ತಿಪಟೂರು ಕ್ಷೇತ್ರದ ಶಾಸಕ ಕೆ. ಷಡಕ್ಷರಿಯವರಿಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಸ್ಥಾನ ನೀಡವಂತೆ ಒತ್ತಾಯ.



 ತಿಪಟೂರು ಕ್ಷೇತ್ರದ ಶಾಸಕ ಕೆ. ಷಡಕ್ಷರಿಯವರಿಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಸ್ಥಾನ ನೀಡವಂತೆ ಒತ್ತಾಯ.


  ಬೆಂಗಳೂರು ಮೇ 30;   ರಾಜ್ಯದಲ್ಲಿ ನಡೆದ 2030 ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ 39 ಶಾಸಕರ ವೀರಶೈವ ಲಿಂಗಾಯತ ಸಮಾಜ ಆಯ್ಕೆ ಮಾಡಿ ಕಳಿಸಿದ್ದು, ನೊಳಂಬ ಲಿಂಗಾಯತ ಸಮುದಾಯಕ್ಕೆ ಸೇರಿದ ಕೆ.ಷಡಕ್ಷರಿಯವರನ್ನು

ಸಚಿವರನ್ನಾಗಿ ಆಯ್ಕೆ ಮಾಡಬೇಕೆಂದು ನೊಳಂಬ ಲಿಂಗಾಯತ ಸಂಘ ಒತ್ತಾಯಿಸಿದೆ.

ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಗೌರವ ಕಾರ್ಯದರ್ಶಿ ಕೆ.ಬಿ.ಶಶಿಧರ್ ಕಾಮನಕೆರೆ,ಸಂಘದ ಅಧ್ಯಕ್ಷ  ಬಿಳಿಗೆರೆ ಕೆ.ಚಂದ್ರಶೇಖರ್,

ಕಲ್ಪತರು ನಾಡು ತಿಪಟೂರು ಕ್ಷೇತ್ರದಿಂದ 4 ಬಾರಿ ಷಡಕ್ಷರಿಯವರು ಜಯಬೇರಿ ಬಾರಿಸಿದ್ದು ದಕ್ಷ ಹಾಗೂ ಪ್ರಮಾಣಿಕವಾಗಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಉತ್ತಮ  ಸಹಕಾರಿಗಳಾಗಿದ್ದಾರೆ, ರಾಜ್ಯದ ಭೂ ಅಭಿವೃದ್ಧಿ ಬ್ಯಾಂಕಿಗೆ 2 ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮಾಜದ ಪ್ರಮುಖ ನಾಯಕರಾಗಿದ್ದಾರೆ, ಆದ್ದರಿಂದ ಅವರಿಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಸ್ಥಾನ ನೀಡುವುದರ ಮೂಲಕ ಅವರ ಸೇವೆಯನ್ನು ರಾಜ್ಯದ ಉದ್ದಗಲಕ್ಕೂ ಬಳಸಿಕೊಳ್ಳಬೇಕು,ಕ್ಯಾಬಿನೆಟ್ ದರ್ಜೆಯ ಮಂತ್ರಿಯನ್ನಾಗಿ ಮಾಡಬೇಕು ಎಂದರು.

 ಈ ಹಿಂದೆ ಈ ಕ್ಷೇತ್ರದ ಶಾಸಕರಾಗಿದ್ದ ನೊಳಂಬ  ಸಮಾಜದ ಟಿ. ಹೆಚ್. ಮಂಜುನಾಥ್‌ ಅವರಿಗೆ ಕಾಂಗ್ರೆಸ್ ಪಕ್ಷವ ಮಂತ್ರಿ ಪದವಿಯನ್ನು ನೀಡಿತ್ತು,

ನೊಳಂಬ ಲಿಂಗಾಯತ ಸಮಾಜ ತುಮಕೂರು ಜಿಲ್ಲೆ ಒಳಗೊಂಡು ಮಧ್ಯ ಕರ್ನಾಟಕದ 12 ಜಿಲ್ಲೆಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಬಹುತೇಕ ಕ್ಷೇತ್ರಗಳಲ್ಲಿ ರಾಜಕೀಯ ತೀರ್ಮಾನಗಳನ್ನು ನಿರ್ಣಾಯಕವಾಗಿ ತೆಗೆದುಕೊಳ್ಳುವ ಶಕ್ತಿಯನ್ನು ಸಮಾಜ ಹೊಂದಿದೆ. ಕ್ಯಾಬಿನೆಟ್‌ನಲ್ಲಿ ಷಡಕ್ಷರಿಯವರಿಗೆ ಅವಕಾಶ ಕಲ್ಪಿಸಿ ಸೇವೆ ಮಾಡಲು ಅನುವು ಮಾಡಿಕೊಡುವ ಮೂಲಕ ಈ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ