*ರೈತರಿಗೆ ಉಚಿತವಾಗಿ ಗೊಬ್ಬರ ವಿತರಣೆ ಯೋಜನೆಗೆ ಚಾಲನೆ.ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮ ನಿಯಮಿತ
*ರೈತರಿಗೆ ಉಚಿತವಾಗಿ ಗೊಬ್ಬರ ವಿತರಣೆ ಯೋಜನೆಗೆ ಚಾಲನೆ.ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮ ನಿಯಮಿತ*
ಜಿಬಿಎ ಕೇಂದ್ರ ಕಛೇರಿ: ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮ ನಿಯಮಿತ ಜಿಬಿಟಿಐಎ ವತಿಯಿಂದ ಸಿ.ಎಸ್.ಆರ್.ಚಟುವಟಿಕೆಯಡಿ ಬೆಂಗಳೂರು ಕಾಂಪೋಸ್ಟ್ ಖರೀದಿ ಮತ್ತು ರೈತರಿಗೆ ಉಚಿತಲಾಗಿ ವಿತರಣಾ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಎ.ಎನ್.ನಟರಾಜ್ ಗೌಡರವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ *ಅಧ್ಯಕ್ಷರಾದ ಎ.ಎನ್.ನಟರಾಜ್ ಗೌಡರವರು* ಮಾತನಾಡಿ ಹಸಿ ಕಸದಿಂದ ಗೊಬ್ಬರ ತಯಾರಿಕೆಯಾಗಬೇಕು ಮತ್ತು ಒಣಕಸ ಮರುಬಳಕೆಯಾಗಬೇಕು ಭೂಮಿಗೆ ಯಾವ ಕಲುಷಿತ ವಸ್ತುಗಳು ಸೇರಬಾರದು ಎಂಬ ಉದ್ದೇಶ ಈ ನಿಟ್ಟಿನಲ್ಲಿ ಬೆಂಗಳೂರು ಮತ್ತು ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ತಯಾರಿಕೆಯಾಗುವ ಗೊಬ್ಬರ ಮತ್ತು ನಮ್ಮ ನಿಗಮದಲ್ಲಿರುವ ಗೊಬ್ಬರವನ್ನು ಸಿ.ಎಸ್.ಆರ್.ಅನುದಾನದ ಅಡಿಯಲ್ಲಿ ಮೈತ್ರಿ ಸರ್ವ ಸೇವಾ ಸಮಿತಿ ಸಹಯೋಗದಲ್ಲಿ ರೈತರಿಗೆ ಉಚಿತವಾಗಿ ಕಾಂಪೋಸ್ಟ್ ಗೊಬ್ಬರ ವಿತರಿಸಲಾಗುವುದು.
ಬೆಂಗಳೂರುನಗರದಲ್ಲಿ ಕಾಂಪೋಸ್ಟ್ ತಯಾರಿಕೆಯಾದ ಮೇಲೆ ಹಳ್ಳಿಯ ರೈತರಿಗೆ ಉಪಯೋಗವಾಗಲು ಡೊಡ್ಡ ಯೋಜನೆ ರೂಪಿಸಲಾಗಿದೆ. ಇದರಿಂದ ಸಿ.ಎಸ್.ಆರ್. ನಿಧಿಯಿಂದ ರೈತರಿಗೆ ಉಚಿತವಾಗಿ ನೀಡಲಾಗುವುದು.
ನಮ್ಮ ಸಂಸ್ಥೆ ಮತ್ತು ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ತಯಾರಿಸುವ ಗೊಬ್ಬರವನ್ನು ತಲುಪಿಸುವ ಕೆಲಸವಾಗುತ್ತದೆ.
ಕೋಲಾರ, ಚಿಕ್ಕಬಳ್ಳಾಪುರ ವಿವಿಧ ಜಿಲ್ಲೆಗಳ ರೈತರಿಗೆ ಇದರ ಉಪಯೋಗವಾಗಲಿದೆ.
ನಿಗಮ ನಿಯಮಿತ ಜೊತೆಯಲ್ಲಿ ವಿಷನ್ 2೦30 ಆನ್ವಯ ಕಸವನ್ನು ಗೊಬ್ಬರ ತಯಾರಿಕೆ ಮಾಡಿ ಸಚ್ಚತೆ ಕಾಪಾಡುವುದು. ನಗರ ಪ್ರದೇಶದ ಹಸಿ ಕಸದಿಂದ ರಸ ಎಂಬಂತೆ ಹಸಿ ಕಸದಿಂದ ಉತ್ತಮ ಗೊಬ್ಬರ ತಯಾರಿಕೆ ಮಾಡಿ ರೈತರಿಗೆ ನೀಡಿದರೆ ಉತ್ತಮ ಬೇಳೆಯಾಗುತ್ತದೆ ರೈತರಿಗೆ ಉಚಿತ ಗೊಬ್ಬರ ವಿತರಣೆಯನ್ನು ನೇರಳೆ ಗ್ರಾಮದ ರೈತರಿಗೆ ವಿತರಿಸಲಾಗುತ್ತದೆ.
ಮೈತ್ರಿ ಸರ್ವ ಸೇವಾ ಸಮಿತಿಯ ಪದಾಧಿಕಾರಿಗಳಾದ ಹರೀಶ್ ಬಾಬು, ವಾಸು,ವಿಶಾಲ್, ಗಿರೀಶ್ ರವರು ಭಾಗವಹಿಸಿದ್ದರು.

Comments
Post a Comment