ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಒಂದು ದಿನದ ಕಾರ್ಯಾಗಾರ. ನ್ಯಾ.ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕ; ತಿರಸ್ಕಾರಕ್ಕೆ ಬಲಗೈ ಸಮುದಾಯ ಮುಖಂಡರ ಒಕ್ಕೊರಲ್ಲ ತೀರ್ಮಾನ.
ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಒಂದು ದಿನದ ಕಾರ್ಯಾಗಾರ.
ನ್ಯಾ.ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕ; ತಿರಸ್ಕಾರಕ್ಕೆ ಬಲಗೈ ಸಮುದಾಯ ಮುಖಂಡರ ಒಕ್ಕೊರಲ್ಲ ತೀರ್ಮಾನ.
ಬೆಂಗಳೂರು: ಏ.17: ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ವತಿಯಿಂದ ಒಳಮೀಸಲಾತಿ ವಿಷಯದಲ್ಲಿ ನಾಗಮೋಹನ್ ದಾಸ್ ಆಯೋಗವು ನೀಡಿರುವ ಅವೈಜ್ಞಾನಿಕ ವರದಿಯ ಹಿನ್ನಲೆಯಲ್ಲಿ ಸಮಗ್ರವಾಗಿ ನಮ್ಮ ಬಲಗೈ ಸಮುದಾಯಕ್ಕೆ ಅನ್ಯಾಯದ ವಿಷಯವಾಗಿ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.
ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಹುಜನ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ,ರೋಸ್ಟರ್ ಬಿಂದುಗಳ ಆದೇಶವನ್ನು ಹಿಂಪಡೆಯಲು ಮತ್ತು ಸಮಾಜ ಕಲ್ಯಾಣ ಇಲಾಖೆ ದಿನಾಂಕ ಅಕ್ಟೋಬರ್ 8 2025ರಂದು ಹೊರಡಿಸಿರುವ ಜಾತಿ ಪ್ರಮಾಣ ಪತ್ರದ ಸುತ್ತೋಲೆಯನ್ನು ಹಿಂಪಡೆದು ಮೂಲ ಜಾತಿ ಪ್ರಮಾಣ ಪತ್ರ ನೀಡಲು ಆದೇಶ ಹೊರಡಿಸಲು, ಈ ಹಿಂದೆ ನೀಡಿರುವ ಕಾಯಂ ಜಾತಿ ಪ್ರಮಾಣ ಪತ್ರಗಳನ್ನು ಪರಿಗಣಿಸಲು ಶೇ.15+3ರಲ್ಲಿ ಒಳಮೀಸಲಾತಿಯನ್ನು ಜಾರಿಗೆ ತರಬಾರದು ಎಂದು ಹೇಳಿದರು.
ಸರ್ಕಾರವು ಇದುವರೆಗೂ ಯಾವುದೇ ಕ್ರಮ ವಹಿಸದೇ ಇರುವುದರಿಂದ ಮುಂದಿನ ಹೋರಾಟಗಳನ್ನು ರೂಪಿಸಲು ಚರ್ಚಿಸುವುದು ಅಗತ್ಯವಾಗಿದೆ ಈ ಹಿನ್ನೆಲೆಯಲ್ಲಿ ಕಾರ್ಯಗಾರವನ್ನು ಏರ್ಪಡಿಸಿ ಕೆಲ ಅಂಶಗಳ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಬೇಕಾಗಿರುತ್ತದೆ ಎಂದು ಹೇಳಿದರು.
ಕಾರ್ಯಾಗರದಲ್ಲಿರಾಜ್ಯದ 31 ಜಿಲ್ಲೆಯ ಎಲ್ಲಾ ಬಲಗೈ ಸಮುದಾಯದ ಪದಾಧಿಕಾರಿಗಳು,ಮುಖಂಡರು/ಸಮುದಾಯದ ಅಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ ಇದನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಂಚಾಲಕರಾದ ಸಿದ್ದಯ್ಯ ಐಎಎಸ್ (ನಿವೃತ್ತ), ಬಿಬಿಎಂಪಿಯ ಮಾಜಿ ಮಹಾಪೌರ ಸಂಪತ್ ರಾಜ್, ಮೈಸೂರಿನ ಮಾಜಿ ಮಹಾಪೌರರ ಪುರುಷೋತ್ತಮ್, ವಾಣಿ ಶಿವರಾಮ್, ಶಿವಣ್ಣ ಬಿ. ಕನಕಪುರ, ಒಕ್ಕೂಟದ ಸದಸ್ಯರುಗಳು, ಮತ್ತಿತರರು
ಮತ್ತು ಒಕ್ಕೂಟ ಪರವಾಗಿ ಶಿವಣ್ಣ ಬಿ. ಕನಕಪುರ, ಡಾ. ದೀಪಕ್ ಅಪ್ಪಾಜಿ, ಡಾ. ಈಶ್ವರ್ ಸಿರಿಗೇರಿ ಮತ್ತಿತರರು ಭಾಗವಹಿಸಿದ್ದರು.


Comments
Post a Comment