ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ : ಯುವ ಕಾಂಗ್ರೆಸ್ ಸಮಿತಿ ವತಿಯಿಂದ ವಿನೂತನ ಪ್ರತಿಭಟನೆ*

 *ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ : ಯುವ ಕಾಂಗ್ರೆಸ್ ಸಮಿತಿ ವತಿಯಿಂದ ವಿನೂತನ ಪ್ರತಿಭಟನೆ*



*ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕೇಂದ್ರ ಸಚಿವೆ ಶೋಭ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮೌನ, ಬಿಜೆಪಿ ಅಂಧ ಭಕ್ತರಿಗೆ ಮಾತ್ರ ಬೆಲೆ ಹೆಚ್ಚಳ ಮಾಡಿ-ಹೆಚ್.ಎಸ್.ಮಂಜುನಾಥ್ ಗೌಡ*


ಬೆಂಗಳೂರು: ಫೀಡಂ ಪಾರ್ಕ್ ನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಿರುವುದನ್ನ ಖಂಡಿಸಿ ಮತ್ತು ಸಣ್ಣ ವ್ಯಾಪಾರಿಗಳು, ಹೋಟಲ್ ಉದ್ಯಮಿಗಳು ಮತ್ತು ಸಾರ್ವಜನಿಕರ ಪರವಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥ್ ಗೌಡರವರು ನೇತೃತ್ವದಲ್ಲಿ ಖಾಲಿ ಸಿಲಿಂಡರ್ ಪ್ರದರ್ಶನದ ಮೂಲಕ ವಿನೂತನವಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದರು.


ಇದೇ ಸಂದರ್ಭದಲ್ಲಿ *ಹೆಚ್.ಎಸ್.ಮಂಜುನಾಥ್ ಗೌಡರವರು* ಮಾತನಾಡಿ ಚುನಾವಣೆಗೊಸ್ಕರ ದರ ಏರಿಕೆ ಮಾಡದೇ, ಇದೀಗ ವಾಣಿಜ್ಯ ಗ್ಯಾಸ್ ದರ 990ರೂಪಾಯಿ ಹೆಚ್ಚಳ ಮಾಡಿ, ಬೀದಿ ಬದಿಯ ಸಣ್ಣ ವ್ಯಾಪಾರಿಗಳು  ಮತ್ತು  ಹೋಟೆಲ್ ನವರಿಗೆ ಬಹಳ ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ.

ರಾಜ್ಯದಲ್ಲಿ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮೌನವಹಿಸಿದ್ದಾರೆ.


ಕೇಂದ್ರ ಸರ್ಕಾರ ಬಿಜೆಪಿ ಅಂಧ ಭಕ್ತರಿಗೆ ಗ್ಯಾಸ್ ಬೆಲೆ ಹೆಚ್ಚಳ ಮಾಡಿ ಕೊಡಿ ಅವರು ಸಹಿಸಿಕೊಳ್ಳುತ್ತಾರೆ, ಸಾಮಾನ್ಯ ಜನರಿಗೆ ದರ ಕಡಿಮೆ ಮಾಡಿ.


 ಮನಮೋಹನ್ ಸಿಂಗ್ ರವರ ಆಡಳಿತದಲ್ಲಿ ಗ್ಯಾಸ್ ಪೆಟ್ರೋಲ್ ಸಂಗ್ರಹ ಕೇಂದ್ರ ಸ್ಥಾಪನೆಯಿಂದ ಇಷ್ಟು ದಿನ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿಲ್ಲ, ಪಂಚ ರಾಜ್ಯ ಚುನಾವಣೆ ನಂತರ ಗದಾಪ್ರಹಾರ ಮಾಡಿದ್ದಾರೆ.


ವಾಣಿಜ್ಯ ಗ್ಯಾಸ್ ದರ ಏರಿಕೆಯಿಂದ ಆಹಾರ, ತಿನಿಸುಗಳ ಬೆಲೆ ಹೆಚ್ಚಳವಾಗಲಿದೆ ಇದರಿಂದ ವ್ಯಾಪಾರ ಕುಸಿತವಾಗಲಿದೆ. ಸಣ್ಣ ಉದ್ಯಮಿದಾರರು, ಹೋಟಲ್ ಗಳು ನಂಬಿರುವ ಕೊಟ್ಯಂತರ ಜೀವನ ಬೀದಿ ಪಾಲಾಗಲಿದೆ. ಆರ್ಥಿಕ ಕುಸಿತವಾಗಿ ದೇಶ ಕಂಗಾಲು ಆಗುವ ಪರಿಸ್ಥಿತಿ ಬರುತ್ತದೆ 


ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ 2ರೂಪಾಯಿ ಹೆಚ್ಚಾದರೆ ಬೀದಿಗೆ ಬಂದು ಗಲಾಟೆ ಮಾಡುತ್ತಿದ್ದ ಕೇಂದ್ರ ಸಚಿವೆ ಶೋಭ ಕರಾಂದ್ಲಜೆರವರು ಇಂದು 990ರೂಪಾಯಿ ಗ್ಯಾಸ್ ದರ ಏರಿಕೆ ಮಾಡಿದೆ ಈಗ ಯಾಕೆ ಮಾತನಾಡುತ್ತಿಲ್ಲ ಶೋಭ ಮೇಡಮ್. ಸಂಸದ ತೇಜಸ್ವಿಸೂರ್ಯ ಎಲ್ಲಿದಿಯಪ್ಪ


ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಯುವ ಕಾಂಗ್ರೆಸ್ ಸಮಿತಿ ಹೋರಾಟ ಮತ್ತು ಪ್ರತಿಭಟನೆ ಮಾಡಲಿದೆ ಎಂದು ಹೇಳಿದರು.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ