ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ
ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ
ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ ಮಾಡುತ್ತಿರುವುದು ಉತ್ತರ ಕರ್ನಾಟಕ ಜನತೆಗೆ ಮಾಡುವ ಅನ್ಯಾಯ, ತಾರತಮ್ಯ, ಮಲತಾಯಿ ಧೋರಣೆಯಾಗಿದೆ. ಭೂಸ್ವಾದೀನ ಮಾಡಿಕೊಂಡು ಪರಿಹಾರ ಕೊಡದೆ ಸಂತ್ರಸ್ತರಿಗೆ ಅನ್ಯಾಯ ಮಾಡಲಾಗಿದೆ. ನ್ಯಾಯವಾದ ಬೆಲೆ ಕೊಡಿ ಇಲ್ಲವೇ ಯೋಜನೆ ಕೈಬಿಡಿ ಎಂದು ಸಂತ್ರಸ್ತರು ಅಗ್ರಹಿಸುತ್ತಿದ್ದಾರೆ. ಸನ್ಮಾನ್ಯ ಸಿದ್ದರಾಮಯ್ಯ ಅವರು ನಮ್ಮ ನಡಿಗೆ ಕೃಷ್ಣಾ ಕಡೆಗೆ ಎಂದು ಪಾದಯಾತ್ರೆ ಮಾಡಿದರು. ವರ್ಷಕ್ಕೆ 40,000 ಕೋಟಿ ಹಣ ನೀಡಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಕೂಡಲಸಂಗಮದಲ್ಲಿ ಸಂಗಮನಾಥನ ಮೇಲೆ ಆಣೆ ಪ್ರಮಾಣ ಮಾಡಿದ್ದಾರೆ. ಬೆಳಗಾವಿಯ ಯೋಜನೆಯನ್ನು ನಮ್ಮ ಅವಧಿಯಲ್ಲಿಯೇ ಪೂರ್ಣಗೊಳಿಸುತ್ತೇವೆ ಎಂದು ಸಂತ್ರಸ್ತರಿಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಮಾತು ಕೊಟ್ಟಿದ್ದಾರೆ. ಕೃಷ್ಣಾ ನದಿಗೆ ಸೆಪ್ಟೆಂಬರ್ 6 ರಂದು ಬಾಗಿನ ಅರ್ಪಿಸಲು ಬಂದಾಗ ವಾರದಲ್ಲಿ ಬೆಲೆ ನಿಗದಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಆದರೆ ಇಲ್ಲಿಯವರೆಗೂ ಬೆಲೆ ನಿಗದಿ ಮಾಡದೆ ಯಾವುದೇ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳದೆ ಕೇವಲ ನೆಪಕ್ಕಾಗಿ ಸಭೆಗಳನ್ನು ಮಾಡಿ ಕಾಲಹರಣ ಮಾಡುತ್ತಿದ್ದಾರೆ. ಯೋಜನೆಗೆ ಭೂಮಿಯನ್ನು ಕಳೆದುಕೊಂಡ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಭೂಮಿಯನ್ನು ಅಭಿವೃದ್ಧಿಪಡಿಸಲಾಗದೆ ಪರಿಹಾರ ಹಣವನ್ನು ಪಡೆಯದೆ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. 2013ರ ಭೂಸ್ವಾಧೀನ ಕಾಯ್ದೆಯನ್ನು ಕೇಂದ್ರದ ಕಾಂಗ್ರೆಸ್ ಸರ್ಕಾರವೇ ತಂದಿದ್ದು ಅದನ್ನು ಪ್ರಸ್ತುತ ಕಾಂಗ್ರೆಸ್ ಸರಕಾರ ಅನುಷ್ಠಾನಗೊಳಿಸುತ್ತಿಲ್ಲ. ನೆಪ ಹುಡುಕಿ ಕಾಲ ಹರಣ ಮಾಡುವುದು ಸರಿಯಲ್ಲ ಆಗದಿದ್ದರೆ ಯೋಜನೆ ಕೈಬಿಡಿ ನಮ್ಮ ಭೂಮಿ ನಮಗೆ ನೀಡಿ ಎಂದು ಸಂತ್ರಸ್ತರು ಅಗ್ರಹಿಸುತ್ತಿದ್ದಾರೆ. ವಿಳಂಬವಾದರೆ ಯೋಜನಾ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ ಎಂಬುದನ್ನು ಸರ್ಕಾರ ಅರಿಯಬೇಕು. ಸರ್ವ ಪಕ್ಷಗಳ ಸಭೆ ಕರೆದು ಸಂತ್ರಸ್ತರ ಬೇಡಿಕೆಯ ಬೆಲೆ ಒಣ ಬೇಸಾಯ ಭೂಮಿಗೆ ಒಂದು ಎಕರೆಗೆ 40 ಲಕ್ಷ ರೂಪಾಯಿ ನೀರಾವರಿ ಭೂಮಿಗೆ 50 ಲಕ್ಷ ರೂಪಾಯಿ ಕನಿಷ್ಠವಾದ ಮತ್ತು ಸೂಕ್ತವಾದ ಬೆಲೆಯಾಗಿದೆ. ಈ ದರವನ್ನು ನಿಗದಿ ಮಾಡಬೇಕು ಮತ್ತು ಕಾಲಮಿತಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಬೇಕು. ವಿಳಂಬವಾದರೆ ನಿಗದಿಪಡಿಸಿದ ದರಕ್ಕೆ ಪ್ರತಿ ವರ್ಷಕ್ಕೆ ಶೇಕಡ 10 ರಷ್ಟು ಹೆಚ್ಚುವರಿ ಪರಿಹಾರದ ಮೊತ್ತ ನೀಡಬೇಕು. 1964 ರಲ್ಲಿ ಲಾಲ್ ಬಹದ್ದೂರ್
ಶಾಸ್ತ್ರಿ ಅವರು ಅಡಿಗಲ್ಲು ಹಾಕಿ ಪ್ರಾರಂಭಿಸಿದ ಯೋಜನೆ ಈ ವರೆಗೂ ಕುಂಟುತ್ತ ಸಾಗುತ್ತಿದೆ. ಈ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಪ್ರಸ್ತುತ ಸಿದ್ದರಾಮಯ್ಯನವರ ಸರ್ಕಾರ ಸಂತ್ರಸ್ತರಿಗೆ ಭರವಸೆ ನೀಡಿದೆ.
ಆದರೆ ಬೆಲೆ ನಿಗದಿ ಮಾಡದೆ ಯಾವುದೇ ರೀತಿಯ ಹಣವನ್ನು ಬಿಡುಗಡೆ ಮಾಡದೆ ಕಾಲಹರಣ ಮಾಡುತ್ತಿರುವುದು ಸಂತ್ರಸ್ತರಿಗೆ ನೋವನ್ನುಂಟು ಮಾಡಿದೆ. ಸರ್ಕಾರ ಮೇಕೆದಾಟು ನಂತಹ ಸಣ್ಣ ನೀರಾವರಿ ಯೋಜನೆಗಳಿಗೆ ಮಹತ್ವವನ್ನು ನೀಡುವಷ್ಟು ಉತ್ತರ ಕರ್ನಾಟಕ ಭಾಗದ ಮಹದಾಯಿ, ಗುತ್ತಿ ಬಸವಣ್ಣ ಮುಂತಾದ ನೀರಾವರಿ ಯೋಜನೆಗಳಿಗೆ ನೀಡುವುದಿಲ್ಲ. ಕಾವೇರಿ ಗೆ ಇರುವ ಕಳಕಳಿಯು ಕೃಷ್ಣಾಗೆ ಇಲ್ಲದಾಗಿದೆ. ಈ ರೀತಿಯ ಪದೇಪದೇ ಮಲತಾಯಿ ಧೋರಣೆಯನ್ನು ಅನುಭವಿಸುವ ಉತ್ತರ ಕರ್ನಾಟಕ ಜನರು ಪ್ರತ್ಯೇಕ ರಾಜ್ಯವನ್ನು ಕೇಳುತ್ತಿದ್ದಾರೆ. ರಾಜ್ಯ ಏಕೀಕರಣ ಅದಾಗಿನಿಂದ ಇಲ್ಲಿಯವರೆಗೆ ನಮ್ಮ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ. ಉತ್ತರ ಕರ್ನಾಟಕ ಹೋರಾಟ ಸಮಿತಿಯು ಕೋಟಿ ಜನರಿಂದ ಅಭಿಪ್ರಾಯ ಸಂಗ್ರಹಣ ಅಭಿಯಾನವನ್ನು ಮಾಡುತ್ತಿದೆ. ದಿನಾಂಕ 10.09.2025ರ ಮಾಹಿತಿಯ ಪ್ರಕಾರ 92,87,653 (ತೊಂಬತ್ತೆರಡು ಲಕ್ಷ ಎಂಬತ್ತೇಳು ಸಾವಿರದ ಆರನೂರ ಐವತ್ತೂರು) ಜನರು ಪ್ರತ್ಯೇಕ ರಾಜ್ಯದ ಪರವಾಗಿ ಅಭಿಪ್ರಾಯ ನೀಡಿ ಸಹಿ ಮಾಡಿದ್ದಾರೆ. ಕೆಂಪೇಗೌಡರ ಜಯಂತಿಯದು ಎಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಪೂಜ್ಯ ಶ್ರೀ ಚಂದ್ರಶೇಖರ ಸ್ವಾಮೀಜಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿ ಕೊಡಿ ಎಂದು ಆಗ್ರಹಿಸಿದ್ದಾರೆ. ಅನೇಕ ಸ್ವಾಮೀಜಿಗಳು, ಸಾಹಿತಿಗಳು, ಸಾಮಾಜಿಕ ಚಿಂತಕರು ಬೆಂಬಲಿಸಿದ್ದಾರೆ. ಪದೇ ಪದೇ ಉತ್ತರ ಕರ್ನಾಟಕ ಭಾಗದಲ್ಲಿ ಕೃಷಿ, ನೀರಾವರಿ, ಶಿಕ್ಷಣ, ಸಾಹಿತ್ಯಭಾಷೆ, ಅಧ್ಯಾತ್ಮ.ಆರೋಗ್ಯ,ರಾಜಕಾರಣ. ಕ್ರೀಡೆ, ಕಲೆ, ಸಂಸ್ಕೃತಿ, ಸಂಗೀತ, ರಸ್ತೆ, ರೈಲು, ವಿಮಾನ, ಮಾಧ್ಯಮ, ಉದ್ಯಮ, ಪ್ರವಾಸೋದ್ಯಮ, ಚಲನಚಿತ್ರ, ಆಡಳಿತ, ತೋಟಗಾರಿಕೆ, ಮೂಲಭೂತ ಸೌಲಭ್ಯ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಆಗುತ್ತಿರುವ ಅನ್ಯಾಯ, ತಾರತಮ್ಯ, ಹಾಗೂ ಮಲತಾಯಿ, ಧೋರಣೆಯಿಂದಾಗಿ ಉತ್ತರ ಕರ್ನಾಟಕದ 15 ಜಿಲ್ಲೆಗಳ ಪ್ರತ್ಯೇಕ ರಾಜ್ಯವನ್ನು ರಚನೆ ಮಾಡಿಕೊಂಡು ಸಮೃದ್ಧ ನಾಡನ್ನು ಕಟ್ಟಿಕೊಳ್ಳಲು ಹೋರಾಟ ನಡೆಸಿದ್ದಾರೆ.ರಾಜ್ಯ ರಚನೆಗೆ ಬೇಕಾದ ಎಲ್ಲ ಸಂಪನ್ಮೂಲಗಳು ಇವೆ. ಆದ್ದರಿಂದ ಈ ಮೂಲಕ ಸನ್ಮಾನ್ಯ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ರಾಜ್ಯದ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ಒತ್ತಾಯವಿದೆ. ದೇಶದಲ್ಲಿ ಅನೇಕ ರಾಜ್ಯಗಳು ರಚನೆ ಆಗಿದೆ. ಕನ್ನಡ ಭಾಷೆಯ ಎರಡು ರಾಜ್ಯಗಳು ನಿರ್ಮಾಣವಾಗುವುದು ಹೆಮ್ಮೆಯ ಸಂಗತಿ. ಸುಲದ ಆಡಳಿತ ಮತ್ತು ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಉತ್ತರ ಕರ್ನಾಟಕ ಭಾಗದ ಎಲ್ಲ ಜನಪ್ರತಿನಿಧಿಗಳು ಸ್ವಾಭಿಮಾನದಿಂದ, ನಿರ್ಭಯವಾಗಿ ಪ್ರತ್ಯೇಕ ರಾಜ್ಯ ರಚನೆಗೆ ಸರ್ಕಾರವನ್ನು ಒತ್ತಾಯಿಸಬೇಕು
1) ಶಿವಕುಮಾರ ಮೇಟಿ, ಅಧ್ಯಕ್ಷರು : ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾ ಸಂಸ್ಥೆ, ಬೆಂಗಳೂರು
2) ರವಿ ಕುಮಟಗಿ, ಕಾರ್ಯದರ್ಶಿಗಳು : ರೈತರ ಹಕ್ಕುಗಳ ಹೋರಾಟ ಸಮಿತಿ, ಬಾಗಲಕೋಟ
3) ಡಾ: ಪಂಕಜ. ಚಲನಚಿತ್ರ ನಟಿ, ರಾಜ್ಯಾಧ್ಯಕ್ಷರು ಉತ್ತರ ಕರ್ನಾಟಕ ಹೋರಾಟ ಸಮಿತಿ ಮಹಿಳಾ ಘಟಕ
4) ಶಿವಪ್ಪ ಪಟ್ಟಣಶೆಟ್ಟಿ, ಹಿರಿಯ ಚಿಂತಕರು,ಬೆಂಗಳೂರು.
5) ನಾಗೇಶ ಗೋಲಶೆಟ್ಟಿ, ಅಧ್ಯಕ್ಷರು: ಉತ್ತರ ಕರ್ನಾಟಕ ಮುಳುಗಡೆ & ಪ್ರವಾಹ ಸಂತ್ರಸ್ತರ ಹಿತರಕ್ಷಣಾ ಸಮಿ
6) ಪ್ರದೀಪ ಹಿರೇಮಠ, ಕಲಾವಿದರು, ಸಂಚಾಲಕರು : ಉತ್ತರ ಕರ್ನಾಟಕ ಕಲಾವಿದರ ಸಂಘ,
?) ಉಮೇಶ ಅಂಗಡಿ, UKHS ಬೆಂಗಳೂರು
8) ಮಂಜುನಾಥ್, ಬೆಂಗಳೂರು.

Comments
Post a Comment