Posts

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2024

Image
  ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2024 ಬೆಂಗಳೂರು :  ಹೆಣ್ಣು ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ  ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು  ನಟಿ ಪ್ರಿಯಾಂಕ ಉಪೇಂದ್ರ ಅವರು ತಿಳಿಸಿದರು. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಓಣಿಯವರ ಸೇವಾ ಕೂಟ BOSCO ವತಿಯಿಂದ ಆಯೋಜಿಸಲಾಗಿದ್ದ ಸುಸ್ಥಿರ ಅಭಿವೃದ್ಧಿಗಾಗಿ ಬಾಲಕಿಯರ ಧ್ವನಿಯನ್ನು ಹೆಚ್ಚಿಸುವುದು ಎಂಬ ಶೀರ್ಷಿಕೆಯಲ್ಲಿ ಆಯೋಜಿಸಲಾಗಿದ್ದ ಜಾಗತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಿಕ್ಷಣವು ಶಕ್ತಿಯುತ ಸಾಧನವಾಗಿದ್ದು, ಅದರ ಮೂಲಕ ನೀವು ಜ್ಞಾನ, ಆತ್ಮವಿಶ್ವಾಸ, ನಿಮ್ಮ ಗುರಿಗಳನ್ನು ತಲುಪಲು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುತ್ತೀರಿ ಎಂದು ಹೆಣ್ಣು ಮಕ್ಕಳಿಗೆ ಕಿವಿಮಾತು ಹೇಳಿದರು. ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರ, ಅದರಲ್ಲೂ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಬಡತನ, ಅನಕ್ಷರತೆ, ಲಿಂಗ ತಾರತಮ್ಯ, ಅಪೌಷ್ಟಿಕತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಹೆಣ್ಣಿಗೆ ರಕ್ಷಣೆ ಈ ಆಧುನಿಕ ಯುಗದಲ್ಲೂ ಅನಿವಾರ್ಯ. ಕಲಿತ ಹೆಣ್ಣು ಕೂಡ ಉದ್ಯೋಗದ ಸ್ಥಳದಲ್ಲಿ ದೌರ್ಜನ್ಯ ಅನುಭವಿಸುವುದು ನೋಡಿದ್ದೇವೆ. ಇಂತಹ ಎಲ್ಲಾ ಸಂಕಷ್ಟಗಳನ್ನು ಮೀರಿ ನಿಲ್ಲಲು ಹೆಣ್ಣುಮಕ್ಕಳನ್ನು ರಕ್ಷಿಸಿ, ಅವರಿಗೆ ಸೂಕ್ತ ಶಿಕ್ಷಣ ಕೊಡಿಸುವುದು ಮತ್ತು ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ನಾವೂ ಹೆಚ್ಚಿನ ಅರಿವು ಬೆಳೆಸಿಕೊಳ್...

ಸಹಕಾರಿ ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮೋದಿಯವರು ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ: ಅಮಿತ್ ಶಾ

Image
 ಸಹಕಾರಿ ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮೋದಿಯವರು ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ: ಅಮಿತ್ ಶಾ ·         ತನ್ನ ವಿಸ್ತರಣೆಗಾಗಿ ಈಗ ಇಡೀ ಸಹಕಾರಿ ಕ್ಷೇತ್ರವು ಡಿಜಿಟಲ್ ಜಗತ್ತನ್ನು ಪ್ರವೇಶಿಸಲು ಸನ್ನದ್ಧವಾಗಿದೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗಳು (ಎಆರ್ಡಿಬಿ) ಮತ್ತು ಸಹಕಾರ ಸಂಘಗಳ (ಆರ್ಸಿಎಸ್) ರಿಜಿಸ್ಟ್ರಾರ್ ಕಚೇರಿಗಳ ಗಣಕೀಕರಣದ ಯೋಜನೆಯನ್ನು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಮಂಗಳವಾರದಂದು ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ‘ಸಹಕಾರಿ ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮೋದಿಯವರು ಒಂದು ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.  ಈ ಯೋಜನೆಯು ಸಹಕಾರಿ ವಲಯದಲ್ಲಿ ಕಾಗದದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ದಕ್ಷತೆಯನ್ನು ಹೆಚ್ಚಿಸುತ್ತದೆ.   ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಕೇಂದ್ರ ಗೃಹ  ಮತ್ತು ಸಹಕಾರ ಸಚಿವ ಅಮಿತ್ ಶಾರವರ ನುರಿತ ಮಾರ್ಗದರ್ಶನದಲ್ಲಿ ಸರಿಸುಮಾರು 23 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ.  ಇಂದು ಲಕ್ಷಾಂತರ ಮನೆಗಳಿಗೆ ಗ್ಯಾಸ್, ವಿದ್ಯುತ್, 5 ಕಿಲೋಗ್ರಾಂ ಉಚಿತ ಪಡಿತರ, ಮತ್ತು ವಿವಿಧ ಸೌಲಭ್ಯ...

ದೊಡ್ಡಬಳ್ಳಾಪುರ ತಾಲ್ಲೂಕು ಗಂಡರಗೊ ಳಿಪುರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ

Image
ದೊಡ್ಡಬಳ್ಳಾಪುರ ತಾಲ್ಲೂಕು ಗಂಡರಗೊ ಳಿಪುರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ದೊಡ್ಡಬಳ್ಳಾಪುರ ತಾಲ್ಲೂಕು ಹೊನ್ನವಾರ ಗ್ರಾಮ ಪಂಚಾಯಿತಿ ಗಂಡರಗೋಳಿಪುರ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ನಿರ್ದೇಶಕರುಗಳ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದ್ದಿದು ಮಧುರೆ ಹೋಬಳಿ ಕಾಂಗ್ರೆಸ್ ಮುಖಂಡರಾದ ಚುಂಚೆಗೌಡರು ನೂತನ ಆಯ್ಕೆಯಾದ ನಿರ್ದೇಶಕರುಗಳಾದ ಗಂಗೆಗೌಡರು, ಕೃಷ್ಣಮೂರ್ತಿ,ಚನ್ನಗಂಗಯ್ಯ, ಶಿವಕುಮಾರ್, ತಿಮ್ಮರಾಜು,ಸದಾಶಿವಯ್ಯ,ಅನ್ನಪೂರ್ಣ ಮ್ಮ,ಶಾಂತಮ್ಮ, ವಜೀರ್ ಸಾಹೇಬು,ಮುನಿರತ್ನಮ್ಮ, ದಾಳಬೈಲಯ್ಯ, ರಾಮಕೃಷ್ಣಯ್ಯ ಇವರುಗಳಿಗೆ ಹಾರ ಹಾಕಿ ಸನ್ಮಾನ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು,ಈ ಸಂದರ್ಭದಲ್ಲಿ ಚಂದ್ರ ಶೇಖರ್ ಕಾರ್ಯದರ್ಶಿ, ಆರ್ . ವಿ.ಗೌಡ ಹಾಗೂ ಮಧುರೆ ಹೋಬಳಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗಹಿಸಿದ್ದರು. ಆರ್. ನಾಗರಾಜು ಪಬ್ಲಿಕ್ ರಿಪೋರ್ಟ್ news ವರದಿಗಾರರು. ಬೆಂಗಳೂರು ಗ್ರಾಮಾಂತರ ಜಿಲ್ಲೆ.

ದೊಡ್ಡಬಳ್ಳಾಪುರ ತಾಲ್ಲೂಕು ಗಂಡರಗೊ ಳಿಪುರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ

Image
  ದೊಡ್ಡಬಳ್ಳಾಪುರ ತಾಲ್ಲೂಕು ಗಂಡರಗೊ ಳಿಪುರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ದೊಡ್ಡಬಳ್ಳಾಪುರ ತಾಲ್ಲೂಕು ಹೊನ್ನವಾರ ಗ್ರಾಮ ಪಂಚಾಯಿತಿ ಗಂಡರಗೋಳಿಪುರ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ನಿರ್ದೇಶಕರುಗಳ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದ್ದಿದು ಮಧುರೆ ಹೋಬಳಿ ಕಾಂಗ್ರೆಸ್ ಮುಖಂಡರಾದ ಚುಂಚೆಗೌಡರು ನೂತನ ಆಯ್ಕೆಯಾದ ನಿರ್ದೇಶಕರುಗಳಾದ ಗಂಗೆಗೌಡರು, ಕೃಷ್ಣಮೂರ್ತಿ,ಚನ್ನಗಂಗಯ್ಯ, ಶಿವಕುಮಾರ್, ತಿಮ್ಮರಾಜು,ಸದಾಶಿವಯ್ಯ,ಅನ್ನಪೂರ್ಣ ಮ್ಮ,ಶಾಂತಮ್ಮ, ವಜೀರ್ ಸಾಹೇಬು,ಮುನಿರತ್ನಮ್ಮ, ದಾಳಬೈಲಯ್ಯ, ರಾಮಕೃಷ್ಣಯ್ಯ ಇವರುಗಳಿಗೆ ಹಾರ ಹಾಕಿ ಸನ್ಮಾನ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು,ಈ ಸಂದರ್ಭದಲ್ಲಿ ಚಂದ್ರ ಶೇಖರ್ ಕಾರ್ಯದರ್ಶಿ, ಆರ್ . ವಿ.ಗೌಡ ಹಾಗೂ ಮಧುರೆ ಹೋಬಳಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗಹಿಸಿದ್ದರು. ಆರ್. ನಾಗರಾಜು ಪಬ್ಲಿಕ್ ರಿಪೋರ್ಟ್ news ವರದಿಗಾರರು. ಬೆಂಗಳೂರು ಗ್ರಾಮಾಂತರ ಜಿಲ್ಲೆ.

ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಮಟ್ಟದ ಅರೇಹಳ್ಳಿ ಗುಡ್ಡದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚು ನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಜಯಬೇರಿ

Image
  ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಮಟ್ಟದ ಅರೇಹಳ್ಳಿ ಗುಡ್ಡದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚು ನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಜಯಬೇರಿ ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಅರೆಹಳ್ಳಿ ಗುಡ್ಡದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಜಯಭೇರಿ ಬಾರಿಸಿ ದಿನಾಂಕ 14/01/2024ರಂದು ಅಧ್ಯಕ್ಷ ರಾಗಿ ಎನ್ ಎಸ್ ರಾಜು ಮತ್ತು ಉಪಾಧ್ಯಕ್ಷರಾಗಿ ಎಸ್.ವೇಣುರವರನ್ನ ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ಮುಖಂಡರುಗಳಾದ ಎನ್ ರಾಮಾಂಜಿನಪ್ಪ.ಜಯರಾಂರೆಡ್ಡಿ.ನಾರಾಯಣಮ್ಮಗುಂಡಪ್ಪ ಹನುಮಂತಗೌಡ ಎ.ಮುನಿಯಪ್ಪ ನಂಜೇಗೌಡ ವೆಂಕಟೇಶ್ ಮತ್ತು ರಾಜಣ್ಣ ಅಶ್ವತ್ಥನಾರಾಯಣ ಪಟೇಲ್ ಶ್ರೀನಿವಾಸರೆಡ್ಡಿ ಹಾಗೂ ಎಲ್ಲಾ ಮುಖಂಡರುಗಳಿಗೆ ಧನ್ಯವಾದಗಳು ವಿಜೇತರಾದ ಅಭ್ಯರ್ಥಿಗಳು ಜಿ.ಆರ್.ನಾಗರಾಜ.ಎನ್.ಕ್ರಿಷ್ಣಪ್ಪ ಎ.ಕೆಂಪಣ್ಣ ಹೆಚ್ ಭೈರೇಗೌಡ ವೈ.ಪ್ರಬಾಕರರೆಡ್ಡಿ ಎ.ರಾಮಾಂಜಿನಪ್ಪ.ರಾಮಕ್ರಷ್ಣ.ಅಕ್ಕಯ್ಯಮ್ಮ ಲಕ್ಷ್ಮೀ ರವರಿಗೆ ಹ್ರತ್ಪೊರ್ವಕವಾದ ಅಭಿನಂದನೆಗಳು

ದೊಡ್ಡಳ್ಳಾಪುರದ ರೈಲ್ವೇ ಸ್ಟೇಷನ್ ಬಳಿ ನೂತನವಾಗಿ A1 ಬಿರಿಯಾನಿ ಪಾಯಿಂಟ್ ಪ್ರಾರಂಭ

Image
  ದೊಡ್ಡಳ್ಳಾಪುರದ ರೈಲ್ವೇ ಸ್ಟೇಷನ್ ಬಳಿ ನೂತನವಾಗಿ A1 ಬಿರಿಯಾನಿ ಪಾಯಿಂಟ್ ಪ್ರಾರಂಭ ದೊಡ್ಡಬಳ್ಳಾಪುರ ನಗರದ ರೈಲ್ವೆ ನಿ ಲ್ದಾಣದ ಹೈವೇ ಮುಖ್ಯ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ A1 ಬಿರಿಯಾನಿ ಪಾಯಿಂಟ್ ಉದ್ಘಾಟನೆ ನೆರವೇರಿಸಿದ ದೊಡ್ಡ ಬಳ್ಳಾಪುರ ಮಾಜಿ ಶಾಸಕರಾದ ವೆಂಕಟರಮಯ್ಯನವರು ಕಾಂಗ್ರೆಸ್ ಮುಖಂಡರಾದ ಬೈರೇಗೌಡರು, ರವಿಯವರು, ಕೃಷ್ಣಮೂರ್ತಿ ರವರು , ನಗರಸಭಾ ಸದಸ್ಯರು ಮಲ್ಲೇಶ್, ಹಾಗೂ ತಾಲೂಕಿನ ಹಿರಿ ಯ ಮುಖಂಡರು ಭಾಗವಹಿಸಿದ್ದರು , ಹೋಟೆಲ್ ಮಾಲೀಕ ರಾದ ಹರೀಶ್ ನಾಯಕ್, ಪುನೀತ್ ನಾಯಕ್, ನವೀನ್ ವಜ್ರ, ಲೋಕೇಶ್ ನಾಯಕ್ ಸಹೋದರರು ಮಾತನಾಡಿ ಉತ್ತಮವಾದ ರುಚಿಕರವಾದ ಬಿರಿಯಾನಿ ನಮ್ಮಲ್ಲಿ ಸಿಗುವುದರ ಜೊತೆಗೆ ಮಟನ್ ಬಿರಿಯಾನಿ ಮಟನ್ ಚಾಪ್ಸ್, ಲೆಗ್ ಪೀಸ್, ಕಬಾಬ್, ಲಿವರ್ ಫ್ರೈ, ಬೋಟಿ, ತಲೆ ಮಾಂಸ, ಫಿಶ್ ಫ್ರೈ , ಇನ್ನೂ ಹಲವು ಬಗೆಯ ತಿಂಡಿ ಕಡಿಮೆ ಬೆಲೆಗೆ ನಮ್ಮ ಹೋಟೆಲ್ ನಲ್ಲಿ ಉತ್ತಮ ರುಚಿ ಶುಚಿಯಲ್ಲಿ ಗ್ರಾಹಕರಿಗೆ ಕೈಗೆ ಎಟಕುವ ಬೆಲೆಯಲ್ಲಿ ದೊರಕುತ್ತದೆ ಎಂದು ತಿಳಿಸಿ ತಾಲೂಕಿನ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಂತೂ ಪ್ರಧಾನಿ ಭೇಟಿಯಾದ ಸಿಎಂ...ತುರ್ತಾಗಿ 18,177.44 ಕೋಟಿ ಬರ ಪರಿಹಾರ ಬಿಡುಗಡೆಗೆ ಮನವಿ ಸಲ್ಲಿಸಿದ ಸಿದ್ರಾಮಯ್ಯ...*

Image
ಅಂತೂ ಪ್ರಧಾನಿ ಭೇಟಿಯಾದ ಸಿಎಂ...ತುರ್ತಾಗಿ 18,177.44 ಕೋಟಿ ಬರ ಪರಿಹಾರ ಬಿಡುಗಡೆಗೆ ಮನವಿ ಸಲ್ಲಿಸಿದ ಸಿದ್ರಾಮಯ್ಯ...* ನವದೆಹಲಿ, ಡಿ. 19 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177.44 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದರಲ್ಲಿ 4663.12 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,7577.86 ಕೋಟಿ ರೂ. ತುರ್ತು ಪರಿಹಾರ, 566.78 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363.68 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ. ರಾಜ್ಯದಲ್ಲಿ 236 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದರು. ಎನ್‌.ಡಿ.ಆರ್‌.ಎಫ್. ನಿಂದ 4663.12 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಲಾಗಿದೆ. ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು 2015-16 ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫ...