ಕನ್ನಡ ರಕ್ಷಣಾ ವೇದಿಕೆಯ ಎಲ್.ಆರ್.ಶಿವರಾಮೇ ಗೌಡ ಅವರ ಹುಟ್ಟು ಹಬ್ಬ ಆಚರಣೆ; ಆರ್.ಆರ್ ನಗರ ಎಸ್.ಜಯನ್ ಅವರಿಂದ ಶುಭ ಹಾರೈಕೆ.

 ಕನ್ನಡ ರಕ್ಷಣಾ ವೇದಿಕೆಯ  ಎಲ್.ಆರ್.ಶಿವರಾಮೇ ಗೌಡ  ಅವರ ಹುಟ್ಟು ಹಬ್ಬ ಆಚರಣೆ; ಆರ್.ಆರ್ ನಗರ ಎಸ್.ಜಯನ್ ಅವರಿಂದ ಶುಭ ಹಾರೈಕೆ.

 ಬೆಂಗಳೂರು ಫೆಬ್ರವರಿ 2; ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲ್.ಆರ್.ಶಿವರಾಮೇ ಗೌಡ ಹಾಗೂ ಮಲೇಶ್ವರ ಶಾಸಕ ಆಶ್ವಥ್ ನಾರಾಯಣ ಅವರ ಹುಟ್ಟು ಹಬ್ಬ ಕಾರ್ಯಕ್ರಮ ಮಲೇಶ್ವರದ ರೋಟರಿ ಕ್ಲಬ್ ಸಭಾಂಣದಲ್ಲಿ ಅದ್ದೂರಿಯಾಗಿ ಜರುಗಿತು.

ಪರಸ್ಪರ ಇಬ್ಬರು ನಾಯಕರು ಕೇಕ್  ಕತ್ತರಿಸಿ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.

ಶಾಸಕ ಆಶ್ವಥ್ ನಾರಾಯಣ ಮಾತನಾಡಿ,ಮಲೇಶ್ವರಂ ವಿಧಾನ ಸಭಾ ಕ್ಷೇತ್ರ ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ ಡಾ.ರಾಜ್ ಕುಮಾರ್ ಅವರ ಜತೆಯಲ್ಲಿ ಸಾ.ರಾ.ಗೋವಿಂದ್ ಹಾಗೂ ಶಿವರಾಮೇ ಗೌಡರು ಗೋಕಾಕ್ ಚಳುವಳಿಗೆ ಸಾಥ್ ನೀಡಿದರು.ಆಗ ನಾನು ಚಿಕ್ಕವನಿದ್ದೆ ಎಂದು ಹೇಳಿದರು.

ಶಿವರಾಮೇ ಗೌಡ ಮಾತನಾಡಿ,ಕನ್ನಡದ ನೆಲ,ಜಲ, ವಿಚಾರದಲಿ ಕಂಟಕ ಎದುರಾದಗ  ಸಂಪೂರ್ಣವಾಗಿ ಪ್ರಾಣ ತ್ಯಾಗ ಮಾಡಿ ನಾವು ಹೋರಾಟ ನಡೆಸಲು ಸಿದ್ಧರಿದ್ದೇವೆ.ಹೊರ ರಾಜ್ಯಗಳಲ್ಲಿ ಕನ್ನಡಿಗ ಯಾತ್ರಿಕರಿಗೆ ತೊಂದರೆ ನೀಡಿದರೆ ಯಾವುದೇ ಮುಲ್ಲಾಜಿಲ್ಲದೇ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

  ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಾ.ರಾ.ಗೋವಿಂದ್,ಮಲೇಶ್ವರಂ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ  ಜಯಕುಮಾರ್, ರಾಜರಾಜೇಶ್ವರಿ ನಗರದ ಎಸ್.ಜಯನ್‌ ಸೇರಿದಂತೆ ವಿವಿಧ ಮುಖಂಡರು,ಸಾವಿರಾರು ಕನ್ನಡ ಪರ ಕಾರ್ಯಕರ್ತರು ಶುಭ ಹಾರೈಸಿದರು.


Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ