Posts

Showing posts from December, 2023

ದೊಡ್ಡಳ್ಳಾಪುರದ ರೈಲ್ವೇ ಸ್ಟೇಷನ್ ಬಳಿ ನೂತನವಾಗಿ A1 ಬಿರಿಯಾನಿ ಪಾಯಿಂಟ್ ಪ್ರಾರಂಭ

Image
  ದೊಡ್ಡಳ್ಳಾಪುರದ ರೈಲ್ವೇ ಸ್ಟೇಷನ್ ಬಳಿ ನೂತನವಾಗಿ A1 ಬಿರಿಯಾನಿ ಪಾಯಿಂಟ್ ಪ್ರಾರಂಭ ದೊಡ್ಡಬಳ್ಳಾಪುರ ನಗರದ ರೈಲ್ವೆ ನಿ ಲ್ದಾಣದ ಹೈವೇ ಮುಖ್ಯ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ A1 ಬಿರಿಯಾನಿ ಪಾಯಿಂಟ್ ಉದ್ಘಾಟನೆ ನೆರವೇರಿಸಿದ ದೊಡ್ಡ ಬಳ್ಳಾಪುರ ಮಾಜಿ ಶಾಸಕರಾದ ವೆಂಕಟರಮಯ್ಯನವರು ಕಾಂಗ್ರೆಸ್ ಮುಖಂಡರಾದ ಬೈರೇಗೌಡರು, ರವಿಯವರು, ಕೃಷ್ಣಮೂರ್ತಿ ರವರು , ನಗರಸಭಾ ಸದಸ್ಯರು ಮಲ್ಲೇಶ್, ಹಾಗೂ ತಾಲೂಕಿನ ಹಿರಿ ಯ ಮುಖಂಡರು ಭಾಗವಹಿಸಿದ್ದರು , ಹೋಟೆಲ್ ಮಾಲೀಕ ರಾದ ಹರೀಶ್ ನಾಯಕ್, ಪುನೀತ್ ನಾಯಕ್, ನವೀನ್ ವಜ್ರ, ಲೋಕೇಶ್ ನಾಯಕ್ ಸಹೋದರರು ಮಾತನಾಡಿ ಉತ್ತಮವಾದ ರುಚಿಕರವಾದ ಬಿರಿಯಾನಿ ನಮ್ಮಲ್ಲಿ ಸಿಗುವುದರ ಜೊತೆಗೆ ಮಟನ್ ಬಿರಿಯಾನಿ ಮಟನ್ ಚಾಪ್ಸ್, ಲೆಗ್ ಪೀಸ್, ಕಬಾಬ್, ಲಿವರ್ ಫ್ರೈ, ಬೋಟಿ, ತಲೆ ಮಾಂಸ, ಫಿಶ್ ಫ್ರೈ , ಇನ್ನೂ ಹಲವು ಬಗೆಯ ತಿಂಡಿ ಕಡಿಮೆ ಬೆಲೆಗೆ ನಮ್ಮ ಹೋಟೆಲ್ ನಲ್ಲಿ ಉತ್ತಮ ರುಚಿ ಶುಚಿಯಲ್ಲಿ ಗ್ರಾಹಕರಿಗೆ ಕೈಗೆ ಎಟಕುವ ಬೆಲೆಯಲ್ಲಿ ದೊರಕುತ್ತದೆ ಎಂದು ತಿಳಿಸಿ ತಾಲೂಕಿನ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಂತೂ ಪ್ರಧಾನಿ ಭೇಟಿಯಾದ ಸಿಎಂ...ತುರ್ತಾಗಿ 18,177.44 ಕೋಟಿ ಬರ ಪರಿಹಾರ ಬಿಡುಗಡೆಗೆ ಮನವಿ ಸಲ್ಲಿಸಿದ ಸಿದ್ರಾಮಯ್ಯ...*

Image
ಅಂತೂ ಪ್ರಧಾನಿ ಭೇಟಿಯಾದ ಸಿಎಂ...ತುರ್ತಾಗಿ 18,177.44 ಕೋಟಿ ಬರ ಪರಿಹಾರ ಬಿಡುಗಡೆಗೆ ಮನವಿ ಸಲ್ಲಿಸಿದ ಸಿದ್ರಾಮಯ್ಯ...* ನವದೆಹಲಿ, ಡಿ. 19 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177.44 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದರಲ್ಲಿ 4663.12 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,7577.86 ಕೋಟಿ ರೂ. ತುರ್ತು ಪರಿಹಾರ, 566.78 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363.68 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ. ರಾಜ್ಯದಲ್ಲಿ 236 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದರು. ಎನ್‌.ಡಿ.ಆರ್‌.ಎಫ್. ನಿಂದ 4663.12 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಲಾಗಿದೆ. ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು 2015-16 ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫ...

ಸುಳ್ಳಿನ ಗ್ಯಾರಂಟಿಗಳ ಮೇಲೆ ಸರ್ಕಾರ ನಿಂತಿದೆ: ಪ್ರಹ್ಲಾದ್‌ ಜೋಶಿ

Image
  ಸುಳ್ಳಿನ ಗ್ಯಾರಂಟಿಗಳ ಮೇಲೆ ಸರ್ಕಾರ ನಿಂತಿದೆ: ಪ್ರಹ್ಲಾದ್‌ ಜೋಶಿ ಸುಳ್ಳಿನ   ಗ್ಯಾರಂಟಿಗಳ   ಮೇಲೆ   ಈ   ಸರ್ಕಾರ   ನಡೆಯುತ್ತಿದೆ .  ಮೂರು   ರಾಜ್ಯಗಳಲ್ಲಿ   ಕಾಂಗ್ರೆಸ್   ಪಕ್ಷವನ್ನು   ಜನ   ತೊಳೆದು   ಹಾಕಿದ್ದಾರೆ   ಎಂದು   ಬೆಂಗಳೂರಿನಲ್ಲಿ   ಕಾಂಗ್ರೆಸ್   ವಿರುದ್ಧ   ಕೇಂದ್ರ   ಸಚಿವ   ಪ್ರಹ್ಲಾದ್   ಜೋಶಿ   ವಾಗ್ದಾಳಿ   ನಡೆಸಿದರು .  ರಾಜ್ಯದ   ಜನರಿಗೆ   ಸರಿಯಾಗಿ   ವಿದ್ಯುತ್   ಪೂರೈಕೆ   ಮಾಡಲು   ಆಗುತ್ತಿಲ್ಲ .  ನಾವು   ಒಂಭತ್ತೂವರೆ   ಕೋಟಿ   ಜನರಿಗೆ   ಉಚಿತ   ಗ್ಯಾಸ್   ಸಂಪರ್ಕ   ನೀಡಿದ್ದೇವೆ .  ಕಾಂಗ್ರೆಸ್   ನಾಯಕರು   ಉಚಿತ   ವಿದ್ಯುತ್   ಘೋಷಣೆ   ಮಾಡಿದ್ದರು   ಜೋಶಿ   ವಾಗ್ದಾಳಿ   ನಡೆಸಿದರು . ಸಂಸತ್   ಮೇಲಿನ   ದಾಳಿಗೆ   ನಿರುದ್ಯೋಗ   ಸಮಸ್ಯೆ   ಕಾರಣ   ಎಂಬ   ರಾಹುಲ್   ಗಾಂಧಿ   ಹೇಳಿಕೆಗೆ   ಕೇಂದ್ರ   ಸಚಿವ   ಪ್ರಹ್ಲಾದ್   ಜೋಶಿ   ಆಕ್ರೋಶ   ವ್ಯಕ್ತಪಡಿಸಿದರು .  ಸುದ್ದಿಗೋಷ್ಠಿಯ...

24 ಕ್ಕೆ 4 ವ್ಯಕ್ತಿಗಳಿಗೆ ಕಾದಿದೆ ಗಂಡಾಂತರ, ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು,,

Image
  24 ಕ್ಕೆ 4 ವ್ಯಕ್ತಿಗಳಿಗೆ ಕಾದಿದೆ ಗಂಡಾಂತರ, ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು,    2024 ರಲ್ಲಿ ಈ 4 ವ್ಯಕ್ತಿಗಳಿಗೆ ಕಾದಿದೆ ಗಂಡಾಂತರ, ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು        ವೀರಮಾರ್ಗ ನ್ಯೂಸ್ : KARNATAKA : ಈ ಹಿಂದೆ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ಕುರಿತು ಮಹತ್ವದ ಭವಿಷ್ಯವನ್ನು ನುಡಿದಿದ್ದ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿಯವರು ಆಗಾಗ ತಮ್ಮ ಭವಿಷ್ಯವಾಣಿಯ ಮೂಲಕ ಸುದ್ದಿಯಾಗುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರವನ್ನು ಪಡೆಯುತ್ತದೆ ಎನ್ನುವ ಬಗ್ಗೆ ಸ್ವಾಮೀಜಿಯವರು ಭವಿಷ್ಯವಾಣಿ ನುಡಿದಿದ್ದರು. ಇದೀಗ ಶಿವಯೋಗಿ ಶಿವಾನಂದ ರಾಜೇಂದ್ರ ಮಹಾಸ್ವಾಮೀಜಿಯವರು ದೇಶದ ಮಹಾನ್ ವ್ಯಕ್ತಿಗಳಿಗೆ ಎದುರಾಗುವ ಕಂಟಕದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಮಾಜಿಯವರ ಭವಿಶ್ಯವಾಣಿ ಸದ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಲೋಕಸಭಾ ದಾಳಿ ಬೆನ್ನಲ್ಲೇ ಶ್ರೀಗಳು ಈ ಹಿಂದೆ ನುಡಿದ ಭವಿಷ್ಯವಾಣಿ ವೈರಲ್ ಆಗುತ್ತಿದೆ. ಶ್ರೀಗಳ ಭವಿಷ್ಯ ನಿಜವಾಗುತ್ತಾ..? ಎನ್ನುವ ಆತಂಕ ಎಲ್ಲರಲ್ಲೂ ಹುಟ್ಟಿಕೊಂಡಿದೆ. 2024 ರಲ್ಲಿ ಈ ಮೂರೂ ಮಹಾನ್ ವ್ಯಕ್ತಿಗಳಿಗೆ ಅಪಾಯವಿದೆ    ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರಹಳ್ಳಿಯಲ್ಲಿರುವ ಕೊಡಿ ಮಠದಲ್ಲಿ ಶ್ರೀಗಳು ಯುಗಾಧಿಯ ಭವಿಷ್ಯ ನುಡಿದಿದ್ದಾರೆ. "ದೇಶದಲ್ಲಿ ಮತ್ತೊಂದು ದುರ್ಘಟನೆ ನಡೆಯುತ್ತದೆ. ಜಗತ್ತಿನ ಸಾಮ್ರಾಟ...

ಮಿಲಿಂದ್ ಸೋಮನ್ ಅವರು ಗ್ರೀನ್ ರೈಡ್ 3.0 ಭಾಗವಾಗಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಬೈಕ್‍ನಲ್ಲಿ 200 ಕಿ.ಮೀ ಎಲೆಕ್ಟ್ರಿಕ್ ಬೈಕ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ*

Image
 * ಮಿಲಿಂದ್ ಸೋಮನ್ ಅವರು ಗ್ರೀನ್ ರೈಡ್ 3.0 ಭಾಗವಾಗಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಬೈಕ್‍ನಲ್ಲಿ 200 ಕಿ.ಮೀ ಎಲೆಕ್ಟ್ರಿಕ್ ಬೈಕ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ* ಬೆಂಗಳೂರು, ಡಿಸೆಂಬರ್ 18, 2023: ಸುಸ್ಥಿರ ಸಾರಿಗೆ ವಿಚಾರದಲ್ಲಿ ಮಹತ್ವದ ಸಾಧನೆ ಮಾಡಿರುವ ಮಿಲಿಂದ್ ಸೋಮನ್, ಭಾರತದ ಫಿಟ್ನೆಸ್ ಐಕಾನ್, ಅವರು 200 ಕಿ.ಮೀ ಎಲೆಕ್ಟ್ರಿಕ್ ವಾಹನ (ಇವಿ) ಯಾನವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಪರಿಸರ-ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ಮತ್ತು ಮಾಲಿನ್ಯ ತಗ್ಗಿಸಲು ಕಾರ್ಬನ್ ಪ್ರಮಾಣ ಕಡಿಮೆ ಮಾಡುವ ಪ್ರಯತ್ನವಾದ ಗ್ರೀನ್ ರೈಡ್ 3.0 ಅಭಿಯಾನದಲ್ಲಿ ಈ ಮಹತ್ವದ ಮೈಲುಗಲ್ಲು ದಾಖಲಾಗಿದೆ. ಮಿಲಿಂದ್, ಆರೋಗ್ಯಕರ ಮತ್ತು ಪರಿಸರ ಪ್ರಜ್ಞೆಯ ಜೀವನವನ್ನು ಪ್ರತಿಪಾದಿಸುತ್ತಿದ್ದು, ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಅನ್ನು ಈ ಯಾನಕ್ಕಾಗಿ ಆಯ್ಕೆ ಮಾಡಿಕೊಂಡಿರುವುದು, ನಗರಗಳಲ್ಲಿ ಸ್ವಚ್ಛ ಮತ್ತು ಜಾಣತನದ ಪರ್ಯಾಯ ಸಾರಿಗೆ ವ್ಯವಸ್ಥೆ ಅಳವಡಿಸುವುದರ ಅಗತ್ಯವನ್ನು ಸಂಕೇತಿಸುತ್ತದೆ. ವಿಶಾಲ ವ್ಯಾಪ್ತಿಯ ಗ್ರೀನ್ ರೈಡ್ 3.0 ಅಭಿಯಾನದ ಭಾಗವಾಗಿ ಮಿಲಿಂದ್ ಅವರು ಆರಂಭದಲ್ಲಿ ಡಿಸೆಂಬರ್ 11ರಂದು ಪುಣೆಯಿಂದ ಲೈಫ್‍ಲಾಂಗ್ ಸೈಕಲ್‍ನಲ್ಲಿ ವಡೋದರಾಗೆ ಯಾನ ಆರಂಭಿಸಿದರು. ಮುಂಬಯಿ ಮತ್ತು ಸೂರತ್‍ಗಳಲ್ಲಿ ಸೈಕಲ್ ಯಾನಕ್ಕೆ ವಿರಾಮ ನೀಡಲಾಗಿತ್ತು. ಅದರ ಬೆನ್ನಲ್ಲಿಯೇ ಅವರು ಬೆಂಗಳೂರು ತಲುಪಲು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್...

Dev_GP president_Selection_AVBB_121223 Slug : ರೀತಿಮುನೇಗೌಡ ಅಧ್ಯಕ್ಷರಾಗಿ ಮುಂದುವರಿಕೆ

Image
 Dev_GP president_Selection_AVBB_121223 Slug : ರೀತಿಮುನೇಗೌಡ ಅಧ್ಯಕ್ಷರಾಗಿ ಮುಂದುವರಿಕೆ  ಬೆಂಗಳೂರು ನಗರದ ಯಲಹಂಕ ತಾಲ್ಲೂಕಿನ ಬಾಗಲೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ರೀತಿಮುನೇಗೌಡ ಮುಂದುವರಿದಿದ್ದಾರೆ. ಕಳೆದ ನವೆಂಬರ್ ತಿಂಗಳ 21 ರಂದು ರೀತಿಮುನೇಗೌಡ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಸೇರಿ ಅವಿಶ್ವಾಸ ಮಂಡನೆ ನಡೆಸಿದ್ದರು. ಅವಿಶ್ವಾಸ ಮಂಡನೆ ಪ್ರಶ್ನಿಸಿ ರೀತಿಮುನೇಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಇನ್ನೂ ಈ ಹಿಂದೆ ಅವಿಶ್ವಾಸ ಮಂಡನೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಸಹ ನಿಗದಿ ಆಗಿತ್ತು. ಆದ್ರೆ ನಿನ್ನೆ ಅಧ್ಯಕ್ಷ ಸ್ಥಾನ ಚುನಾವಣೆಗೆ ತಡೆಯಾಜ್ಞೆ ದೊರೆತ್ತಿದ್ದು ಇಂದು ನಡೆಯಬೇಕಿದ್ದ ಚುನಾವಣೆ ರದ್ದಾಗಿದೆ. ಚುನಾವಣೆಯಲ್ಲಿ ಒಟ್ಟು 26 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ 19 ಸದಸ್ಯರು , ಬಿಜೆಪಿ 4 ಸದಸ್ಯರು ಮತ್ತು 3 ಪಕ್ಷೇತರ ಸದಸ್ಯರು ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಂಚಾಯತಿಯ ಚುಕ್ಕಾಣಿ ಹಿಡಿದು ರೀತಿಮುನೇಗೌಡ ಅವರನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಆಯ್ಕೆ ಮಾಡಿದ 6 ತಿಂಗಳಲ್ಲಿ ರೀತಿಮುನೇಗೌಡ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಹಣ ಆಮಿಷಕ್ಕೆ ಅವಿಶ್ವಾಸ ಮಂಡನೆ ನಡೆಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಇನ್ನೂ 19 ಸ್ಥಾನ ಗೆದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನ ಬಿಜೆಪಿ ಸದಸ್ಯರು ಹೈಜಾಕ್ ಮಾಡಿ ಬಿಜೆಪಿ ಆಡಳಿತ ನಡೆಸಲು ಮುಂ...