ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಂದ ಸುಳ್ಳು ಮಾಹಿತಿ ನೀಡಿ ಆಸ್ತಿ ಕಬಳಿಕೆ ಆರೋಪ.

 ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಂದ ಸುಳ್ಳು ಮಾಹಿತಿ ನೀಡಿ ಆಸ್ತಿ ಕಬಳಿಕೆ ಆರೋಪ.


ಬೆಂಗಳೂರು ಏಪ್ರಿಲ್ 15; ತೆಲಂಗಾಣ ಮೂಲದ ಹಿರಿಯ ನಾಗರಿಕರಿಗೆ ಸೇರಿದ ಬೆಲೆ ಬಾಳುವ ನಿವೇಶನವನ್ನು ಬಿಜೆಪಿ ಹಿರಿಯ ಮುಖಂಡ,ಪ್ರತಿಪಕ್ಷ ನಾಯಕ ಆರ್.ಅಶೋಕ್ ನ್ಯಾಯಾಲಯಕ್ಕೆ ಸುಳ್ಳು  ಮಾಹಿತಿ ನೀಡಿ ಕಬಳಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಸಮಾಜ ಸೇವಕ ಪ್ರಶಾಂತ್ ಗೌಡ, ನಿವೇಶನದಾರೆ ಹಿರಿಯ ನಾಗರಿಕ ರೆಡ್ಡಿ ರಾಮಾನುಜೇಶ್ವರಿ ಆರೋಪಿಸಿದರು


ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಿರಿಯ ನಾಗರಿಕರಾಗಿರುವ ಶ್ರೀ ರೆಡ್ಡಿ ರಾಮಾನುಜಶ್ವೇರಿ ಅವರಿಗೆ ನಿವೇಶನ ಕಬಳಿಸಲು ಆರ್.ಅಶೋಕ್ ಅವರ ಕಡೆಯಿಂದ ಅಕಾನೂನಾತ್ಮಕ ಹಾಗೂ ಜೀವಬೇದರಿಕೆ, ಕಿರುಕುಳ ನೀಡಲಾಗುತ್ತದೆ.ರಾಮಾನುಜೇಶ್ವರಿ ಎಂಬುವವರಿಗೆ ಸೇರಿದ ನಿವೇಶನದಲ್ಲಿ 25ಗುಂಟೆ ಜಾಗ ತಮ್ಮ ಕುಟುಂಬಕ್ಕೆ ಸೇರಿದ್ದು ನಮಗೆ ಸೇರಬೇಕಿದೆ ಎಂದು ನ್ಯಾಯಾಲಯದಲ್ಲಿ ಆರ್.ಅಶೋಕ್ ಮೊಕದ್ದಮೆ ಹೂಡುವ ಮೂಲಕ ಮೂಲ ನಿವೇಶನದಾರರಿಗೆ ಕಿರುಕುಳ ನೀಡುತ್ತಿದ್ದಾರೆ.ಈ ಕುರಿತಂತೆ ಸಂಬಂಧಿಸಿದ ಪೋಲಿಸ್ ಠಾಣೆಗೆ ದೂರು ನೀಡಿದ್ದರೂ ರಾಜಕೀಯ ಪ್ರಭಾವದಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು.


ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ತಾತ ಮುನಿಕೆಂಪಯ್ಯ ಎಂಬುವವರು ಕೊಡಿಗೆಹಳ್ಳಿಯಲ್ಲಿ 1955ರಲ್ಲಿ 1ಎಕರೆ 11ಗುಂಟೆ ಜಮೀನನ್ನು ಬೈಯ್ಯಣ್ಣ ಮತ್ತು ಅವರ ಮಕ್ಕಳಿಂದ ಖರೀದಿ ಮಾಡಿದ್ದು,ಬಳಿಕ ಅವರ ತಾತ ಮುನಿಕೆಂಪಯ್ಯ 1959ರಲ್ಲಿ 25.8ಗುಂಟೆ ಜಮೀನನ್ನು ಅಕ್ಕಯ್ಯಮ್ಮ ಎಂಬುವವರಿಗೆ ಮಾರಾಟ ಮಾಡಿದ್ದು,ಸೈಟ್ ನಂ  46/1ರಲ್ಲಿ ಉಳಿದ 25.8ಗುಂಟೆ ಜಮೀನನ್ನು ರೆಡ್ಡಿ ರಾಮಾನುಜೇಶ್ವರಿ ಅವರಿಗೆ ನೀಡಲಾಗಿದೆ,ಆದರೆ ವಂಶಾವಳಿ ಪತ್ರದಲ್ಲಿ ಆರ್.ಅಶೋಕ್ ಅವರು ಸುಳ್ಳು ಮಾಹಿತಿ ನೀಡಿ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"