ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮಾಡಿದ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಟಿ. ಕೋನಪ್ಪರೆಡ್ಡಿ

 

ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮಾಡಿದ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಟಿ. ಕೋನಪ್ಪರೆಡ್ಡಿ


ಮಾಧ್ಯಮಗಳಿಗೆ ಹೇಳಿಕೆ ನೀಡಿದ "ರಾಜ್ಯ ಒಕ್ಕಲಿಗರ ಸಂಘದ ಟಿ. ಕೋನಪ್ಪರೆಡ್ಡಿ"!

01, ಜುಲೈ, 2026, ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಬೆಂಗಳೂರು: ಇಂದು ಬೆಂಗಳೂರು ನಗರದ ಪ್ರೆಸ್ ಕ್ಲಬ್ನಲ್ಲಿ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಟಿ. ಕೋನಪ್ಪರೆಡ್ಡಿ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘದ ಪಧಾಧಿಕಾರಿಗಳು ದಿನಾಂಕ:25.06.2026 ರಂದು ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪ ಶುದ್ಧ ಸುಳ್ಳು ಎಂದು ಹೇಳಿ, ಸ್ಪಷ್ಟಿಕರಣ ನೀಡಲು ಮಾಧ್ಯಮಗಳಿಗೆ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ.

ಸುಮಾರು 18 ವಿಚಾರಗಳಿಗೆ ಸವಿಸ್ತಾರವಾಗಿ ಉತ್ತರಿಸಿದ ರೆಡ್ಡಿಯವರು, ನಿಮಗೆ ನಾನು ಈಗ ಉತ್ತರಿಸಿದ ವಿಚಾರಗಳಿಗಷ್ಟೇ ದಾಖಲೆಗಳನ್ನು ನೀಡಿದ್ದೇನೆ, ನನ್ನ ಬಳಿ ಇನ್ನೂ ಅನೇಕ ವಿಚಾರಗಳಿಗೆ ಸಂಬಂಧಿಸಿದ ಪಾತ್ರಗಳು, ಸಾಕ್ಷಿಗಳು ಮತ್ತು ದಾಖಲೆಗಳಿವೆ ಎಂದು ಹೇಳಿದರು.

ಮುಂದುವರಿದಂತೆ, ಸಂಘದಲ್ಲಿ ಅನೇಕ ಅವ್ಯವಹಾರಗಳು ನಡೆಯುತ್ತಲೇ ಇವೆ. ಕೆಲವರು ತಮ್ಮ ಮಕ್ಕಳ ಖಾತೆಗೆ ದುಡ್ಡನ್ನು ಫೋನ್ ಪೇ ಮಾಡಿಸಿಕೊಂಡಿರುತ್ತಾರೆ, ನಾನು ಹಿರಿಯ ನಾಗರೀಕನಾದ ಕಾರಣ, ನನಗೆ ಜೀವನ ತಿಳಿದಿದೆ, ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಇಚ್ಚಿಸುವುದಿಲ್ಲ, ಹಾಗಾಗಿ ಆ ಚೇರ್ಮನ್ ಯಾರು ಮತ್ತು ಆತನ ಮಕ್ಕಳ ಹೆಸರೇನು ಎಂದು ಹೇಳುವುದಿಲ್ಲ ಎಂದರು.

ಮುಂದುವರಿದಂತೆ, ಸಂಘದ ಅಧ್ಯಕ್ಷರ ಮೇಲೆ ಮತ್ತು ಕೆಲವು ಪದಾಧಿಕಾರಿಗಳ ಮೇಲೆ ಆರೋಪವನ್ನು ಮಾಡಿ, ಸಂಘದ ಅಧ್ಯಕ್ಷರು ತಮ್ಮ ಕುರ್ಚಿಯಲ್ಲಿ ತಾವು ಕೂರುವುದು ಬಿಟ್ಟು, ಬೇರೆ ಯಾರೋ, ಅವರಿಗೆ ಬೇಕಾದವರನ್ನು ಕೂರಿಸುತ್ತಾರೆ ನೋಡಿ ಎಂದು ತಮ್ಮ ಮೊಬೈಲ್ನಲ್ಲಿದ್ದ ವಿಡಿಯೋವನ್ನು ಎಲ್ಲರ ಮುಂದೆ ಪ್ರದರ್ಶಿಸಿದರು. ಹಾಗೆಯೇ ತಮ್ಮ ಮಾತನ್ನು ಸಾಬೀತುಮಾಡಲು ಸಂಘದ ಅಧೀನದಲ್ಲಿ ಬರುವ ವಿದ್ಯಾ ಸಂಸ್ಥೆಯ ಡಾಕ್ಟರ್ಗಳಿಗೆ ದೂರವಾಣಿ ಕರೆ ಮಾಡಿ, ಲೌಡ್ ಸ್ಪೀಕರ್ ಮೂಲಕ ಮಾತನಾಡಿ, ತಮಗೆ ಮತ್ತು ತಮ್ಮ ಒಟ್ಟಿಗೆ ಇರುವ ಜನಕ್ಕೆ ಸಂಘದ ಪದಾಧಿಕಾರಿಗಳು ಇಡಲಾಗಿದೆ ಎನ್ನುವ ಕೇಳುವ ಬೇಡಿಕೆ ಮತ್ತು ಬೆದರಿಕೆ ವಿಚಾರದ ತಮ್ಮ ನೇರ ಸಂಭಾಷಣೆಯನ್ನು ಕೇಳಿಸಿದರು.

ಮುಂದುವರಿದಂತೆ, ಈಗಾಗಲೇ ಸಂಘದ ಕೆಲವು ಪದಾಧಿಕಾರಿಗಳ ವಿರುದ್ಧ ಮಾನನಷ್ಟ ಮೊಕದಮ್ಮೆ ಹೂಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿರುತ್ತೇನೆ, ಅತಿಶೀಘ್ರದಲ್ಲಿ ಮಾನ್ಯ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದಮ್ಮೆ ದಾಖಲಿಸುತ್ತೇನೆ. ನಾನು ಯಾವುದೇ ನೇಮಕಾತಿ ವಿಚಾರದಲ್ಲಿ ಆಗಲಿ, ಟೆಂಡರ್ ವಿಚಾರದಲ್ಲಿ ಆಗಲಿ, ಸಂಘ, ಶಿಕ್ಷಣ ಸಂಸ್ಥೆ ಇತ್ಯಾದಿ ಯಾವುದರಲ್ಲೇ ಆಗಲಿ, ಅನ್ಯಾಯ ಮತ್ತು ಅಕ್ರಮದ ಕೆಲಸ ಮಾಡಿರುವುದಿಲ್ಲ, ನನ್ನ ವಿರುದ್ಧ ನೀಡಿರುವ ಎಲ್ಲಾ ಹೇಳಿಕೆಗಳು ಶುದ್ಧ ಸುಳ್ಳು, ಪ್ರತಿಯೊಂದು ಆರೋಪ ಮತ್ತು ವಿಚಾರ ಸಿ.ಬಿ.ಐ ಅಥವಾ ಇನ್ಯಾವುದಾದರೂ ಇಲಾಖೆಯಲ್ಲಿ ತನಿಖೆಯಾಗಲಿ, ಆರೋಪಗಳು ಸಾಬೀತಾದರೆ, ತಕ್ಷಣ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಮತ್ತು ಕಾನೂನು ರೀತಿಯ ಎಲ್ಲಾ ಕ್ರಮಕ್ಕೆ ಸಿದ್ಧನಿದ್ದೇನೆ ಎಂದು ತಿಳಿ

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ