ಸುಳ್ಳಿನ ಗ್ಯಾರಂಟಿಗಳ ಮೇಲೆ ಸರ್ಕಾರ ನಿಂತಿದೆ: ಪ್ರಹ್ಲಾದ್ ಜೋಶಿ
ಸುಳ್ಳಿನ ಗ್ಯಾರಂಟಿಗಳ ಮೇಲೆ ಈ ಸರ್ಕಾರ ನಡೆಯುತ್ತಿದೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ತೊಳೆದು ಹಾಕಿದ್ದಾರೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು. ರಾಜ್ಯದ ಜನರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಲು ಆಗುತ್ತಿಲ್ಲ. ನಾವು ಒಂಭತ್ತೂವರೆ ಕೋಟಿ ಜನರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಿದ್ದೇವೆ. ಕಾಂಗ್ರೆಸ್ ನಾಯಕರು ಉಚಿತ ವಿದ್ಯುತ್ ಘೋಷಣೆ ಮಾಡಿದ್ದರು ಜೋಶಿ ವಾಗ್ದಾಳಿ ನಡೆಸಿದರು.
ಸಂಸತ್ ಮೇಲಿನ ದಾಳಿಗೆ ನಿರುದ್ಯೋಗ ಸಮಸ್ಯೆ ಕಾರಣ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರದ್ದು ಚೈಲೀಶ್ ಹೇಳಿಕೆ. ದೇಶದ ನಿರುದ್ಯೋಗ ಸಮಸ್ಯೆ ಕುರಿತು ಚರ್ಚೆ ಆಗಲಿ ಬೇಡ ಅನ್ನುವುದಿಲ್ಲ. ನಿರುದ್ಯೋಗ ಇದೆ ಅಂತ ಹೇಳಿ ಎಂಪಿಯನ್ನೇ ಕೊಲೆ ಮಾಡುತ್ತೇನೆ ಎಂದರೆ ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲವಾ ಎಂದರು.
ಮೋದಿಯವರು ಪ್ರತಿ ಕ್ಯಾಬಿನೆಟ್ ನಲ್ಲಿ ನಿಮ್ಮ ವಿಭಾಗಕ್ಕೆ ಎಷ್ಟು ಹಣ ಬಿಡುಗಡೆ ಆಗಿದೆ. ಹೆಚ್ಚುವರಿ ಹಣ ಬೇಕು ಅಂದ್ರೆ ಅಭಿವೃದ್ಧಿ ತೋರಿಸಿ. ಹೆಚ್ಚು ದುಡ್ಡನ್ನ ಜನರಿಗಾಗಿ ಖರ್ಚು ಮಾಡಿ ಅಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 145 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಮೂಲಭೂತ ಸೌಕರ್ಯಗಳು ಜನರಿಗೆ ತಲುಪಿಸಲು ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಮೋದಿ ಬಂದು 10 ವರ್ಷದಲ್ಲೇ 4 ಕೋಟಿ ಮನೆಗಳನ್ನು ಕೊಟ್ಟಿದ್ದಾರೆ
Comments
Post a Comment