ಮಿಲಿಂದ್ ಸೋಮನ್ ಅವರು ಗ್ರೀನ್ ರೈಡ್ 3.0 ಭಾಗವಾಗಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಬೈಕ್‍ನಲ್ಲಿ 200 ಕಿ.ಮೀ ಎಲೆಕ್ಟ್ರಿಕ್ ಬೈಕ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ*

 *ಮಿಲಿಂದ್ ಸೋಮನ್ ಅವರು ಗ್ರೀನ್ ರೈಡ್ 3.0 ಭಾಗವಾಗಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಬೈಕ್‍ನಲ್ಲಿ 200 ಕಿ.ಮೀ ಎಲೆಕ್ಟ್ರಿಕ್ ಬೈಕ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ*

ಬೆಂಗಳೂರು, ಡಿಸೆಂಬರ್ 18, 2023: ಸುಸ್ಥಿರ ಸಾರಿಗೆ ವಿಚಾರದಲ್ಲಿ ಮಹತ್ವದ ಸಾಧನೆ ಮಾಡಿರುವ ಮಿಲಿಂದ್ ಸೋಮನ್, ಭಾರತದ ಫಿಟ್ನೆಸ್ ಐಕಾನ್, ಅವರು 200 ಕಿ.ಮೀ ಎಲೆಕ್ಟ್ರಿಕ್ ವಾಹನ (ಇವಿ) ಯಾನವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಪರಿಸರ-ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ಮತ್ತು ಮಾಲಿನ್ಯ ತಗ್ಗಿಸಲು ಕಾರ್ಬನ್ ಪ್ರಮಾಣ ಕಡಿಮೆ ಮಾಡುವ ಪ್ರಯತ್ನವಾದ ಗ್ರೀನ್ ರೈಡ್ 3.0 ಅಭಿಯಾನದಲ್ಲಿ ಈ ಮಹತ್ವದ ಮೈಲುಗಲ್ಲು ದಾಖಲಾಗಿದೆ.

ಮಿಲಿಂದ್, ಆರೋಗ್ಯಕರ ಮತ್ತು ಪರಿಸರ ಪ್ರಜ್ಞೆಯ ಜೀವನವನ್ನು ಪ್ರತಿಪಾದಿಸುತ್ತಿದ್ದು, ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಅನ್ನು ಈ ಯಾನಕ್ಕಾಗಿ ಆಯ್ಕೆ ಮಾಡಿಕೊಂಡಿರುವುದು, ನಗರಗಳಲ್ಲಿ ಸ್ವಚ್ಛ ಮತ್ತು ಜಾಣತನದ ಪರ್ಯಾಯ ಸಾರಿಗೆ ವ್ಯವಸ್ಥೆ ಅಳವಡಿಸುವುದರ ಅಗತ್ಯವನ್ನು ಸಂಕೇತಿಸುತ್ತದೆ.

ವಿಶಾಲ ವ್ಯಾಪ್ತಿಯ ಗ್ರೀನ್ ರೈಡ್ 3.0 ಅಭಿಯಾನದ ಭಾಗವಾಗಿ ಮಿಲಿಂದ್ ಅವರು ಆರಂಭದಲ್ಲಿ ಡಿಸೆಂಬರ್ 11ರಂದು ಪುಣೆಯಿಂದ ಲೈಫ್‍ಲಾಂಗ್ ಸೈಕಲ್‍ನಲ್ಲಿ ವಡೋದರಾಗೆ ಯಾನ ಆರಂಭಿಸಿದರು. ಮುಂಬಯಿ ಮತ್ತು ಸೂರತ್‍ಗಳಲ್ಲಿ ಸೈಕಲ್ ಯಾನಕ್ಕೆ ವಿರಾಮ ನೀಡಲಾಗಿತ್ತು. ಅದರ ಬೆನ್ನಲ್ಲಿಯೇ ಅವರು ಬೆಂಗಳೂರು ತಲುಪಲು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್‍ನಲ್ಲಿ 200 ಕಿ.ಮೀ ಕ್ರಮಿಸಿದರು. ಇದು ಬಹುಮುಖಿ ಮತ್ತು ಪರಿಸರ-ಸ್ನೇಹಿ ಎಲೆಕ್ಟ್ರಿಕ್ ಸಾರಿಗೆಯ ಮಹತ್ವವನ್ನು ಒತ್ತಿ ಹೇಳುತ್ತದೆ.

ಶ್ರೀ ಮಿಲಿಂದ್ ಸೋಮನ್, ಫಿಟ್ನೆಸ್ ಐಕಾನ್ ಅವರು ತಮ್ಮ ಅನುಭವವನ್ನು ಉತ್ಸಾಹದಿಂದ ಹಂಚಿಕೊಂಡರು ಮತ್ತು ಹೇಳಿದರು, ``ಈ ಯಾನಕ್ಕಾಗಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಅನ್ನು ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಸ್ವಚ್ಛ ಮತ್ತು ಸ್ಮಾರ್ಟ್ ಸಾರಿಗೆ ಆಯ್ಕೆ ಮಾಡಿಕೊಳ್ಳಬೇಕೆಂಬ ಪ್ರತಿಪಾದನೆ ಅಡಗಿದೆ. ಇತರರು ಪರಿಸರ-ಸ್ನೇಹಿ ಆಯ್ಕೆಗಳ ಮೂಲಕ ಆರೋಗ್ಯಕರ ಗ್ರಹಕ್ಕೆ ಕೊಡುಗೆ ನೀಡಲೆಂದು ಆಶಿಸೋಣ’.

ಗ್ರೀನ್‍ರೈಡ್ 3.0 ಆರೋಗ್ಯಕರ ಗ್ರಹಕ್ಕಾಗಿ ಅಗತ್ಯವಾಗಿರುವ ಸಾಮೂಹಿಕ ಪ್ರಯತ್ನವನ್ನು ಸಂಕೇತಿಸುವ ಸಲುವಾಗಿ ವೈವಿಧ್ಯಮಯ ಭೂಪ್ರದೇಶಗಳನ್ನು ಹೊಂದಿರುವ ವಿವಿಧ ನಗರಗಳನ್ನು ವ್ಯಾಪಿಸಿದೆ. ಮಿಲಿಂದ್ ಸೋಮನ್ ಅವರು ಸಹಭಾಗಿತ್ವದಲ್ಲಿ, ಫಿಟ್ನೆಸ್ ಕುರಿತು ಜಾಗೃತಿ ಮೂಡಿಸಲು, ಪರಿಸರದ ಕುರಿತು ಒಮ್ಮತಾಭಿಪ್ರಾಯ ಮೂಡಿಸಲು ಮತ್ತು ಆರೋಗ್ಯಕರ, ಸುಸ್ಥಿರ ಭವಿಷ್ಯಕ್ಕಾಗಿ ಶ್ರಮಿಸಲು ಈ ಅಭಿಯಾನದ ಭಾಗವಾಗುವಂತೆ ಎಲ್ಲರಿಗೂ ಮುಕ್ತ ಆಹ್ವಾನ ನೀಡಿದ್ದಾರೆ.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation