134ನೇ ದುರಂದ್ ಕಪ್ ಗೆ ರಾಷ್ಟ್ರಪತಿಗಳಿಂದಚಾಲನೆ

 134ನೇ ದುರಂದ್ ಕಪ್ ಗೆ ರಾಷ್ಟ್ರಪತಿಗಳಿಂದಚಾಲನೆ


ಬೆಂಗಳೂರು, ಜುಲೈ 5,2025: ದುರಂದ್ ಕಪ್‌ ಭಾರತದಲ್ಲಿ ನಡೆಯುವ ಒಂದು ಪ್ರಮುಖ ಫುಟ್ಬಾಲ್


ಪಂದ್ಯಾವಳಿಯಾಗಿದೆ. ಇದು ಏಷ್ಯಾದ ಅತ್ಯಂತ ಹಳೆಯ ಮತ್ತು ವಿಶ್ವದ ಮೂರನೇ ಅತಿ ಹಳೆಯ ಪುಟ್ಬಾಲ್ ಪಂದ್ಯಾವಳಿಯಾಗಿದೆ.ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿದೌಪದಿ ಮುರ್ಮು ಅವರು ರಾಷ್ಟ್ರಪತಿ ಭವನ ಸಾಂಸ್ಕೃತಿಕ ಕೇಂದ್ರದಿಂದ (RBCC) ಮೂರುಐಕಾನಿಕ್ ದುರಂದ್‌ಕಪ್ ಟ್ರೋಫಿಗಳನ್ನು ಧ್ವಜಾರೋಹಣ ಮಾಡಿದ್ದಾರೆ. ಇದು ಏಷ್ಯಾದ ಅತ್ಯಂತ ಹಳೆಯ ಮತ್ತು ಭಾರತದ ಅತ್ಯಂತ ಪ್ರತಿಷ್ಠಿತ ಫುಟ್ಬಾಲ್ ಪಂದ್ಯಾವಳಿಯಾದ134ನೇ ಇಂಡಿಯನ್ ಆಯಿಲ್‌ ದುರಂದ್‌ ಕಪ್‌ ಆರಂಭವನ್ನು ಔಪಚಾರಿಕವಾಗಿ ಗುರುತಿಸುತ್ತದೆ.


ಆರ್ ಬಿಸಿಸಿಯಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ, ನೌಕಾ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ವಾಯುಪಡೆ ಮುಖ್ಯಸ್ಥಏ‌ರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್‌ ಮತ್ತು ದುರಂದ್ ಕಪ್‌ ಸಂಘಟನಾ ಸಮಿತಿ (ಡಿಸಿಒಸಿ)ಯ ಪೂರ್ವ ಕಮಾಂಡ್ ನಜಿಒಸಿ ಮತ್ತು ಪೋಷಕ ಲೆಫ್ಟಿನೆಂಟ್ ಜನರಲ್‌ಆರ್ ಸಿ ತಿವಾರಿ ಉಪಸ್ಥಿತರಿದ್ದರು. ಅರ್ಜುನ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಭಾರತೀಯ ಫುಟ್ಬಾಲ್ ಆಟಗಾರ ಸಂದೇಶ್ ಜಿಂಗನ್ ಕೂಡ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.


ಈಬಗ್ಗೆ ಮಾತನಾಡಿದದೌಪದಿ ಮುರ್ಮು 'ದುರಂದ್ ಕಪ್ ಭಾರತದ ಫುಟ್ಬಾಲ್ ಪರಂಪರೆಯಾಗಿದೆ. ಫುಟ್ಬಾಲ್‌ ಲಕ್ಷಾಂತರ ಜನರ ಹೃದಯದಲ್ಲಿ ವಿಶೇಷಸ್ಥಾನವನ್ನು ಹೊಂದಿದೆ. ಇದು ಕೇವಲ ಕ್ರೀಡೆಯಲ್ಲ ಇದು ಒಂದು ಉತ್ಸಾಹ ದುರಂದ್ ಕಪ್ ನಂತಹಕಾರ್ಯಕ್ರಮಗಳು ಆಟದ ಉತ್ಸಾಹವನ್ನು ಬೆಳೆಸುವುದಲ್ಲದೆ, ಮುಂದಿನ ಪೀಳಿಗೆಯ ಫುಟ್ ಬಾಲ್ ಆಟಗಾರರನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದರು.


ಈಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಅನಿಲ್ ದುರಂದ್ ಕಪ್ ನಮ್ಮ ಸಶಸ್ತ್ರ ಪಡೆಗಳು ಮತ್ತು ನಮ್ಮ ರಾಷ್ಟ್ರದ ಅತ್ಯುತ್ತಮ ಸಂಪ್ರದಾಯಗಳನ್ನು ಪ್ರತಿಬಿಂಬಿಸುವಶೌರ್ಯ,ಶಿಸ್ತು ಮತ್ತು ಏಕತೆಯ ಪರಂಪರೆಯಾಗಿದೆ ಎಂದರು.


ಲೆಫ್ಟಿನೆಂಟ್ ಜನರಲ್‌ ಆರ್ ಸಿ ತಿವಾರಿ ಮಾತನಾಡಿ 'ಭಾರತೀಯಸೇನೆಯುಸಶಸ್ತ್ರ ಪಡೆಗಳ ಪರವಾಗಿ ನಡೆಸುವ ದುರಂದ್‌ಕಪ್‌ಪುಟ್ ಬಾಲ್‌ ಪಂದ್ಯಾವಳಿಗಿಂತ ಹೆಚ್ಚಿನದಾಗಿದೆ ಎಂದರು.


ರಾಷ್ಟ್ರೀಯ ತಂಡವನ್ನು ಹಲವಾರು ಬಾರಿ ಮುನ್ನಡೆಸಿರುವ ಸಂದೇಶ್‌ ಜಿಂಗನ್, ದುರಂದ್ ಕಪ್ನೊಂದಿಗಿನ ತಮ್ಮ ನಿರಂತರ ಅನುಭವಗಳನ್ನು ಹಂಚಿಕೊಂಡರು ನಾವು ಇಂದು ಇಲ್ಲಿ ಒಟ್ಟುಗೂಡಿದ್ದು ಕೇವಲ ಟ್ರೋಪಿಯನ್ನು ಅನಾವರಣಗೊಳಿಸಲು ಮಾತ್ರವಲ್ಲ ಭಾರತೀಯಪುಟ್ ಬಾಲ್ ನಪ್ರಯಾಣವನ್ನು ರೂಪಿಸುವಲ್ಲಿ ಪ್ರಮುಖಪಾತ್ರ ವಹಿಸಿರುವ ಶತಮಾನದಷ್ಟು ಹಳೆಯದಾದ ಸಂಪ್ರದಾಯವನ್ನು ಆಚರಿಸಲು ಎಂದರು.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

AILU Challenges BCI’s ‘Illegal’ Nomination of Karnataka Bar Council Chairman