ಮಿಷನ್ ರೋಡ್‌ನಲ್ಲಿ ಲೋಕಾರ್ಪಣೆಗೊಂಡ ಸೂಪರ್-ಸ್ಪೆಷಾಲಿಟಿ ಎನ್.ಯು ಆಸ್ಪತ್ರೆ

 ಮಿಷನ್ ರೋಡ್‌ನಲ್ಲಿ ಲೋಕಾರ್ಪಣೆಗೊಂಡ ಸೂಪರ್-ಸ್ಪೆಷಾಲಿಟಿ ಎನ್.ಯು ಆಸ್ಪತ್ರೆ


    ಏಪ್ರಿಲ್ 30; ಬುಧವಾರ ಮಿಷನ್ ರೋಡ್‌ನಲ್ಲಿ ಅತ್ಯಾಧುನಿಕ, ಸೌಲಭ್ಯಗಳನ್ನು ಹೊಂದಿರುವ ನೂತನ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯನ್ನು ಎನ್.ಯು ಆಸ್ಪತ್ರೆ ಉದ್ಘಾಟನೆಗೊಂಡಿತು. ಇದರೊಂದಿಗೆ ಯೂರಾಲಜಿ, ನೆಫ್ರಾಲಜಿ, ಫರ್ಟಿಲಿಟಿ ಮತ್ತು ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಯಲ್ಲಿ ತನ್ನ ನಾಯಕತ್ವವನ್ನು ಆಸ್ಪತ್ರೆ ಇನ್ನಷ್ಟು ಬಲಪಡಿಸಿಕೊಂಡಂತಾಗಿದೆ.


ಈ ಸೌಲಭ್ಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ಉ ದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸದರು ಹಾಗೂ ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ನಟ ಮತ್ತು ಚಲನಚಿತ್ರ ನಿರ್ದೆಶಕ  ರಮೇಶ್ ಅರವಿಂದ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. 


ಈ ಆಸ್ಪತ್ರೆಯನ್ನು ಮುಂದಿನ ತಲೆಮಾರಿನ ಆರೋಗ್ಯ ಸೇವಾ ಕೇಂದ್ರವಾಗಿ ವಿನ್ಯಾಸಗೊಳಿಸಲಾಗಿದ್ದು, ಅತ್ಯಾಧುನಿಕ ಡಿಜಿಟಲ್ ಮೂಲಸೌಕರ್ಯ ಮತ್ತು ರೋಗಿ-ಕೇಂದ್ರಿತ ವಿನ್ಯಾಸದ ಸಂಯೋಜನೆಯೊಂದಿಗೆ ಸುಸಜ್ಜಿತವಾಗಿ ಕಟ್ಟಲ್ಪಟ್ಟಿದೆ. ಇನ್ನು ಎನ್ ಯು ಆಸ್ಪತ್ರೆಯ ಛೇರ್ಮನ್ ಡಾ ವೆಂಕಟೇಶ್ ಕೃಷ್ಣಮೂರ್ತಿ ಮಾತನಾಡಿ, ಈ ಆಸ್ಪತ್ರೆ ಸೂಪ‌ರ್-ಸೆಷಾಲಿಟಿ ಚಿಕಿತ್ಸೆಯನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. 


ಕ್ಲಿನಿಕಲ್ ಪರಿಣತಿ ಮತ್ತು ಡಿಜಿಟಲ್ ನವೀನತೆಯ ಸಮನ್ವಯದ ಮೂಲಕ ಉತ್ತಮ  ಫಲಿತಾಂಶಗಳು ಹಾಗೂ ಉನ್ನತ ಮಟ್ಟದ ಚಿಕಿತ್ಸಾ ಅನುಭವವನ್ನು ನೀಡುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ರೂಪಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಡಾ ಪ್ರಸನ್ನ ವೆಂಕಟೇಶ್ ಎಂ. ಕೆ. ಹೇಳಿದ್ದಾರೆ. ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವುದು ಅತ್ಯಂತ ಅಗತ್ಯವಾಗಿದ್ದು, ಇಂತಹ ಮುಂದಾಳತ್ವಗಳು ನಾಗರಿಕರಿಗೆ ಗುಣಮಟ್ಟದ ಚಿಕಿತ್ಸೆಗೆ ಸುಲಭಪ್ರವೇಶವನ್ನು ಒದಗಿಸುತ್ತವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ