ಕರ್ನಾಟಕದಲ್ಲಿ ಶಿಕ್ಷಣ ಸಬಲೀಕರಣ ಉಪಕ್ರಮ, ಈಝಿ ಆಕ್ಸೆಸ್ ಸರ್ವೀಸಸ್ ವತಿಯಿಂದ ಕರ್ನಾಟಕದ ಎಲ್ಲೆಡೆ ಶಿಕ್ಷಣ ಜಾಗೃತಿ ಅಭಿಯಾನ
ಕರ್ನಾಟಕದಲ್ಲಿ ಶಿಕ್ಷಣ ಸಬಲೀಕರಣ ಉಪಕ್ರಮ, ಈಝಿ ಆಕ್ಸೆಸ್ ಸರ್ವೀಸಸ್ ವತಿಯಿಂದ ಕರ್ನಾಟಕದ ಎಲ್ಲೆಡೆ ಶಿಕ್ಷಣ ಜಾಗೃತಿ ಅಭಿಯಾನ
ಭಾರತೀಯ ಆಡಳಿತ ಒಕ್ಕೂಟ(ಜಿಎಫ್‌ಐ)ದ ಸಹಯೋಗದೊಂದಿಗೆ ಈಝಿ ಆಕ್ಸೆಸ್ ಸರ್ವೀಸಸ್ ಸಂಸ್ಥೆಯು, ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ಎಬಿಸಿ), ಎಪಿಎಎಆರ್ ಮತ್ತು ಹೊಸ ಡಿಜಿಟಲ್ ಶಿಕ್ಷಣ ಸುಧಾರಣೆಗಳ ಕುರಿತು ರಾಜ್ಯಾದ್ಯಂತ ಸಾರ್ವಜನಿಕ ಜಾಗೃತಿ ಉಪಕ್ರಮದ ನೇತೃತ್ವ ವಹಿಸಲಿವೆ ಎಂದು ತಿಳಿಸಿದ್ದಾರೆ.
ಬೆಂಗಳೂರು, ಜುಲೈ 3, 2026: ಈಝಿ ಆಕ್ಸೆಸ್ ಸರ್ವೀಸಸ್ ಕರ್ನಾಟಕದ ಎಲ್ಲೆಡೆ ಶಿಕ್ಷಣ ಜಾಗೃತಿ ಅಭಿಯಾನ ಪ್ರಾರಂಭಿಸುವುದಾಗಿ ಪ್ರಕಟಿಸಿದೆ.
ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ರಾಜ್ಯಮಟ್ಟದ ಪತ್ರಿಕಾಗೋಷ್ಠಿಯೊಂದಿಗೆ ಈ ಅಭಿಯಾನ ಅಧಿಕೃತವಾಗಿ ಪ್ರಾರಂಭವಾಗಿದ್ದು. ಮಾಧ್ಯಮ ಸಂಸ್ಥೆಗಳು, ಶಿಕ್ಷಣ ವೃತ್ತಿಪರರು, ಶೈಕ್ಷಣಿಕ ಸಂಸ್ಥೆಗಳು. ಸಾಮಾಜಿಕ ಸಂಸ್ಥೆಗಳು, ನೀತಿ ತಜ್ಞರು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಒಟ್ಟುಗೂಡಿಸಿ ಡಿಜಿಟಲ್ ಶಿಕ್ಷಣ ಮತ್ತು ರಾಷ್ಟ್ರೀಯ ಶೈಕ್ಷಣಿಕ ಸುಧಾರಣೆಗಳ ಭವಿಷ್ಯ ಕುರಿತು ಈ ಅಭಿಯಾನ ಚರ್ಚಿಸಲಿದ್ದು, ಪ್ರಮುಖ ಶೈಕ್ಷಣಿಕ ಸುಧಾರಣೆಗಳು ಮತ್ತು ಭಾರತ ಸರ್ಕಾರದ ಉಪಕ್ರಮಗಳ ಬಗ್ಗೆ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮತ್ತು ಸೌಲಭ್ಯ ವಂಚಿತ ಪ್ರದೇಶಗಳಲ್ಲಿರುವವರಲ್ಲಿ ವ್ಯಾಪಕ ಸಾರ್ವಜನಿಕ ಜಾಗೃತಿ ಮೂಡಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶ ಹೊಂದಿದೆ.
ವಾಣಿಜ್ಯ ಕಾರ್ಯಕ್ರಮದಂತೆ ಇರದೇ, ಈ ಕಾರ್ಯಕ್ರಮವನ್ನು ಸಂಪೂರ್ಣ ವಿಭಿನ್ನ ರೀತಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಆಯೋಜಿಸಲಾಗಿದ್ದು, ಜಾಗೃತಿ ಮೂಡಿಸಲು, ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಅಧಿಕೃತ ಶೈಕ್ಷಣಿಕ ಮಾಹಿತಿಯ ಹರಡುವಿಕೆಯನ್ನು ಬಲಪಡಿಸಲು ಇದನ್ನು ಆಯೋಜಕರು ಆಯೋಜಿಸಿದ್ದಾರೆ.
ಪತ್ರಿಕಾಗೋಷ್ಠಿಯ ಪ್ರಮುಖ ವಿಷಯಗಳು:
1. ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ (ಎಪಿಎಎಆರ್)
2. ಶೈಕ್ಷಣಿಕ ಬ್ಯಾಂಕ್ ಆಫ್ ಕ್ರೆಡಿಟ್ಸ್ (ಎಬಿಸಿ)
3. ಒಂದು ದೇಶ ಒಂದು ವಿದ್ಯಾರ್ಥಿ ಗುರುತಿನ ಚೀಟಿ
3. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಪಿ)
4. ಡಿಜಿಟಲ್ ಶೈಕ್ಷಣಿಕ ದಾಖಲೆಗಳು
5. ವಿದ್ಯಾರ್ಥಿ ಮಾನ್ಯತೆಗಳ ವರ್ಗಾವಣೆ ಮತ್ತು ಶೈಕ್ಷಣಿಕ ಚಲನಶೀಲತೆ
6. ಡಿಜಿಟಲ್ ಶಿಕ್ಷಣ ಪರಿಸರ ವ್ಯವಸ್ಥೆ
7. ಸರ್ಕಾರಿ ಶೈಕ್ಷಣಿಕ ಕಲ್ಯಾಣ ಯೋಜನೆಗಳು
8. ವಿದ್ಯಾರ್ಥಿ ಡಿಜಿಟಲ್ ಗುರುತು
9. ಭವಿಷ್ಯಕ್ಕೆ ಸಿದ್ಧವಾದ ಶಿಕ್ಷಣ ವ್ಯವಸ್ಥೆ
10. ತಂತ್ರಜ್ಞಾನ-ಚಾಲಿತ ಶೈಕ್ಷಣಿಕ ಆಡಳಿತ
11. ಗ್ರಾಮೀಣ ಮತ್ತು ಹಿಂದುಳಿದ ಸಮುದಾಯಗಳ ಬಗ್ಗೆ ಜಾಗೃತಿ, ಇತ್ಯಾದಿ.
ಅಲ್ಲದೆ, ಉಪಕ್ರಮಗಳ ಉದ್ದೇಶಗಳು, ಪ್ರಯೋಜನಗಳು ಮತ್ತು ಪ್ರಾಯೋಗಿಕ ಅನುಷ್ಠಾನಗಳ ವಿವರಣೆ ಮತ್ತು ಹೆಚ್ಚಿನ ಸಾರ್ವಜನಿಕ ಅರಿವು, ಶೈಕ್ಷಣಿಕ ಅವಕಾಶಗಳ ಪ್ರವೇಶವನ್ನು ಹೇಗೆ ಸುಧಾರಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ.
ಸಂಘಟಕರ ಸಂದೇಶ:
"ರಾಷ್ಟ್ರೀಯ ಅಭಿವೃದ್ಧಿಗೆ ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಶಿಕ್ಷಣ ಜಾಗೃತಿ ಒಂದಾಗಿದೆ. ಶೈಕ್ಷಣಿಕ ಸುಧಾರಣೆಗಳು ಮತ್ತು ಸರ್ಕಾರಿ ಉಪಕ್ರಮಗಳ ಬಗ್ಗೆ ಅಧಿಕೃತ ಮಾಹಿತಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಸಮಾನವಾಗಿ ತಲುಪಬೇಕು. ಈ ರಾಜ್ಯವ್ಯಾಪಿ ಅಭಿಯಾನದ ಮೂಲಕ, ಜಾಗೃತಿ ಕರ್ನಾಟಕದ ಎಲ್ಲೆಡೆ ಪ್ರತಿ ಜಿಲ್ಲೆ, ಪ್ರತಿ ಶಿಕ್ಷಣ ಸಂಸ್ಥೆ ಮತ್ತು ಪ್ರತಿ ಮನೆಯನ್ನು ತಲುಪುವಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ. ಈ ಸಂದೇಶವನ್ನು ರಾಜ್ಯದ ಮೂಲೆ ಮೂಲೆಗೂ ಕೊಂಡೊಯ್ಯುವಲ್ಲಿ ಮಾಧ್ಯಮ ಸಮುದಾಯದ ಸಹಕಾರವನ್ನು ನಾವು ಪ್ರಾಮಾಣಿಕವಾಗಿ ಬಯಸುತ್ತೇವೆ." ಇಂದು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ ಗಣ್ಯರು ತಿಳಿಸಿದ್ದಾರೆ.
ಈಝಿ ಆಕ್ಸೆಸ್ ಸರ್ವೀಸಸ್ ಕುರಿತು:
ಈಝಿ ಅಕ್ಸೆಸ್ ಸರ್ವೀಸಸ್ ಕಂಪನಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಇ-ಆಡಳಿತ, ಮಾಹಿತಿ ತಂತ್ರಜ್ಞಾನ, ಸರ್ಕಾರದಿಂದ ನಾಗರಿಕರಿಗೆ (ಜಿ2ಸಿ) ಸೇವೆಗಳು ಮತ್ತು ಡಿಜಿಟಲ್ ಸಾರ್ವಜನಿಕ ಜಾಗೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಬಹುವಿಭಾಗೀಯ ಸಾರ್ವಜನಿಕ ಸೇವಾ ಸಂಸ್ಥೆಯಾಗಿದೆ. ಈ ಸಂಸ್ಥೆಯು ವಿಸ್ತಾರವಾದ ಸೇವಾ ಜಾಲವನ್ನು ಅಭಿವೃದ್ಧಿಪಡಿಸಿದೆಯಲ್ಲದೇ ಭಾರತದ ಎಲ್ಲೆಡೆ ಸಾರ್ವಜನಿಕ ಸೇವೆಗಳಿಗೆ ನಾಗರಿಕರ ಸಂಪರ್ಕವನ್ನು ಸುಧಾರಿಸುವ ಗುರಿ ಹೊಂದಿರುವ ಜಾಗೃತಿ ಉಪಕ್ರಮಗಳನ್ನು ನಡೆಸುತ್ತದೆ ಎಂದು ಮೂಲಗಳು ತಿಳಿಸಿವೆ.


Comments
Post a Comment