಣೆ ಸಮಸ್ಯೆ, ಬಡ್ತಿ, ಖಾಲಿ ಹುದ್ದೆಗಳ ಭರ್ತಿ, ಎನ್‌ಪಿಎಸ್ ರದ್ದತಿಯಂತಹ ಅನೇಕ ನೌಕರರ ಸಮಸ್ಯೆಗಳಿಗೆ ಧ್ವನಿ ಆಗಲಿದ್ದೇವೆ.
ಸರ್ಕಾರಿ ನೌಕರರ ಸಂಘದಲ್ಲಿ ಸಾಮೂಹಿಕ ನಾಯಕತ್ವ ಹಗೂ ಪ್ರಜಾಪ್ರಭುತ್ವ ಮರುಸ್ಥಾಪನೆ ನಮ್ಮ ತಂಡದ ಉದ್ದೇಶವಾಗಿದೆ’
ನಿಷ್ಠೆ, ಪ್ರಾಮಾಣಿಕತೆ, ಯಾರ ಜೊತೆನೂ ಕೂಡಾ ಅನುಸಂಧಾನ ಮಾಡಿಕೊಳ್ಳದೇ ನಾಡಿನ ನೌಕರರ ಹಿತವೇ ನಮ್ಮ ತಂಡದ ಉದ್ದೇಶವಾಗಿರುವುದರಿಂದ ಸರ್ವರೂ ನಮ್ಮ ತಂಡದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಹಕಾರ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಪ್ರಜಾಸತ್ತಾತ್ಮಕ ನೌಕರರ ವೇದಿಕೆ ಪರವಾಗಿ ವಿನಂತಿಸಲಾಯಿತು.
Public report6361355960
Comments
Post a Comment