ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ, ಪೌರಕಾರ್ಮಿಕರ ಮಹಾಸಂಘದಿಂದ ಸುದ್ದಿಗೋಷ್ಠಿ

 ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ, ಪೌರಕಾರ್ಮಿಕರ ಮಹಾಸಂಘದಿಂದ ಸುದ್ದಿಗೋಷ್ಠಿ 



ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಮೈಸೂರು ನಾರಾಯಣ ಅವರಿಗೆ ಎಂ.ಎಲ್.ಸಿ ಸ್ಥಾನಮಾನ ನೀಡಬೇಕೆಂದು ಆಗ್ರಹ 

ಈ ಮೇಲ್ಕಾಣಿಸಿದ ಮಹಾಸಂಘದ ರಾಜ್ಯಾಧ್ಯಕ್ಷರು, ಸಪಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರು, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು ಆದಂತಹ ಶ್ರೀಯುತ ನಾರಾಯಣ (ಮೈಸೂರು) ರವರಿಗೆ ಎಂ.ಎಲ್.ಸಿ ಸ್ಥಾನಮಾನ ನೀಡಲು ಸಮಸ್ತ ಪೌರಕಾರ್ಮಿಕರ ಒಕ್ಕೂರಲ ಮನವಿ.


ಬೆಂಗಳೂರು ನಗರದ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಲ್ಲಿ ತುಂಬಾ ಗುತ್ತಿಗೆದಾರರು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ವೇತನ ಸರಿಯಾಗಿ ನೀಡದೆ ಅನ್ಯಾಯ ವೆಸಗುತ್ತಿದ್ದರು. ಈ ರೀತಿಯಲ್ಲಿ ಬದುಕುತ್ತಿದ್ದ ಪೌರಕಾರ್ಮಿಕರು ಈಗ ಕೈತುಂಬಾ ವೇತನ ಪಡೆದು ಸಮಾಜದಲ್ಲಿ ಗೌರವದಿಂದ ಜೀವನ ನಡೆಸುತ್ತಿದ್ದಾರೆ ಎಂದರೇ, ಅದಕ್ಕೆ ಮೂಲ ಕಾರಣಕರ್ತರು ಶ್ರೀಯುತ ನಾರಾಯಣ (ಮೈಸೂರು) ರವರು ಈ ದಿನ ರಾಜ್ಯಾದ್ಯಂತ ಪೌರಕಾರ್ಮಿಕರ ಮನೆಗಳಲ್ಲಿ ದೀಪ ಬೆಳಗಲು ಆಶಾಕಿರಣರಾಗಿರುತ್ತಾರೆ.


ಇಂತಹ ಒಬ್ಬ ಮೇರು ಮಾನವತವಾದಿ (ಪೌರಕಾರ್ಮಿಕರ ಕುಟುಂಬದಿಂದವ ಬಂದವರು) ನಮ್ಮ ಶ್ರೀಯುತ ನಾರಾಯಣ (ಮೈಸೂರು) ರವರನ್ನು ಸರ್ಕಾರ ಗುರುತಿಸಿ ಹಲವಾರು ಜವಾಬ್ದಾರಿಯನ್ನು ಕೊಟ್ಟಿರುತ್ತದೆ. ಅದನ್ನು ಜವಾಬ್ದಾರಿಯಿಂದ ನಿರ್ವಹಿಸಿ ಯಶ್ವಸಿಗೊಳಿಸಿರುತ್ತಾರೆ. ಶ್ರೀಯುತ ನಾರಾಯಣ (ಮೈಸೂರು) ರವರು ರಾಜಕೀಯ & ಸಾಮಾಜಿಕ ಬದುಕಿನುದ್ದಕ್ಕು ಪೌರಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಲು ಶ್ರಮಿಸಿರುತ್ತಾರೆ. ಮೇರು ವ್ಯಕ್ತಿತ್ವವುಳ್ಳ ಇವರಿಗೆ ರಾಜಕೀಯ ಶಕ್ತಿ ತುಂಬಿದರೆ ಪೌರಕಾರ್ಮಿಕರು, ಕಸ ಸಾಗಾಣಿಕೆ ಕೆಲಸ ಮಾಡುವ ವಾಹನ ಚಾಲಕರು, ಕ್ಲಿನರ್‌ಗಳು, ಒಳಚರಂಡಿ ಕಾರ್ಮಿಕರ ಬಾಳಿನಲ್ಲಿ ಬೆಳಕು ತುಂಬುವ ಕೆಲಸ ಮಾಡುತ್ತಾರೆ.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ