ಜಾಣ ಕುರುಡು, ಜಾಣ ಮೌನದ ,ಬಿಜೆಪಿ ಪಕ್ಷ ತಂದೆ ಮಕ್ಕಳ ಪಕ್ಷ,*
*ಜಾಣ ಕುರುಡು, ಜಾಣ ಮೌನದ ,ಬಿಜೆಪಿ ಪಕ್ಷ ತಂದೆ ಮಕ್ಕಳ ಪಕ್ಷ,* *ಕಾರ್ಯಕರ್ತರನ್ನ ಬಳಸಿಕೊಂಡು ದೂರ ಮಾಡುತ್ತಾರೆ, ಕೆಲಸ ಮಾಡುವವರಿಗೆ ಬಿಜೆಪಿ ಪಕ್ಷದಲ್ಲಿ ಬೆಲೆಯಿಲ್ಲ* *ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 150ಸ್ಥಾನ ಗೆಲುವಿಗೆ ಶ್ರಮಿಸುತ್ತೇನೆ- ನೆ.ಲ.ನರೇಂದ್ರಬಾಬು* ಬೆಂಗಳೂರು:ಮೌರ್ಯ ಹೋಟೆಲ್ ಸಭಾಂಗಣ: ರಾಜಾಜಿನಗರ ಮತ್ತು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ನೆ.ಲ.ನರೇಂದ್ರ ಬಾಬುರವರು ಬಿಜೆಪಿ ಪಕ್ಷದ ಹಿಂದುಳಿದ ವರ್ಗ ರಾಜ್ಯಾಧ್ಯಕ್ಷ ಸ್ಥಾನ, ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ , ಮುಂದಿನ ರಾಜಕೀಯ ನಡೆ ಕುರಿತು ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು. *ನೆ.ಲ.ನರೇಂದ್ರಬಾಬುರವರು* ಮಾತನಾಡಿ ಮಹಾನಗರ ಪಾಲಿಕೆ ಸದಸ್ಯನಾಗಿ ಮೂರು ಬಾರಿ ಮತ್ತು ಎರಡು ಬಾರಿ ಶಾಸಕನಾಗಿ ಕಳೆದ 40ವರ್ಷಗಳಿಂದ ಸಾರ್ವಜನಿಕರ ಬೆಂಬಲದಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಇಂದು ಬಿಜೆಪಿ ಪಕ್ಷಕ್ಕೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಕಳೆದ 10ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ನನ್ನನ ಸಮರ್ಪಣೆ ಮಾಡಿಕೊಂಡೆ ಅದರೆ ರಾಜಾಜಿನಗರ ಮತ್ತು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಮತ್ತು ನನ್ನ ಕಾರ್ಯಕರ್ತರನ್ನು ದೂರಮಾಡಿದರು ಮತ್ತು ನನ್ನ ವಿರುದ್ದ ಪಿತೂರಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲ್ಲಿ...