ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಲು ಒತ್ತಾಯಿಸಿ”ಬೃಹತ್ ಪ್ರತಿಭಟನಾ ಜಾಥಾ”
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಲು ಒತ್ತಾಯಿಸಿ”ಬೃಹತ್ ಪ್ರತಿಭಟನಾ ಜಾಥಾ”
“ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ” “ಮನೆಗೊಬ್ಬ ರಾಯಣ್ಣ, ಮುನ್ನುಗ್ಗಿ ಬಾರಣ್ಣ” “ನಾಡು ನುಡಿ ರಕ್ಷಣೆ – ನಮ್ಮೆಲ್ಲರ ಹೊಣೆ”

ಕರ್ನಾಟಕ ಭಾಷಾವಾರು ಪ್ರಾಂತ್ಯವಾಗಿ 68 ವರ್ಷಗಳು ಕಳೆದಿವೆ. ಭಾಷಾವಾರು ಪ್ರಾಂತ್ಯ ವಿಂಗಡನೆಯಾದ ಮೇಲೆ ಅದರ ಉದ್ದೇಶಗಳು ಈಡೇರಿವೆಯೇ ಎಂಬ ಪ್ರಶ್ನೆ ಬಂದಾಗ ಖಂಡಿತವಾಗಿಯೂ ಈಡೇರಲೇ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಅಂದಿನಿಂದ ಇಂದಿನವರೆಗೂ ನಮ್ಮನ್ನಾಳಿದ ರಾಜಕೀಯ ಪಕ್ಷಗಳಿಗೆ ಕನ್ನಡ, ಕನ್ನಡಿಗ, ಕರ್ನಾಟಕವನ್ನು ಅಭಿವೃದ್ಧಿ ಪಡಿಸಲು ಆಸಕ್ತಿ ತೋರದೆ ಇರುವುದು ನಮ್ಮ ಕಣ್ಣ ಮುಂದೆ ಕಾಣಿಸುತ್ತದೆ. ನಾಡನ್ನು ಕಟ್ಟಿದವರು ನಾವು, ಕೋಟೆ ಕೊತ್ತಲುಗಳನ್ನು ಕಟ್ಟಿದವರು ನಾವು. ಗುಡಿ, ಗೋಪುರ, ಮಂದಿರಗಳನ್ನು ಕಟ್ಟಿದವರು ನಾವು. ಕೆರೆ, ಕುಂಟೆ, ಗುಂಡು ತೋಪುಗಳನ್ನು ಕಟ್ಟಿದವರು ನಾವು, ನೆಲ-ಜಲ-ಭಾಷೆ – ಗಡಿ ಉಳಿಸಲು ಹೋರಾಡಿ ಪೊಲೀಸರ ಬೂಟು ಲಾಠಿ ಏಟು ತಿಂದು ಸೆರೆವಾಸ ಅನುಭವಿಸಿದವರು ನಾವು. ಕನ್ನಡವನ್ನು ಕಲಿತು, ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವವರು ನಾವು, ಹಸಿವೆಂದು ಬಂದವರಿಗೆ ಅನ್ನ ಹಾಕಿ, ಆಸರೆ ಕೊಟ್ಟವರು ನಾವು. ಇಂತಹ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬ ಕನ್ನಡಿಗನೂ ಧನ್ಯನು. ಆದರೆ ಇಷ್ಟೆಲ್ಲಾ ಪ್ರೀತಿ, ಪ್ರೇಮ, ತ್ಯಾಗ, ಸ್ನೇಹ, ಸಹಬಾಳ್ವೆಯ ವಿಶಾಲ ಹೃದಯವಂತಿಕೆಯ ಭಾವನೆಗೊಳಗೊಂಡ ಕನ್ನಡಿಗನ ಪರಿಸ್ಥಿತಿ ಕನ್ನಡ ನಾಡಿನಲ್ಲೇ ಶೋಚನೀಯವಾಗಿದೆ.

ವಲಸಿಗರ ಅಕ್ರಮಣಕಾರಿಯ ಬೆಳವಣಿಗೆಯಿಂದ ಕನ್ನಡಿಗರ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಪರಭಾಷಿಕರಿಗೆ ಅನ್ನ ಕೊಟ್ಟ ತಪ್ಪಿಗೆ ನಮ್ಮವರಿಗೆ ಅನ್ನ ಇಲ್ಲದಂತಾಗುತ್ತಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ವ್ಯಾಪಾರ, ವಹಿವಾಟು ವಲಸಿಗರ ಹಿಡಿತಕ್ಕೆ ಸೇರುತ್ತಿದೆ. ಇದರಿಂದಲೇ ಕನ್ನಡಿಗರ ಅಭಿವೃದ್ಧಿ ಮತ್ತು ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ದೊಡ್ಡ ದೊಡ್ಡ ಉದ್ಯಮಗಳನ್ನು ಸ್ಥಾಪಿಸಲು ಬಂದಂತಹ ಖಾಸಗಿ ಉದ್ಯಮಿಗಳು ಕನ್ನಡಿಗರನ್ನು ಕಡೆಗಣಿಸುತ್ತಿರುವುದು ನಮ್ಮ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಬಿದ್ದಂತಲ್ಲವೇ ? ಉದ್ಯೋಗ ಎಂಬುದು ನಮ್ಮ ಹಕ್ಕು.
ಮತ್ತು ನಮ್ಮ ಬದುಕು. ಅದೇ ಇಲ್ಲದ ಮೇಲೆ ಕನ್ನಡಿಗರು ಪರಕೀಯರ ಮುಂದೆ ಸ್ವಾಭಿಮಾನ ಬದಿಗಿಟ್ಟು ಗುಲಾಮರಂತೆ ಬದುಕಬೇಕೆ ? ಯಾವುದೇ ಖಾಸಗಿ ವಲಯದ ಉದ್ಯಮಗಳು ಪ್ರಾರಂಭಿಸಲು ಈ ನಾಡಿನ ರೈತರ ಭೂಮಿ, ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಿಕೊಡುತ್ತದೆ. ಆದರೆ ಅದೇ ಉದ್ಯಮಿಗಳು ಈ ನೆಲದ ಮಕ್ಕಳಿಗೆ ಶೇಕಡಾವಾರು ಹೆಚ್ಚಿನ ಉದ್ಯೋಗ
ನೀಡುವುದರಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ. ಸರ್ಕಾರದ ಸುತ್ತೋಲೆಗಳನ್ನು ತಿರಸ್ಕರಿಸುತ್ತಿದ್ದಾರೆ. ರಾಜ್ಯದಲ್ಲಿನ ಬಹುರಾಷ್ಟ್ರೀಯ ಕಂಪನಿಗಳು. ಐಟಿ, ಬಿಟಿ ಕಂಪನಿಗಳು, ಶಾಪಿಂಗ್ ಮಾಲ್ ಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವಸತಿ ಸಮುಚ್ಚಯಗಳು, ಸಿನಿಮಾ ಥಿಯೇಟ- ರ್‌ಗಳು, ಹೋಟೆಲ್‌ಗಳು ಸೇರಿದಂತೆ ಸಣ್ಣಪುಟ್ಟ ವಲಯದ ಉದ್ಯಮಿಗಳು ಕನ್ನಡಿಗರನ್ನು ಕಡೆಗಣಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಸ್ವಾಮ್ಯದ ರೈಲ್ವೇ ಇಲಾಖೆ, ದೂರವಾಣಿ ಇಲಾಖೆ, ಅಂಚೆ ಇಲಾಖೆ, ಬ್ಯಾಂಕ್‌ಗಳ ಉದ್ಯೋಗಗಳಲ್ಲೂ ಸಜಹ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ. ಹಾಗೆಯೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಗುತ್ತಿಗೆಗಳು ಹೊರ ರಾಜ್ಯದವರ ಪಾಲಾಗಿದೆ. ಕನ್ನಡಿಗರ ಅಭಿವೃದ್ಧಿಗೆ ಇನ್ನೇನು ಉಳಿದಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.
ನಮ್ಮ ರಾಜ್ಯದಲ್ಲಿನ ಉದ್ಯೋಗ ಮತ್ತು ಬದುಕನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿ ಜೀವನ ಸಾಗಿಸುವಂತಾಗಿದೆ. ಭವಿಷ್ಯದಲ್ಲಿ ಈ ನಾಡಿನ ಯುವಕರಿಗೆ ಉದ್ಯೋಗವಿಲ್ಲದೇ ಸಂಕಷ್ಟಗಳು ಎದುರಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಸರ್ಕಾರ, ಖಾಸಗಿಯವರ ಬೆದ ರಿಕೆಗೆ ತಲೆಬಾಗದೇ ಈ ನಾಡಿನ ಮಕ್ಕಳ ಭವಿಷ್ಯವನ್ನು ರೂಪಿಸಲು ಖಾಸಗಿ ವಲಯದ ಎಲ್ಲಾ ಉದ್ದಿಮೆಗಳಲ್ಲಿ ಉದ್ಯೋಗ ಮೀಸಲಾತಿ ನೀಡಲೇಬೇಕಾಗಿದೆ. ಕನ್ನಡಿಗರನ್ನು ವಂಚಿಸಿ ಹೊರರಾಜ್ಯದವರಿಗೆ ಉದ್ಯೋಗ ನೀಡುವ ಯಾವುದೇ ಕಂಪನಿ, ಕಾರ್ಖಾನೆಯಾದರೂ ಸರಿಯೇ ಅವರಿಗೆ ನೀಡಿರುವ ಸರ್ಕಾರಿ ಸವಲತ್ತುಗಳನ್ನು ಹಿಂಪಡೆದು ಪರವಾನಿಗೆ ರದ್ದು ಮಾಡುವ ಎಚ್ಚರಿಕೆಯನ್ನು ಸರ್ಕಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಜಾಗೃತಿ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ. ಮಂಜುನಾಥ್ ದೇವರವರ ನೇತೃತ್ವದಲ್ಲಿ
ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಬೃಹತ್ ಪ್ರತಿಭಟನಾ ಜಾಥಾವನ್ನು ಬೆಂಗಳೂರು – ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಫ್ರೀಡಂಪಾರ್ಕ್ ವರೆಗೆ ಹಮ್ಮಿಕೊಳ್ಳಲಾಗಿದೆ.
ಕನ್ನಡಿಗರ ಬದುಕು ಮತ್ತು ಅಸ್ತಿತ್ವ ಉಳಿಸುವ ಈ ಐತಿಹಾಸಿಕ ಹೋರಾಟಕ್ಕೆ ರಾಜ್ಯದ ಚಲನಚಿತ್ರ ಕಲಾವಿದರು, ರಂಗಭೂಮಿ ಕಲಾವಿದರು, ಟಿವಿ ಕಲಾವಿದರು, ಮಠಾಧೀಶರು, ಯುವಕ ಯುವತಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮಹಿಳೆಯರು, ಯುವಕ ಸಂಘಟನೆಗಳು, ಅಭಿಮಾನಿ ಸಂಘಟನೆಗಳು, ಕಾರ್ಮಿಕರು, ಈ ನಾಡಿನ ಕವಿಗಳು, ಸಾಹಿತಿಗಳು, ಬರಹಗಾರರು, ಕನ್ನಡ ಹಿತಚಿಂತಕರು. ಸೇರಿದಂತೆ ನಾಡಿದಾದ್ಯಂತ ಇರುವ ಕನ್ನಡಿಗರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಈ ಐತಿಹಾಸಿಕ ಕ್ರಾಂತಿಕಾರಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಕನ್ನಡ ಜಾಗೃತಿ ವೇದಿಕೆ ವತಿಯಿಂದ ತಿಳಿಸಲಾಯಿತು.
ದಿನಾಂಕ : 19-10-2024 ಶನಿವಾರ ಸಮಯ : ಬೆಳಿಗ್ಗೆ 11.30 ರಿಂದ
ಸ್ಥಳ : ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಫ್ರೀಡಂಪಾರ್ಕ್ ವರೆಗೆ
ಸಂಪರ್ಕಕ್ಕಾಗಿ : ಜೆ. ಮಂಜೇಗೌಡ, ರಾಜ್ಯ ಉಪಾಧ್ಯಕ್ಷರು, 9448325924 ಶ್ರೀಮತಿ ಕವಿತಾ, ರಾಜ್ಯ ಪ್ರದಾನ ಕಾರ್ಯದರ್ಶಿಗಳು, 7022610521 ಎಸ್. ಕೆ. ಗೌರೀಶ್, ರಾಜ್ಯಾಧ್ಯಕ್ಷರು, ಯುವ ಘಟಕ, 9845652974 ಶ್ರೀಮತಿ ಸಿ. ನಾಗರತ್ನಮ್ಮ, ರಾಜ್ಯಾಧ್ಯಕ್ಷರು, ಮಹಿಳಾ ಘಟಕ, 8861345213 ಮಂಜಪ್ಪ ದುಗ್ಗತ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಘಟಕ, 9945903830 ಕಲ್ವೇಶ್ ಸುಳ್ಳದ್, ರಾಜ್ಯ ಕೋಶಾಧ್ಯಕ್ಷರು,
Comments
Post a Comment