ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಕಾನೂನುನಾತ್ಮಕ ನಾಡದ್ವಜ’ಕೋರಿ ಆಗ್ರಹ
ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಕಾನೂನುನಾತ್ಮಕ ನಾಡದ್ವಜ’ಕೋರಿ ಆಗ್ರಹ

1. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ “ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಕಾನೂನುನಾತ್ಮಕ ನಾಡಧ್ವಜ” ವನ್ನು ಕೋರಿ ಈ ಹಿಂದೆ ಶ್ರೇಷ್ಠ ಬರಹಗಾರರಾದ ಶ್ರೀಯುತ.ಪಾಟಿಲ್ ಪುಟ್ಟಪ್ಪ ರವರು ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು ಹಾಗೂ ಬೆಳಗಾವಿಯ ಸಾಮಾಜಿಕ ಹೋರಾಟಗಾರರಾದ ಶ್ರೀಯುತ.ಭೀಮಪ್ಪ ಗಡಾದ್ ರವರು ಸಹ ರಾಜ್ಯ ಸರ್ಕಾರಕ್ಕೆ ಮನವಿಯನ್ನು ನೀಡಿ “ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ” ವನ್ನು ಕೋರಿ ಅನೇಕ : ಮನವಿಗಳನ್ನು ಸಲ್ಲಿಸುತ್ತಾ ಕಳೆದ 10 ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರವು ಈ ಕುರಿತಂತೆ ರಾಜ್ಯ ಸರ್ಕಾರವು ಕವಿಗಳು, ಹೋರಾಟಗಾರರನ್ನು ಒಳಗೊಂಡಂತೆ 9 ಜನ ತಜ್ಞರ ಸಮಿತಿ ರಚಿಸಿ, ಪ್ರತ್ಯೇಕ ಧ್ವಜ ಹೊಂದುವಂತೆ ಸಮಿತಿ ನೀಡಿದ್ದ ವರದಿಯ ಆದಾರದ ಮೇಲೆ ಅಂದಿನ ಸಚಿವ ಸಂಪುಟವು ಒಪ್ಪಿಗೆಯನ್ನು ಸೂಚಿಸಿತ್ತು ಹಾಗೂ ಅಂದಿನ ಕರ್ನಾಟಕ ಅಡ್ವಕೇಟ್ ಜನರಲ್ ಸಹ ಈ ಕುರಿತಂತೆ ಅಭಿಪ್ರಾಯವನ್ನು ಸಕಾರಾತ್ಮಕವಾಗಿ ಸೂಚಿಸಿರುತ್ತಾರೆ.
2. ತದನಂತರದಲ್ಲಿ ಅಂದಿನ ಮತ್ತು ಇಂದಿನ ಮುಖ್ಯ ಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ ರವರು 2018 ರಲ್ಲಿ ಸಮಿತಿಯ ಸಲಹೆ ಮೇರೆಗೆ ಪ್ರತ್ಯೇಕ ಧ್ವಜವನ್ನು ಅನಾವರಣಗೊಳಿಸಿದ್ದರು. ಆದರೆ ಅನಂತರ ಯಾವುದೇ ಬೆಳವಣಿಗೆಯಾಗದೇ ಇರುವುದರಿಂದ ಶ್ರೀ.ಬೀಮಪ್ಪ ಗಡಾದ್ ರವರು ನನ್ನನ್ನು ಸಂಪರ್ಕಿಸಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವಂತೆ ನನ್ನಲ್ಲಿ ಕೋರಿದ್ದು ಅದರಂತೆ 2023 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಬೆಂಗಳೂರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹೂಡಿದ್ದು, ದಿನಾಂಕ 25.10.2024 ರಂದು ಮುಖ್ಯ ನ್ಯಾಯಾಧೀಶರಾದ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಾಮೂರ್ತಿ ಕೆ.ವಿ. ಅರವಿಂದ ಅವರು ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಸಿ ಸದರಿ ವಿಚಾರ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ ನೀವು ನಿಮ್ಮ ಮನವಿಯನ್ನು ಸರ್ಕಾರದ ಮುಂದೆಯೇ ಮುಂದುವರೆಸಬಹುದು ಎಂಬ ತೀರ್ಪನ್ನು ನೀಡಿ ಅರ್ಜಿಯನ್ನು ವಿಲೆಗೊಳಿಸಿರುತ್ತಾರೆ.
3. ಮಾನ್ಯ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಹೊಣೆ ಮಾಡಿರುವುದರಿಂದ ಸರ್ಕಾರವೇ ಜವಾಬ್ದಾರಿಯನ್ನು ಹೊತ್ತು ನಮ್ಮ ರಾಜ್ಯಕ್ಕೆ ಶಾಸನಾತ್ಮಕವಾದ ಧ್ವಜವನ್ನು ಘೋಷಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಈ ಸಂಬಂಧವಾಗಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರವು ಅನುಮತಿ ಕೋರುವ ಯಾವುದೇ ಪ್ರಮೇಯ ಇರುವುದಿಲ್ಲ ಮತ್ತು ಯಾವುದೇ ಕಾಯಿದೆ ಅಥವಾ ಸಂವಿಧಾನದಲ್ಲಿ ರಾಜ್ಯಕ್ಕೆ ತನ್ನದೇ ಪ್ರತ್ಯೇಕ ಧ್ವಜ ಹೊಂದಲು ನಿರ್ಭಂಧ ಇರುವುದಿಲ್ಲ. ಆದ್ದರಿಂದ ಅದನ್ನು ಇದೇ ನವೆಂಬರ್ 1, 2024 ರಂದು ಕರ್ನಾಟಕ ರಾಜ್ಯದಾದ್ಯಂತ ಶಾಸನಾತ್ಮಕ ಧ್ವಜವನ್ನು ಜಾರಿಗೆ ತರಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತಿದ್ದೇವೆ. ಏಕೆಂದರೆ ನಮ್ಮದೂ ಒಂದು ಒಕ್ಕೂಟ ರಾಷ್ಟ್ರವಾಗಿರುವುದರಿಂದ, ಪ್ರತಿ ರಾಜ್ಯವು ತನ್ನದೇಯಾದ ದ್ವಜ ಹೊಂದುವ ಹಕ್ಕನ್ನು ಹೊಂದಿರುತ್ತದೆ. ಈ ಹಕ್ಕನ್ನು ಚಲಾಯಿಸುವುದು ನಮ್ಮ ನಾಗರಿಕರ ಹಕ್ಕು ಆಗಿರುತ್ತದೆ.
ಆದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರವು ತೀರ್ಮಾನ ತೆಗೆದುಕೊಂಡು ಬರುವ ಕರ್ನಾಟಕ ರಾಜ್ಯೋತ್ಸವ ದಿನದ ಅಂಗವಾಗಿ 1ನೇ ನಂವೆಂಬರ್ 2024 ರಂದು ಕರ್ನಾಟಕ ರಾಜ್ಯದಲ್ಲಿ ಪ್ರತ್ಯೇಕ ಧ್ವಜ ಹಾರಿಸಿ ಶಾಸನಾತ್ಮಕಗೊಳಿಸಬೇಕಾಗಿ ಈ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರುತ್ತಿರುವುದರಿಂದ ತಮ್ಮ ಪತ್ರಿಕಾ ವರದಿಗಾರರು ಹಾಗೂ ಛಾಯಾಗ್ರಾಹಕರನ್ನು ಸದರಿ ಸಭೆಗೆ ಕಳುಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕಾಗಿ ಕೋರಿಕೊಳ್ಳುತ್ತಿದ್ದೇವೆ ಎಂದು ಎಸ್.ಉಮಾಪತಿ. ಎಸ್, ಭೀಮಪ್ಪ ಗುಂಡಪ್ಪ ಗಡಾಧ, ನರಸಿಂಹ ಮೂರ್ತಿ ಮತ್ತು ಶ್ರೀಮತಿ ಸುಧಾ ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
Comments
Post a Comment