ಆರ್ ಡಿಪಿ ಆರ್ ಇಲಾಖೆಯ 1353 ಹುದ್ದೆಗಳ ನೇಮಕದಲ್ಲಿ ಬಾರೀ ಅಕ್ರಮ ತನಿಖೆಗೆ ರೈತೋದಯ ಹಸಿರು ಸೇನೆ ಆಗ್ರಹ.

 ಆರ್ ಡಿಪಿ ಆರ್ ಇಲಾಖೆಯ 1353 ಹುದ್ದೆಗಳ ನೇಮಕದಲ್ಲಿ ಬಾರೀ ಅಕ್ರಮ ತನಿಖೆಗೆ ರೈತೋದಯ ಹಸಿರು ಸೇನೆ ಆಗ್ರಹ.


   ಬೆಂಗಳೂರು ಅಕ್ಟೋಬರ್ 17; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 1353 ಅಭಿವೃದ್ಧಿ ಅಧಿಕಾರಿಗಳ ನೇಮಕದಲ್ಲಿ ಬಾರೀ ಪ್ರಮಾಣದ ಅಕ್ರಮ ನಡೆದಿದ್ದು,ಕೂಡಲೇ ಗೃಹ ಮಂತ್ರಿಗಳು ತಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡದಿದ್ದರೆ ರಾಜೀನಾಮೆ ನೀಡಿ ಇಲ್ಲವಾದರೆ ಬಾರೀ ಪ್ರಮಾಣದ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಹಸಿರು ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.



ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2018-19ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಪಿಡಿಒ ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ್ -1 ಹುದ್ದೆಗಳಿಗೆ ಆಯ್ಕೆಯಾಗಿರುವ ಒಂದು ಸಾವಿರ ಅಭ್ಯರ್ಥಿಗಳಿಗೆ ಆರ್ ಡಿಪಿಆರ್ ಇಲಾಖೆಯಿಂದ ಆದೇಶ ಪ್ರಮಾಣ ಪತ್ರ ನೀಡದೇ ನೇಮಕಾತಿಯಲ್ಲಿ ಅಕ್ರಮ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ 1353ಪಿಡಿಒ ಹುದ್ದೆಗಳನ್ನು ಮಾರಾಟ ಮಾಡಿದ್ದಾರೆ ಇಂತಹ ದೊಡ್ಡ ಮಟ್ಟದ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.


ನೊಂದ ಮಹಿಳೆ ಮೀನಾಕ್ಷಿ ಕೆಪಿಎಸ್ ಸಿಯಲ್ಲಿ 2015ರಲ್ಲಿ ಅದಿಸೂಚನೆ ಹೊರಡಿಸಿ 2017ರಲ್ಲಿ ಪರೀಕ್ಷೆ ಬರೆದಿದ್ದು 2018ರಲ್ಲಿ ಅನುಪಾತದ ಮೇಲೆ ಆಯ್ಕೆ ನಡೆದಿದ್ದು 2019ರಲ್ಲಿ ನೇಮಕಾತಿ ಪತ್ರ ನೀಡದೇ ಮೋಸ ಮಾಡಿದ್ದಾರೆ.ನಕಲಿ ಪಟ್ಟಿಯನ್ನು ತಯಾರಿಸಿ ನಾನು ಅಲ್ಲದೇ 1353 ನೇಮಕಾತಿ ಪಟ್ಟಿಯಲ್ಲಿರುವವರಿಗೆ ಮೋಸ ಮಾಡಿದ್ದಾರೆ.ಪ್ರಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಗಳಿಗೆ ಮಹಾ ಮೋಸ ಹಾಗೂ ಅನ್ಯಾಯವಾಗಿದೆ ಇದು ಸಂಪೂರ್ಣ ಸಂವಿಧಾನ ಉಲಂಘನೆಯಾಗಿದೆ ಈ ಕುರಿತು ರಾಜ್ಯಪಾಲರು,ರಾಷ್ಟಪತಿಗಳಿಗೆ ದೂರು ನೀಡಲಾಗಿದೆ ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.


ಚಿಕ್ಕಬಳ್ಳಾಪುರ ಜಿಲ್ಲೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಾಣಾಧಿಕಾರಿಗಳ ನೇಮಕಾತಿ ಪ್ರಾಧಿಕಾರ ಗಳಾಗಿದ್ದು, ನನಗೆ ಆದೇಶ ಪತ್ರ ನೀಡದೇ ನನ್ನ ಹೆಸರಿಗೆ ಬೇರೆ ನಕಲಿ ಅಭ್ಯರ್ಥಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಪಿಡಿಒ ಹುದ್ದೆ ನೀಡಿದ್ದಾರೆ,ನಾಗಮಣಿ ಕೆ ಮೂಲ ಹೆಸರನ್ನು ಬದಲಿಸಿ ಮೀನಾಕ್ಷಿ ಎಂದು ತಿದ್ದುಪಡಿ ಮಾಡಿ ಎಸ್ ಎಸ್ ಎಲ್ ಸಿ ಅರ್ಹತೆ ಹೊಂದಿರುವವರಿಗೆ ಹುದ್ದೆ ನೀಡಲಾಗಿದೆ ಎಂದು ಆರೋಪಿಸಿದರು.

Comments

Popular posts from this blog

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸುವರ್ಣ ಮಹೋತ್ಸವ