ಸ್ವಚ್ಛತಾ ಘನತ್ಯಾಜ್ಯ ಚಾಲಕರು, ಸಹಾಯಕರುಗಳ ನೇರಪಾವತಿ ಯೋಜನೆಗೆ ಒಳಪಡಿಸುವಂತೆ ಪ್ರತಿಭಟನೆ.
ಸ್ವಚ್ಛತಾ ಘನತ್ಯಾಜ್ಯ ಚಾಲಕರು, ಸಹಾಯಕರುಗಳ ನೇರಪಾವತಿ ಯೋಜನೆಗೆ ಒಳಪಡಿಸುವಂತೆ ಪ್ರತಿಭಟನೆ
ಬೆಂಗಳೂರು ಜನವರಿ 30; ಸ್ವಚ್ಛತಾ ಕಾರ್ಮಿಕರ ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ ಘನತ್ಯಾಜ್ಯ ಚಾಲಕರು, ಸಹಾಯರುಗಳನ್ನು ಕೂಡಲೇ ನೇರಪಾವತಿ ಯೋಜನೆಗೆ ಒಳಪಡಿಸುವಂತೆ ಕಾರ್ಮಿಕ ಸಂರಕ್ಷಣಟ ಟ್ರೇಡ್ ಯೂನಿಯನ್ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ನೂರಾರು ಪೌರಕಾರ್ಮಿಕರು ಭಾಗವಹಿಸಿದ್ದರು.
ಸಮಿತಿ ರಾಜ್ಯಾಧ್ಯಕ್ಷ ತ್ಯಾಗರಾಜ್ ಮಾತನಾಡಿ, ರಾಜ್ಯ ಸರ್ಕಾರ ನೇರ ಪಾವತಿ ಯೋಜನೆಗೆ ಘನತಾಜ್ಯ ಚಾಲಕರು ಸಹಾಯಕರನ್ನು ನೇರಪಾವತಿ ಯೋಜನೆಯಡಿ ಒಳಪಡಿಸುವಂತೆ ಆದೇಶಿಸಬೇಕು, ಕೊಟ್ಟ ಮಾತಿಗೆ ತಪ್ಪಿದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಸ್ವಚ್ಛತಾ ಕೆಲಸಕ್ಕೆ ಬಹುಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ಜನಾಂಗದವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತ ಸಂವಿಧಾನದ ಆಶಯದಂತೆ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳ ಆಡಿಯಲ್ಲಿ ವಿಶೇಷ ಆಧ್ಯತೆ ಮೇರೆಗೆ ಈ ಜನಾಂಗವನ್ನು ಎಲ್ಲಾ ಶೋಷಣೆಯಿಂದ ಸಂವಿಧಾನದ ಅನುಚ್ಛೇದ 46ರ ಪ್ರಕಾರ ರಕ್ಷಣೆ ಮಾಡಬೇಕಾದ ಹೊಣೆಯು ಸರ್ಕಾರದ ಮೇಲೆ ಇದೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಧರಣಿನಿರತ ಕೆಲವು ನಾಯಕರನ್ನು ತಮ್ಮ ಕಛೇರಿಗೆ ಕರೆಸಿಕೊಂಡು ಮತ್ತೆ ಆಶ್ವಾಸನೆ ನೀಡಿ,ಈ ಸಿಬ್ಬಂದಿಯನ್ನು ಅಗತ್ಯ ಸೇವೆ ಎಂದು ಪರಿಗಣಿಸಲಾಗಿದ್ದರೂ, ಇವರನ್ನು ನೇರ ವೇತನ ಪಾವತಿಯಡಿ ಪರಿಗಣಿಸದೆ ಇರುವುದು ಅನ್ಯಾಯ ಎಂದು ತಿಳಿಸಿದರು.

Comments
Post a Comment