ರಾಜ್ಯಾದ್ಯಂತ ಆಸ್ತಿಗಳ ಭದ್ರತೆ ಅಪಾಯದಲ್ಲೇ?* *ಇ-ನೋಂದಣಿ ದೋಷಗಳಿಂದ ಭೂಮಾಫಿಯಾ, ಹ್ಯಾಕರ್‌ಗಳಿಗೆ ಬಾಗಿಲು

 *ರಾಜ್ಯಾದ್ಯಂತ ಆಸ್ತಿಗಳ ಭದ್ರತೆ ಅಪಾಯದಲ್ಲೇ?*

*ಇ-ನೋಂದಣಿ ದೋಷಗಳಿಂದ ಭೂಮಾಫಿಯಾ, ಹ್ಯಾಕರ್‌ಗಳಿಗೆ ಬಾಗಿಲು ತೆರೆಯಿತೇ?*



*ಜನರಲ್ಲಿ ಆತಂಕ – ತಜ್ಞರಿಂದ ಗಂಭೀರ ಎಚ್ಚರಿಕೆ*

ಬೆಂಗಳೂರು, ಮೇ 2: ರಾಜ್ಯದಲ್ಲಿ ಜಾರಿಗೊಂಡಿರುವ ಪೇಪರ್‌ಲೆಸ್ ಡಿಜಿಟಲ್ ಇ-ನೋಂದಣಿ ವ್ಯವಸ್ಥೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸಾಮಾನ್ಯ ಜನರ ಆಸ್ತಿ ಭದ್ರತೆ ಗಂಭೀರ ಅಪಾಯದಲ್ಲಿದೆ ಎಂಬ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ತಾಂತ್ರಿಕ ದೋಷಗಳು, ಭದ್ರತಾ ಕೊರತೆಗಳು ಹಾಗೂ ಪಾರದರ್ಶಕತೆಯ ಅಭಾವದಿಂದ ಈ ವ್ಯವಸ್ಥೆ ಭೂಮಾಫಿಯಾ ಮತ್ತು ಹ್ಯಾಕರ್‌ಗಳಿಗೆ ಸಹಾಯಕವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.  

ಮುಖ್ಯ ಸಮಸ್ಯೆಗಳು – ಸಾರ್ವಜನಿಕರಿಗೆ ದೊಡ್ಡ ಎಚ್ಚರಿಕೆ

ಪತ್ರಗಳೇ ಇಲ್ಲ – ಆಸ್ತಿಯೇ ಅಪಾಯದಲ್ಲಿ!

ಇ-ನೋಂದಣಿ ಬಳಿಕ ಖರೀದಿದಾರರಿಗೆ ಯಾವುದೇ ಭೌತಿಕ ದಾಖಲೆಗಳು ನೀಡಲಾಗುತ್ತಿಲ್ಲ. ಡಿಜಿಟಲ್ ಲಾಕರ್‌ನಲ್ಲೇ ದಾಖಲೆಗಳು ಉಳಿಯುತ್ತಿರುವುದರಿಂದ ಜನರಿಗೆ ತಮ್ಮ ಆಸ್ತಿಯ ನಿಖರ ದಾಖಲೆಗಳೇ ಲಭ್ಯವಿಲ್ಲ.  

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಂಕ ಇಲಾಖೆಯಿಂದ ಪರವಾನಗಿ ಪಡೆದ (ದಸ್ತು)ಪತ್ರ ಬರಹಗಾರರ ಒಕ್ಕೂಟದಿಂದ ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ವಿ.ಏಕಕೋಟೆ, ಉಪಾಧ್ಯಕ್ಷರಾದ ನವೀನ್ ಕುಮಾರ್ ಎಸ್, ಸಹ ಕಾರ್ಯದರ್ಶಿಗಳಾದ  ಕರಿಬಸಪ್ಪ ಬಳ್ಳಿ, ಈ.ಕೃಷ್ಣಮೂರ್ತಿರವರು ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು.

ವಾರಸುದಾರರಿಗೆ ಮಾಹಿತಿ ಇಲ್ಲ – ಆಸ್ತಿ ಕಳೆದುಕೊಳ್ಳುವ ಭೀತಿ

ಆಸ್ತಿ ಖರೀದಿ ಬಗ್ಗೆ ಕುಟುಂಬ ಸದಸ್ಯರಿಗೆ ಸ್ಪಷ್ಟ ಮಾಹಿತಿ ಸಿಗದಿರುವುದರಿಂದ ಮುಂದಿನ ದಿನಗಳಲ್ಲಿ ಆಸ್ತಿಗಳು ಕೈತಪ್ಪುವ ಸಂಭವ ಹೆಚ್ಚಿದೆ.  

ಇ-ಸಹಿ ದುರುಪಯೋಗ – ಮೋಸಕ್ಕೆ ಅವಕಾಶ

ಭೌತಿಕ ಸಹಿಯ ಬದಲು ಇ-ಸಹಿಯನ್ನು ಬಳಸುವುದರಿಂದ ಹಿರಿಯ ನಾಗರಿಕರು, ಅಕ್ಷರಜ್ಞಾನದ ಕೊರತೆಯವರು ಮೋಸಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.  

ಭೂಮಾಫಿಯಾ ಚಟುವಟಿಕೆಗಳಿಗೆ ಉತ್ತೇಜನ?

ಈ ಪೇಪರ್‌ಲೆಸ್ ವ್ಯವಸ್ಥೆ ಭೂಮಾಫಿಯಾ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.  

ಬ್ಯಾಂಕ್ ಸಾಲಕ್ಕೂ ಅಡೆತಡೆ

ಮೂಲ ದಾಖಲೆಗಳಿಲ್ಲದೇ ಬ್ಯಾಂಕ್‌ಗಳಲ್ಲಿ ಆಸ್ತಿ ಮೇಲೆ ಸಾಲ ಪಡೆಯುವುದು ಕಷ್ಟಕರವಾಗಿದೆ.  

OTP ಗೊಂದಲ – ಜನರಲ್ಲಿ ಭೀತಿ

ಒಂದೇ ನೋಂದಣಿಗೆ ಅನೇಕ ಬಾರಿ OTP ಅಗತ್ಯವಿರುವುದು ಜನರಲ್ಲಿ ಆತಂಕ ಮೂಡಿಸುತ್ತಿದ್ದು, ಹ್ಯಾಕಿಂಗ್ ಭೀತಿ ಹೆಚ್ಚಾಗಿದೆ.  

ವಿಲ್ (Will) ವ್ಯವಸ್ಥೆಯಲ್ಲೂ ಗೊಂದಲ

ಗುಪ್ತವಾಗಿ ಮಾಡಬೇಕಾದ ವಿಲ್ ಪ್ರಕ್ರಿಯೆಯೂ ಈ ವ್ಯವಸ್ಥೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು.  

ಸಾಮಾನ್ಯರಿಗೆ ಅರ್ಥವಾಗದ ವ್ಯವಸ್ಥೆ

ಈ ಡಿಜಿಟಲ್ ವ್ಯವಸ್ಥೆ ವಿದ್ಯಾವಂತರಿಗೂ ಅರ್ಥವಾಗದ ಮಟ್ಟಕ್ಕೆ ಸಂಕೀರ್ಣವಾಗಿದ್ದು, ಗ್ರಾಮೀಣ ಹಾಗೂ ಸಾಮಾನ್ಯ ಜನರಿಗೆ ಸಂಪೂರ್ಣ ಗೊಂದಲ ಉಂಟುಮಾಡುತ್ತಿದೆ. 

*ಅಚ್ಚರಿಯ ಸಂಗತಿ: “ಪೇಪರ್‌ಲೆಸ್ ಅಲ್ಲ, ‘ಪೆನ್‌ಲೆಸ್’ ವ್ಯವಸ್ಥೆ!”*

ಈ ವ್ಯವಸ್ಥೆಯಲ್ಲಿ ಖರೀದಿದಾರರು, ಮಾರಾಟಗಾರರು, ಸಾಕ್ಷಿದಾರರು, ಹಾಗು ಅಧಿಕಾರಿಗಳೂ ಸಹ ಭೌತಿಕ ಸಹಿ ಮಾಡುವ ಅಗತ್ಯವಿಲ್ಲ. ಇದು ವ್ಯವಸ್ಥೆಯ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡುತ್ತಿದೆ.  

ತಜ್ಞರು ಮತ್ತು ಸಂಘಟನೆಗಳು ಈ ವ್ಯವಸ್ಥೆಯ ದೋಷಗಳನ್ನು ತಕ್ಷಣ ಸರಿಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದು, ಇಲ್ಲವಾದರೆ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಡಿಜಿಟಲ್ ಯುಗದಲ್ಲಿ ಸುಲಭತೆಗಾಗಿ ಜಾರಿಗೊಂಡ ಈ ಇ-ನೋಂದಣಿ ವ್ಯವಸ್ಥೆ, ಇದೀಗ ಜನರ ಆಸ್ತಿ ಭದ್ರತೆಯನ್ನೇ ಪ್ರಶ್ನಿಸುವ ಸ್ಥಿತಿಗೆ ತಲುಪಿದೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಇದು ರಾಜ್ಯದ ಸಾವಿರಾರು ಕುಟುಂಬಗಳಿಗೆ ದೊಡ್ಡ ಸಂಕಷ್ಟವನ್ನುಂಟುಮಾಡುವ ಸಾಧ್ಯತೆ ಇದೆ.

ಖಜಾಂಚಿಗಳಾದ ಡಿ.ಆರ್.ಗಿರಿರಾಜು, ಕೆ.ಗಂಗಾಧರ್, ಸಂಚಾಲಕರಾದ ಸಂಚಾಲಕರಾದ ರಾಜಶೇಖರ್, ನಿರ್ದೇಶಕರುಗಳಾದ  ಕೇಶವಮೂರ್ತಿ, ನಾಗರಾಜ್ ಟಿ, ಜಿ.ಲಕ್ಷ್ಮಣ್, ಜಯಕುಮಾರ್ ಜೆ.ಜಿ.ರವರು ಉಪಸ್ಥಿತರಿದ್ದರು.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ