Dev_GP president_Selection_AVBB_121223 Slug : ರೀತಿಮುನೇಗೌಡ ಅಧ್ಯಕ್ಷರಾಗಿ ಮುಂದುವರಿಕೆ
Dev_GP president_Selection_AVBB_121223
Slug : ರೀತಿಮುನೇಗೌಡ ಅಧ್ಯಕ್ಷರಾಗಿ ಮುಂದುವರಿಕೆ
ಬೆಂಗಳೂರು ನಗರದ ಯಲಹಂಕ ತಾಲ್ಲೂಕಿನ ಬಾಗಲೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ರೀತಿಮುನೇಗೌಡ ಮುಂದುವರಿದಿದ್ದಾರೆ. ಕಳೆದ ನವೆಂಬರ್ ತಿಂಗಳ 21 ರಂದು ರೀತಿಮುನೇಗೌಡ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಸೇರಿ ಅವಿಶ್ವಾಸ ಮಂಡನೆ ನಡೆಸಿದ್ದರು. ಅವಿಶ್ವಾಸ ಮಂಡನೆ ಪ್ರಶ್ನಿಸಿ ರೀತಿಮುನೇಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಇನ್ನೂ ಈ ಹಿಂದೆ ಅವಿಶ್ವಾಸ ಮಂಡನೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಸಹ ನಿಗದಿ ಆಗಿತ್ತು. ಆದ್ರೆ ನಿನ್ನೆ ಅಧ್ಯಕ್ಷ ಸ್ಥಾನ ಚುನಾವಣೆಗೆ ತಡೆಯಾಜ್ಞೆ ದೊರೆತ್ತಿದ್ದು ಇಂದು ನಡೆಯಬೇಕಿದ್ದ ಚುನಾವಣೆ ರದ್ದಾಗಿದೆ. ಚುನಾವಣೆಯಲ್ಲಿ ಒಟ್ಟು 26 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ 19 ಸದಸ್ಯರು , ಬಿಜೆಪಿ 4 ಸದಸ್ಯರು ಮತ್ತು 3 ಪಕ್ಷೇತರ ಸದಸ್ಯರು ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಂಚಾಯತಿಯ ಚುಕ್ಕಾಣಿ ಹಿಡಿದು ರೀತಿಮುನೇಗೌಡ ಅವರನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಆಯ್ಕೆ ಮಾಡಿದ 6 ತಿಂಗಳಲ್ಲಿ ರೀತಿಮುನೇಗೌಡ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಹಣ ಆಮಿಷಕ್ಕೆ ಅವಿಶ್ವಾಸ ಮಂಡನೆ ನಡೆಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಇನ್ನೂ 19 ಸ್ಥಾನ ಗೆದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನ ಬಿಜೆಪಿ ಸದಸ್ಯರು ಹೈಜಾಕ್ ಮಾಡಿ ಬಿಜೆಪಿ ಆಡಳಿತ ನಡೆಸಲು ಮುಂದಾಗಿದ್ದರು.ಆದ್ರೆ ರೀತಿಮುನೇಗೌಡ ಕೋರ್ಟ್ ಮೆಟ್ಟಿಲೇರಿದರು, ಕೋರ್ಟ್ ತಡೆಯಾಜ್ಞೆ ಕಾರಣ ಬಿಜೆಪಿಯವರ ಕನಸು ನುಚ್ಚು ನೀರಾಗಿದೆ. ಇನ್ನೂ ಬಾಗಲೂರು ಗ್ರಾಮ ಪಂಚಾಯತಿಯಲ್ಲಿ ಪದೇ ಪದೇ ಈ ರೀತಿಯ ರಾಜಕೀಯ ದೊಂಬರಾಟದಿಂದ ಅಭಿವೃದ್ಧಿ ಕುಂಠಿತವಾಗಿದೆ ಇನ್ನಾದರೂ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಆಡಳಿತ ನಡೆಸಿ ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಸಹಕಾರಿ ಆಗಬೇಕಿದೆ.
ಬೈಟ್ : ಗಗನ.ಕೆ , ಚುನಾವಣಾಧಿಕಾರಿ
ಬೈಟ್ : ರೀತಿಮುನೇಗೌಡ, ಬಾಗಲೂರು ಗ್ರಾಮ ಪಂಚಾಯತಿ
ಬೈಟ್ : ಲೋಕೇಶ್, ಉಪಾಧ್ಯಕ್ಷ ಬಾಗಲೂರು ಗ್ರಾಮ ಪಂಚಾಯತಿ
Comments
Post a Comment