ಸೈಕಲ್ ಏರಿ ಜಾರಿ ಬಿದ್ದ ಡಿಸಿಎಂ ಡಿಕೆ ಶಿವಕುಮಾರ್​! ವಿಡಿಯೋ ವೈರಲ್…

 

ಸೈಕಲ್ ಏರಿ ಜಾರಿ ಬಿದ್ದ ಡಿಸಿಎಂ ಡಿಕೆ ಶಿವಕುಮಾರ್​! ವಿಡಿಯೋ ವೈರಲ್…

ಬೆಂಗಳೂರು: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂದೆ ಇಂದು ಆಯೋಜಿಸಿದ್ದ ಮ್ಯಾರಥಾನ್ ಅನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಿದರು.

ಇನ್ನೂ ಈ ವೇಳೆ ಡಿಸಿಎಂ ಡಿಕೆಶಿ ವಿಧಾನಸೌಧದ ಆವರಣದ ಸುತ್ತ ಸೈಕಲ್ ನಲ್ಲೇ ರೌಂಡ್ಸ್​ ಹಾಕಿದ್ದಾರೆ. ಕೆಂಗಲ್ ಗೇಟ್ ಬಳಿ ಬರುವಾಗ ನಿಯಂತ್ರಣ ತಪ್ಪಿ ಡಿಕೆಶಿ ಕೆಳಗೆ ಬಿದ್ದಿರುವ ಘಟನೆ ಕೂಡ ನಡೆದಿದೆ.

ಸೈಕಲ್​ ಹೊಡೆಯುತ್ತಾ ಬರ್ತಿದ್ದ ಡಿಸಿಎಂಗೆ ನಿಯಂತ್ರಣ ತಪ್ಪಿ ಆಗಿ ವಿಧಾನಸೌಧದ ಮೆಟ್ಟಲುಗಳ ಮೇಲೆಯೇ ಜಾರಿ ಬಿದ್ದಿದ್ದಾರೆ. ಪಕ್ಕದಲ್ಲೇ ಇದ್ದ ಬೆಂಬಲಿಗರು ಅವರ ಸಹಾಯಕ್ಕೆ ಬಂದು ಮೇಲಕ್ಕೆ ಎತ್ತಿದ್ದಾರೆ. ಸದ್ಯ ಸೈಕಲ್ ನಿಲ್ಲಿಸುವ ವೇಳೆಯಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದ ಡಿಕೆಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"