ಸೈನಿಕ ಕಲ್ಯಾಣ ಹಾಗೂ ಪುನರ್ ವಸತಿ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ಅರೆ ಸೇನಾ ಪಡೆ ಯೋಧರಿಂದ ತೀವ್ರ ಪ್ರತಿಭಟನೆ

ಸೈನಿಕ ಕಲ್ಯಾಣ ಹಾಗೂ ಪುನರ್ ವಸತಿ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ಅರೆ ಸೇನಾ ಪಡೆ ಯೋಧರಿಂದ ತೀವ್ರ ಪ್ರತಿಭಟನೆ.






ಸೇವೆಯಿಂದ ನಿವೃತ್ತರಾದ ರಾಜ್ಯದ ಮಾಜಿ ಯೋದರು ಹಾಗೂ ಹುತಾತ್ಮ ಕುಟುಂಬಗಳ ಕ್ಷೇಮಾಭಿವೃದ್ಧಿಗಾಗಿ ರಾಜ್ಯದ ರಾಜಧಾನಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ಅರ್ಧ ಸೈನಿಕ ಕಲ್ಯಾಣ ಹಾಗೂ ಪುನರ್ ವಸತಿ ಮಂಡಳಿಯನ್ನು ಸ್ಥಾಪಿಸಿ ಅರೆ ಸೇನಾಪಡೆಗಳ ಯೋಧರನ್ನು ನೇಮಕ ಮಾಡಿಕೊಳ್ಳಬೇಕೆಂದು ಸಾವಿರಾರು ಅರೆ ಸೇನಾ ಪಡೆಗಳ ಯೋಧರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ನಿವೃತ್ತರಾದ ಅರೆಸೇನಾ ಪಡೆಗಳ ಯೋಧರನ್ನು ಅರ್ಹತೆ ಆಧಾರದ ಮೇಲೆ ನೇಮಕಮಾಡಿಕೊಳ್ಳ ಬೇಕು, ಹುತಾತ್ಮ ಯೋಧರ ಕುಟುಂಬದವರಿಗೆ ಸರ್ಕಾರಿ ಹುದ್ದೆಗಳಲ್ಲಿ  ನೇಮಕಾತಿ ಮಾಡಿಕೊಳ್ಳಲು ಸೂಕ್ತ ತಿದ್ದುಪಡಿ ತರಬೇಕೆಂದು ಆಗ್ರಹಿಸಿದರು.

2004ರ ನಂತರ ನೇಮಕವಾದ ನಮ್ಮ ಯೋದರಿಗೆ ಹಳೇ ಪಿಂಚಣಿಯನ್ನು ಪುನರ್ ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು, ಬಿಎಸ್ ಎಫ್, ಸಿ ಆರ್ ಫಿ ಎಫ್, ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಪಡೆ, ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆಯ ಯೋದರು ಸೇವೆಯಿಂದ ನಿವೃತ್ತರಾದ  ಹಾಗೂ ಹುತಾತ್ಮ ಕುಟುಂಬಗಳಿಗೆ ಕೃಷಿ ಉದ್ದೇಶಕ್ಕಾಗಿ ಭೂಮಿ ಮತ್ತು ಮನೆ ಮಂಜೂರು ಮಾಡಲು ಕನಿಷ್ಠ 10 ಲಕ್ಷ ರೂಪಾಯಿಗಳ ಸಹಾಯಧನ ನೀಡಲು ಸರ್ಕಾರಿ ಸಹಾಯ ಧನ  ನೀಡಲು ಸೂಕ್ತ ಆದೇಶ ನೀಡಬೇಕೆಂದು ರಾಜ್ಯಾಧ್ಯಕ್ಷ ಹನುಮಂತ ರಾಜು, ಖಚಾಂಚಿ  ಮಹೇಂದ್ರ ಒತ್ತಾಯಿಸಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"