ಶಾಸಕಿ ನಯನ ಮೋಟಮ್ಮಗೆ ಸಚಿವ ಸ್ಥಾನ ನೀಡಲು ಒತ್ತಾಯ.

 ಶಾಸಕಿ ನಯನ ಮೋಟಮ್ಮಗೆ ಸಚಿವ ಸ್ಥಾನ ನೀಡಲು ಒತ್ತಾಯ.

   ಸುದ್ದಿ. ಬೆಂಗಳೂರು ಆಗಸ್ಟ್ 6;  ಡಿ.ಕೆ. ಶಿವಕುಮಾರ್ ಮುಖ್ಯ ಮಂತ್ರಿಗಳ ಸಂಪುಟದಲ್ಲಿ ಮಹಿಳೆಯರಿಗೆ ಒಂದು ಸ್ಥಾನವನ್ನು ಕೊಟ್ಟಿಲ್ಲ ಕಾರಣದಿಂದ ಇವರು ಕಾಂಗ್ರೇಸ್ ಪಕ್ಷದ ಶಿಸ್ತು ಮತ್ತು ಕೆಲಸದಲ್ಲಿ ಕ್ಷೇತ್ರದಲ್ಲಿ ಜನ ಮೆಚ್ಚಿದ ನಾಯಕಿಯಾಗಿ ಕೆಲಸ ಮಾಡಿದ ನಯನ ಮೋಟಮ್ಮ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ಸೇನೆ ಒತ್ತಾಯಿಸಿದೆ.



ಬೆಂಗಳೂರು ಕಬ್ಬನ್ ಉದ್ಯಾನದಲ್ಲಿ ಸರಳ ಪ್ರತಿಭಟನೆ ನಡೆಸಿ ಸುದ್ದಿಗೋಷ್ಠಿ ನಡೆಸಿದ ಬಿ.ಸುಮಾ ಬಸವಲಿಂಗಯ್ಯ, ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು. ಎಂಬಂತೆ ತಾಯಿ ಮೋಟಮ್ಮನವರು ಸಚಿವರಾಗಿ ಸ್ತ್ರೀ ಶಕ್ತಿ ಗುಂಪನ್ನು 2 ಲಕ್ಷಕ್ಕಿಂತ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ ಮತ್ತು ಎ.ಐ.ಸಿ.ಸಿಯಲ್ಲಿ ಕಾರ್ಯಕಾರಣಿ ಸದಸ್ಯರಾಗಿ ಮತ್ತು ವಿಧಾನಪರಿಷತ್‌ನಲ್ಲಿ ವಿರೋಧಪಕ್ಷದ ನಾಯಕಿಯಾಗಿ ರಾಜ್ಯ ಕಂಡ ದಕ್ಷ ಆಡಳಿತ ನೀಡಿದ್ದಾರೆ.ನಯನ ಮೋಟಮ್ಮ ವಿದ್ಯಾರ್ಹತೆ, ಸೌಮ್ಯತೆ, ಪಕ್ಷದಲ್ಲಿ ಶಿಸ್ತಿನ ಶಿಫಾಯಿ ಇರುವುದರಿಂದ ಪಕ್ಷದ ಯುವ ತರುಣೆ ರಾಜ್ಯದಲ್ಲಿ ಕೆಲಸ ಮಾಡುವುದಕ್ಕೆ ಆಸಕ್ತಿ ಇರುವ ಹಿನ್ನಲೆಯಲ್ಲಿ ಡಿ.ಕೆ.ಸಂಪುಟದಲ್ಲಿ ಮಹಿಳೆಯರಾದ ನಯನ ಮೋಟಮ್ಮರವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ