ದ ವಾಂಡರರ್ ಹೂ ಓನ್ಸ್ ದ ವರ್ಲ್ಡ್’ (The Wanderer Who owns the World) ಪುಸ್ತಕ ಲೋಕಾರ್ಪಣೆ.

 

ದ ವಾಂಡರರ್ ಹೂ ಓನ್ಸ್ ದ ವರ್ಲ್ಡ್’ (The Wanderer Who owns the World) ಪುಸ್ತಕ ಲೋಕಾರ್ಪಣೆ.



‘ದ ವಾಂಡರರ್ ಹೂ ಓನ್ಸ್ ದ ವರ್ಲ್ಡ್’ (The Wanderer Who owns the World) ಪುಸ್ತಕ ಲೋಕಾರ್ಪಣೆ.

ಬೆಂಗಳೂರು. ದ ವಾಂಡರರ್ ಹೂ ಓನ್ಸ್ ದ ವರ್ಲ್ಡ್’ (The Wanderer Who owns the World) ಪುಸ್ತಕ ಲೋಕಾರ್ಪಣೆ. ಮಾಡಲಿದ್ದಾರೆಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು . ಶ್ರೀ ಸಹಸ್ರಾರ ಯೋಗೀಶ್ವರ ಸ್ವಾಮಿ ಮಹಾಪೀಠದ ವತಿಯಿಂದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿರುವ, ಶ್ರೀ ಯೋಗಿ ಅವರು ರಚಿಸಿದ ಮಹತ್ವದ ಕೃತಿ ‘ದ ವಾಂಡರರ್ ಹೂ ಓನ್ಸ್ ದ ವರ್ಲ್ಡ್’ ಇದರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಧ್ಯಮ ಮಿತ್ರರನ್ನು ಆದರದಿಂದ ಆಹ್ವಾನಿಸುತ್ತಿದ್ದೇವೆಎಂದು ತಿಳಿಸಿದರು.
ವೇಗ ಮತ್ತು ಆತಂಕದ ಇಂದಿನ ಆಧುನಿಕ ಬದುಕಿನಲ್ಲಿ ಯಶಸ್ಸು ಮತ್ತು ಅಸ್ಮಿತೆಯ ಬಗೆ, ಹೊಸ ದೃಷ್ಟಿಕೋನವನ್ನು ಈ ಪುಸ್ತಕ ನೀಡುತ್ತದೆ. “ಯಾರು ಜಗತ್ತಿಗೆ ಅಂಟಿಕೊಳ್ಳುವುದಿಲ್ಲವೋ ಅವರು ಮಾತ್ರ ಇಡೀ ಜಗತ್ತನ್ನು ತಿಳಿದು ಅನುಭವಿಸಲು ಸಾಧ್ಯ ಎಂಬ ಗಾಢವಾದ ಚಿಂತನೆಯನ್ನು ಈ ಕೃತಿ ಒಳಗೊಂಡಿದೆ. ಮಾನಸಿಕ ನೆಮ್ಮದಿ ಮತ್ತು ಜೀವನದ ಅರ್ಥವನ್ನು ಹುಡುಕುತ್ತಿರುವ ಇಂದಿನ ಪೀಳಿಗೆಗೆ ಇದು ದಾರಿದೀಪವಾಗಲಿದೆ.
ಕಾರ್ಯಕ್ರಮದ ವಿವರಗಳು:
ದಿನಾಂಕ: ಗುರುವಾರ, 7 ಮೇ 2026
ಸ್ಥಳ: ಅಟ್ಟ ಗಲಾಟ್ನಾ (Atta Galatta), ಇಂದಿರಾನಗರ, ಬೆಂಗಳೂರು.
ಕಾರ್ಯಕ್ರಮದ ವಿಶೇಷತೆಗಳು:
ಆಧುನಿಕ ಬದುಕಿನ ಒತ್ತಡಗಳಿಗೆ ಪರಿಹಾರ ನೀಡುವ ವೈಚಾರಿಕ ಕೃತಿಯ ಅನಾವರಣ
ಸಾರ್ವಜನಿಕ ಜೀವನದ ಗಣ್ಯ ವ್ಯಕ್ತಿಗಳ ಉಪಸ್ಥಿತಿ
ಗೌರವಾನ್ವಿತ ಅತಿಥಿಗಳು: ಈ ಸಮಾರಂಭದಲ್ಲಿ ಸಂಸದರಾದ ಡಾ. ಸಿ. ಎನ್ ಮಂಜುನಾಥ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಶ್ರೀ ಸುಧೀರ್ ಎಂ. ಹೆಗಡೆ, ಹಿರಿಯ ವಿದ್ವಾಂಸರಾದ ಶ್ರೀ ಜಿ. ಅಶ್ವತ್ಥನಾರಾಯಣ. ಖ್ಯಾತ ನಟಿ ಶ್ರೀಮತಿ ತಾರಾ ಅನುರಾಧ. ನಟ ಶ್ರೀ ರಾಣಾ, ಕವಿ ಶ್ರೀ ಮಂಡಲಗಿರಿ ಪ್ರಸನ್ನ ಸೇರಿದಂತೆ ವೈದ್ಯಕೀಯ ಮತ್ತು ಉದ್ಯಮ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಲೇಖಕರ ಬಗ್ಗೆ: ಶ್ರೀ ಯೋಗಿ (ಪರಮಪೂಜ್ಯ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಶ್ರೀ ಶ್ರೀ ಯೋಗೀಶ್ವರ ಸ್ವಾಮಿಗಳು) ಅವರು ವಾಸ್ತುಶಿಲ್ಪ. ವಾಯುಯಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನುಭವ ಹೊಂದಿ. ಇಂದು ಅವಧೂತ ಮಾರ್ಗದಲ್ಲಿ ನೆಲೆ ನಿಂತವರು. ಅವರ ಜೀವನದ ಶ್ರೀಮಂತ ಅನುಭವಗಳೇ ಈ ಪುಸ್ತಕದ ಸಾರ ಎಂದು ತಿಳಿಸಿದರು. 

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ