ರಾಜಕೀಯ ಪಕ್ಷಗಳ ವಿರುದ್ಧ ತಿಗಳ ಸಮುದಾಯ ಆಕ್ರೋಶ..! 10 ಟಿಕೆಟ್ ನೀಡುವಂತೆ ಒತ್ತಾಯ
- Get link
- X
- Other Apps
ರಾಜಕೀಯ ಪಕ್ಷಗಳ ವಿರುದ್ಧ ತಿಗಳ ಸಮುದಾಯ ಆಕ್ರೋಶ..! 10 ಟಿಕೆಟ್ ನೀಡುವಂತೆ ಒತ್ತಾಯ
ಬೆಂಗಳೂರು: ಮೂರು ರಾಜಕೀಯ ಪಕ್ಷಗಳ ವಿರುದ್ಧ ತಿಗಳ ಸಮುದಾಯ ಆಕ್ರೋಶ ಹೊರ ಹಾಕಿದ್ದು, 3 ಪಕ್ಷಗಳಲ್ಲಿ ನಮ್ಮ ಸಮುದಾಯದವರಿಗೆ ಟಿಕೆಟ್ ನೀಡಿ ಎಂದು ಒತ್ತಾಯ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ತಿಗಳ ಸಮುದಾಯಕ್ಕೆ 10ಟಿಕೆಟ್ ನೀಡಬೇಕು. 10 ಕ್ಷೇತ್ರಗಳಲ್ಲಿ ನಮ್ಮ ಸಮುದಾಯದವರೇ ನಿರ್ಣಾಯಕ ಮತದಾರರು. ರಾಜ್ಯದಲ್ಲಿ ನಮ್ಮ ಸಮುದಾಯದ 40 ಲಕ್ಷ ಮತದಾರರಿದ್ದೇವೆ. ನಮ್ಮ ಸಮುದಾಯದವರಿಗೆ ಯಾವ ಪಕ್ಷ ಟಿಕೆಟ್ ಕೊಡುತ್ತೋ. ಅವರ ಜೊತೆ 40 ಲಕ್ಷ ತಿಗಳ ಸಮುದಾಯದವರು ಇರುತ್ತೆವೆ.
ರಾಜಕೀಯವಾಗಿ ನಮಗೆ ಸ್ಥಾನಮಾನ ಸಿಕ್ಕರೆ ನಮ್ಮ ಸಮುದಾಯದ ಅಭಿವೃದ್ಧಿಯಾಗುತ್ತದೆ. ಹೀಗಾಗಿ ನಮ್ಮ ಸಮುದಾಯಕ್ಕೆ ಮೂರು ಪಕ್ಷಗಳು ಟಿಕೆಟ್ ಕೊಡಬೇಕೆಂದು ವಿಶ್ವ ಕ್ಷತ್ರೀಯ ಮಹಾ ಸಂಸ್ಥಾನದ ಅಧ್ಯಕ್ಷ ಸೂರ್ಯಪ್ರಕಾಶ್ ಆಗ್ರಹಿಸಿದ್ದಾರೆ. ಅಲ್ಲದೇ ಚಿಕ್ಕಪೇಟೆ ಯಿಂದ PR ರಮೇಶ್ ಗೆ ಕಾಂಗ್ರೆಸ್ ಟಿಕೆಟ್, ರಾಜಾಜಿನಗರ ದಿಂದ ನೆ.ಲ ನರೇಂದ್ರ ಬಾಬುಗೆ ಬಿಜೆಪಿ ಟಿಕೆಟ್, ಹಾಗೂ ರಾಮನಗರದಲ್ಲಿ ಡಿ.ನರೇಂದ್ರಗೆ ಬಿಜೆಪಿ ಟಿಕೆಟ್, ಮಾಲೂರಿನಿಂದ ಹೂಡಿ ವಿಜಯ್ ಕುಮಾರ್ ಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಮಾಧ್ಯಮಗಳ ಮೂಲಕ ಒತ್ತಾಯ ಮಾಡಿದ್ದಾರೆ.
- Get link
- X
- Other Apps

Comments
Post a Comment