ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

  ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025  ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮ ಕಛೇರಿಗಳ ರದ್ದತಿ ಕಾಯ್ದೆ 1961 ಅನ್ವಯ ದಿನಾಂಕ:1/2/1963 ರಿಂದ ಅನ್ವಯವಾಗುವಂತೆ ವಂಶಪಾರಂಪರ್ಯದ ಎಲ್ಲಾ ಗ್ರಾಮೀಣ ಹಂತದ ವಿಲೇಜ್ ಆಫೀಸರ್ಸ್ ಹುದ್ದೆಗಳು ರದ್ದಾದ್ದರಿಂದ ಕೆಳ ಹಂತದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ನಮ್ಮನ್ನು ಆಡಳಿ ತಾತ್ಮಕ ದೃಷ್ಟಿಯಿಂದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಗೆ ಸಹಾಯ ಮಾಡುವ ಸಲುವಾಗಿ 10450 ಗ್ರಾಮ ಸಹಾಯಕರ ಹುದ್ದೆಗಳನ್ನು ಸೃಜಿಸಿ ಆಗಿಂದ್ದಾಗೆ ವೇತನ ಹೆಚ್ಚಳ ಮಾಡುತ್ತಾ ಬಂದು 2007ನೇ ಸಾಲಿನಲ್ಲಿ ಗ್ರಾಮಸಹಾಯಕರ ಹುದ್ದೆಗಳನ್ನು ಖಾಯಂಗೊಳಿಸಿ ಪ್ರಸ್ತುತ 15000/- ಮಿತವೇತನ ಮಾತ್ರ ಪಾವತಿಸಲಾಗುತ್ತಿರುತ್ತದೆ. ಆದರೆ ಯಾವುದೇ ಸೇವಾಭದ್ರತೆ ಕಲ್ಪಿಸಿರುವುದಿಲ್ಲ. ಸದರಿ ವೇತನದಿಂದ ಇಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ, ತಂದೆ ತಾಯಿಗಳ ಸಂಧ್ಯಾ ಕಾಲದ ಪೋಷಣೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆಗೆ ತುಂಬಾ ಕಷ್ಟ ಕರವಾಗಿರುತ್ತದೆ.

 ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ನಾವು ನಡೆಸಿದ ಮುಷ್ಕರದಲ್ಲಿ ಸರ್ಕಾರದ ಮಾನ್ಯ ಕಂದಾಯ ಸಚಿವರು ಮುಷ್ಕರದ ಸ್ಥಳಕ್ಕೆ ಆಗಮಿಸಿ ಗ್ರಾಮಸಹಾಯಕರಿಗೆ ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಸೇವಾಭದ್ರತೆ ನೀಡಿ ಡಿ ಗ್ರೂಪ್ ಸಮಾನವಾದ ವೇತನವನ್ನು ಪಡೆಯಲು ತ್ವರಿತವಾಗಿ ಆದೇಶ ನೀಡಿ ಉಳಿದ ಬೇಡಿಕೆಗಳನ್ನು ಮಾನ್ಯ ಮುಖ್ಯಮಂತ್ರಿಗಳವರ ಜೊತೆ ಚರ್ಚಿಸಿ ಆದಷ್ಟು ಬೇಗನೆ ಈಡೇರಿಸುವುದಾಗಿ ಭರವಸೆ ನೀಡಿ ಬಂದಿರುತ್ತಾರೆ. ವರ್ಷಗಳಾದರೂ ಇದುವರೆಗೂ ಬೇಡಿಕೆ ನಮ್ಮ ಆದರೆ ಮುಷ್ಕರ ನಡೆದು ಎರಡು ಈಡೇರಿರುವುದಿಲ್ಲ ಮುಖ್ಯವಾಗಿ ಗ್ರಾಮಸಹಾಯಕರಿಗೆ ತಾವು ಈ ಹಿಂದೆ ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಮಗೆ ಸೇವಾಭದ್ರತೆ ನೀಡಿ ಡಿ ಗ್ರೂಪ್ ಸಮಾನ ವೇತನ ನೀಡಲು ಪರಿಶೀಲಿಸಿ ಕಾನೂನು ಅಭಿಪ್ರಾಯ ಪಡೆಯಲು ಆದೇಶಿಸಿರುವ ಮೇರೆಗೆ ಅಂದಿನ ಅಡ್ವಕೇಟ್ ಜನರಲ್ ಪ್ರೋ।। ರವಿವರ್ಮಕುಮಾರ್ ರವರು ಅವರ ವರದಿಯಲ್ಲಿ ಗ್ರಾಮ ಸಹಾಯಕರು ಸರ್ಕಾರದ ಮಾತೃ ಇಲಾಖೆಯಲ್ಲಿ ತಳ ಹಂತದಲ್ಲಿ ಕಾರ್ಯನಿರ್ವಹಿಸುವ ಮುಖ್ಯ ಕೆಲಸಗಾರರಾಗಿದ್ದು, ನಮ್ಮಗಳ ಸೇವೆಯನ್ನು ಗುರುತಿಸಿ ಕಂದಾಯ ಇಲಾಖೆಗೆ ನಮ್ಮ ಸೇವೆ ಅವಶ್ಯವಿರುವುದನ್ನು ಮನಗಂಡು ನಮ್ಮ ಹಾಗೂ ಕುಟುಂಬಗಳ ಭದ್ರತೆಗಾಗಿ ಡಿ ಗ್ರೂಪ್ ನೌಕರರೆಂದು ಪರಿಗಣಿಸಿ ಅದಕ್ಕೆ ಸಮಾನವಾದ ವೇತನ ನೀಡಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ತದನಂತರ ಇದೇ ರೀತಿ ಅಡ್ವಕೇಟ್ ಜನರಲ್ ಮಧುಸೂದನ್ ನಾಯಕ್ ರವರು ಹಾಗೂ ಇತ್ತೀಚೆಗೆ ಕಾನೂನು ಇಲಾಖೆಯ ಮುಖ್ಯ ಕಾರ್ಯದರ್ಶಿ ಮಾನ್ಯ ಜಿ.ಎಸ್. ಸಂಗ್ರೇಶಿರವರು ಸಹ ನಮ್ಮ ಪರವಾಗಿ ಶಿಫಾರಸ್ಸು ವರದಿ ನೀಡುವ ಮೂಲಕ ನಮಗೆ ಸೇವಾ ಭದ್ರತೆ ನೀಡಿ ಕನಿಷ್ಠ ವೇತನ ನೀಡಲು ಯಾವುದೇ ಕಾನೂನು ತೊಡಕು ಇಲ್ಲವೆಂದು ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ. ಆದರೆ ಸದರಿ ಶಿಫಾರಸ್ಸಿನಂತೆ ನಮಗೆ ಇದುವರೆಗೂ ಸೇವಾಭದ್ರತೆ ನೀಡಿರುವುದಿಲ್ಲ.

ಹಾಲಿ ಇರುವ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲೇ ನೀಡಿದ್ದ ಆಶ್ವಾಸನೆಯಂತೆ ಅನ್ನಭಾಗ್ಯ, ಗೃಹ ಲಕ್ಷ್ಮಿ ಯೋಜನೆ, ಗೃಹದ್ಯೋತಿ, ಶಕ್ತಿ ಯೋಜನೆ, ಯುವನಿಧಿ ಯೋಜನೆ ಯಂತಹ ಮಹತ್ವರವಾದ ಯೋಜನೆಗಳನ್ನು ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಜಾರಿಗೆ ತಂದು ಇತರೆ ರಾಜ್ಯಗಳಿಗೆ ಮಾದರಿಯಾಗಿರುತ್ತದೆ. ಅದೇ ರೀತಿ ಇತ್ತೀಚೆಗೆ ಪೌರಕಾರ್ಮಿಕರಿಗೆ, ಲಾರಿ ಡ್ರೈವರ್, ಕ್ಲೀನರ್‌ಗಳು ಹಾಗೂ ಇತರಿರಗೂ ಸಹ 1ನೇ ಮೇ 2025 ರಿಂದ ಅನ್ವಯವಾಗುವಂತೆ ಖಾಯಂಗೊಳಿಸಲಾಗಿರುತ್ತದೆ. ಹಾಗೂ ಅವರ ರಾಜ್ಯದ ಎಲ್ಲಾ ದುಡಿಯುವ ಕಾರ್ಮಿಕರಿಗೆ ಅವರ ದುಡಿಮೆಗೆ ತಕ್ಕಂತೆ ಕನಿಷ್ಠ ವೇತನವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲು ನಂ.ಕಾ.ಇ 411 LWA 2023 ದಿನಾಂಕ: 11/4/2025 ರಂದು ಅಧಿಸೂಚನೆ ಹೊರಡಿಸುವ ಮೂಲಕ ತಾವು ಎಲ್ಲಾ ಶ್ರಮಿಕ ವರ್ಗದವರ ಪರವಾಗಿ ಆದೇಶ ಹೊರಡಿಸಲಾಗಿರುತ್ತದೆ.


ಆದರೆ ಘನ ಸರ್ಕಾರವು ಸರ್ಕಾರದ ಮಾತೃ ಇಲಾಖೆ ಕಂದಾಯ ಇಲಾಖೆಯಲ್ಲಿ ಸರಿ ಸುಮಾರು 45 ವರ್ಷಗಳಿಂದಲೂ ಜೀತದಾಳುಗಳಂತೆ ಯಾವುದೇ ರೀತಿಯ ಭದ್ರತೆಯಿಲ್ಲದೇ ತಮ್ಮ ಘನ ಸರ್ಕಾರದ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜನಸಾಮಾನ್ಯರ ಮನೆಬಾಗಿಲಿಗೆ ಸವಲತ್ತುಗಳನ್ನು ತಲುಪಿಸುವ ಹಾಗೂ ಕಂದಾಯ ಇಲಾಖೆಯ ತಳಹಂತದಲ್ಲಿ ಅತೀ ಮುಖ್ಯವಾದ ಅಂಕಿ-ಅಂಶಗಳು, ಭೂವ್ಯಾಜ್ಯ, ಸರ್ಕಾರಿ ಜಮೀನು ಒತ್ತುವರಿ ಗುರುತಿಸುವುದು, ವಿವಿಧ ಮಾಶಾಸನದಾರರನ್ನು ಗುರುತಿಸುವುದು, ಗಣ್ಯಾತಿ ಗಣ್ಯರು, ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಶಿಷ್ಠಾಚಾರ ಪಾಲನೆ, ಚುನಾವಣೆ ಕಾರ್ಯ, ಜನನ-ಮರಣ ನೋಂದಣಿಗೆ ಸಹಕರಿಸುವುದು ಈ ರೀತಿ ಎಲ್ಲಾ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಹಾಗೂ ಅಷ್ಟೇ ಜವಾಬ್ದಾರಿಯುತವಾಗಿ ನಿರ್ವಹಿಸುವ ಗ್ರಾಮ ಸಹಾಯಕರಾದ ನಮ್ಮನ್ನು ಕಡೆಗಣಿಸಿ ನಮಗೆ ಸೇವಾಭದ್ರತೆ ನೀಡಿ ನಮ್ಮ ಹಾಗೂ ನಮ್ಮ ಕುಟುಂಬಗಳ ಭದ್ರತೆ ಕಲ್ಪಿಸಿಕೊಡದಿರುವುದು ತೀರಾ ನೋವಿನ ಸಂಗತಿಯಾಗಿರುತ್ತದೆ.



Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims