ಬೆಂಗಳೂರಿನ ತನ್ನ 6 ನೇ ಹೈಪರ್ ಮಾರ್ಕೆಟ್ ತೆರೆದ ಲುಲು ಗ್ರೂಪ್ ಇಂಡಿಯಾ

 ಬೆಂಗಳೂರಿನ ತನ್ನ 6 ನೇ ಹೈಪರ್ ಮಾರ್ಕೆಟ್ ತೆರೆದ ಲುಲು ಗ್ರೂಪ್ ಇಂಡಿಯಾ


ಬೆಂಗಳೂರು: ಲುಲು ಗ್ರೂಪ್ ಇಂಡಿಯಾ ಭಾನುವಾರ ಬೆಂಗಳೂರಿನ ತನ್ನ 6 ನೇ ಹೈಪರ್ ಮಾರ್ಕೆಟ್ ಮತ್ತು ಭಾರತದ 18ನೇ ಸ್ಟೋರ್ ಅನ್ನು ಉದ್ಘಾಟಿಸಿದೆ.

ಹಳೆ ಮದ್ರಾಸ್ ರಸ್ತೆಯ ಸಿ ವಿ ರಾಮನ್ ನಗರದಲ್ಲಿರುವ ನಾಗವಾರ ಪಾಳ್ಯದ ಗೋಪಾಲನ್ ಗ್ರಾಂಡ್ ಮಾಲ್ ನಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡಿದೆ. ಕರ್ನಾಟಕದ ಪ್ರತಿಯೊಂದು ಮೂಲೆಯಲ್ಲೂ ವಿಶ್ವದರ್ಜೆಯ ಹೈಪರ್ ಮಾರ್ಕೆಟ್ ರಿಟೇಲ್ ಸ್ಟೋರ್ ಅನ್ನು ತಲುಪಿಸುವ ಲುಲು ಬ್ರಾಂಡ್ ಪರಂಪರೆಯನ್ನು ಇದು ಮುಂದುವರಿಸಲಿದೆ.


ನಗರದಲ್ಲಿ ಅಸ್ತಿತ್ವದಲ್ಲಿರುವ 5 ಸ್ಟೋರ್ ಗಳ ಯಶಸ್ಸು ಮತ್ತು ಬೆಂಗಳೂರಿನ ಗ್ರಾಹಕರಿಂದ ಸತತವಾಗಿ ಸಿಗುತ್ತಿರುವ ಪ್ರೋತ್ಸಾಹದ ಆಧಾರದ ಮೇಲೆ ಲುಲು ಗ್ರೂಪ್ ಇಂಡಿಯಾ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇನ್ನು ಈ ಹೊಸ ಹೈಪರ್ ಮಾರ್ಕೆಟ್ 58,516 ಚದರ ಅಡಿ ಇದ್ದು, 200 ಕ್ಕೂ ಹೆಚ್ಚು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ಸ್ಟೋರ್ ನಿಂದ 1,000 ಕ್ಕೂ ಹೆಚ್ಚು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶ ಕೂಡ ಸೃಷ್ಟಿಯಾಗಲಿದೆ.


ಈ ಸಂದರ್ಭದಲ್ಲಿ ಲುಲು ಸಮೂಹದ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಯೂಸುಫ್ ಮಾತನಾಡಿ ಹೊಸ ಸ್ಟೋರ್ ಅನ್ನು ಹಳೆ ಮದ್ರಾಸ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಮುದಾಯಕ್ಕೆ ಸೇವೆಯನ್ನು ನೀಡಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ವಸ್ತುಗಳ ಕ್ವಾಲಿಟಿ ಪ್ರೀಮಿಯಂ ಆದರೂ ಎಲ್ಲರಿಗೂ ನಿಲುಕುವಂತಹ ರಿಟೇಲ್ ಅನುಭವವನ್ನು ನೀಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸಲಿದೆ. ಇಲ್ಲಿ ಪ್ರತಿಯೊಂದು ಮನೆಯ ಅಗತ್ಯಗಳನ್ನು ಒಂದೇ ಛಾವಣಿಯಡಿ ಪೂರೈಸಲು ಮುಂದಾಗಿದ್ದೇವೆ ಎಂದರು.


ಫಾರ್ಮ್‌ಳಿಂದ ನೇರವಾಗಿ ತಾಜಾ ಹಣ್ಣುಗಳು ಮತ್ತು ತರಕಾರಿಗಳ ಪೂರೈಕೆಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಮಾನದಂಡಗಳ ಆಧಾರದಲ್ಲಿ ಮಾಂಸಹಾರಿ ಪದಾರ್ಥಗಳನ್ನು ಮಾರಲಾಗುತ್ತದೆ. ಹತ್ತು ಹಲವು ಬ್ರಾಂಡ್ ಗಳ ಪ್ಯಾಕೇಜ್ ಆಹಾರ ಸೇರಿದಂತೆ ದೈನಂದಿನ ದಿನಸಿ ವಸ್ತುಗಳ ಸಮಗ್ರ ಶ್ರೇಣಿ ಇಲ್ಲಿ ಲಭ್ಯವಿರಲಿದೆ. ಸ್ವಚ್ಛತೆಗೆ ಬಳಸುವ ಉತ್ಪನ್ನಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳು, ಅಡುಗೆ ಪಾತ್ರೆಗಳು ಮತ್ತು ಮನೆಗೆ ಬೇಕಾದ ಆಧುನಿಕ ಮತ್ತು ಉಪಯುಕ್ತ ವಸ್ತುಗಳು ಇಲ್ಲಿ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದರು


ಉದ್ಘಾಟನಾ ಸಮಾರಂಭದಲ್ಲಿ ಗೋಪಾಲನ್ ಗ್ರೂಪ್ ಚೇರ್ಮನ್ ಮತ್ತು ಸಂಸ್ಥಾಪಕರಾದ ಸಿ. ಗೋಪಾಲನ್, ಲುಲು ಗ್ರೂಪ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಶ್ರಫ್ ಅಲಿ ಎಂ. ಎ, ಲುಲು ಗ್ರೂಪ್ ಇಂಡಿಯಾ ಸಿಇಒ ನಿಶಾದ್ ಎಂ.ಎ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ