ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು NPS ಯೋಜನೆಯ ರದ್ದತಿಗೆ ಒತ್ತಾಯಿಸಿ, ದಿನಾಂಕ:07.02.2025 ರಂದು 'OPS ಹಕ್ಕೊತ್ತಾಯ ಧರಣಿ

  ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು NPS ಯೋಜನೆಯ ರದ್ದತಿಗೆ ಒತ್ತಾಯಿಸಿ, ದಿನಾಂಕ:07.02.2025 ರಂದು 'OPS ಹಕ್ಕೊತ್ತಾಯ ಧರಣಿ ಫ್ರೀಡಂ ಪಾರ್ಕ್ 

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯಸರ್ಕಾರಿ NPS ನೌಕರರ ಸಂಘವು ದಿನಾಂಕ:13.10.2022 ದಿಂದ ಒಂದು ತಿಂಗಳು OPS ಸಂಕಲ್ಪ ಯಾತ್ರೆಯನ್ನು ಹಾಗೂ 14 ದಿನಗಳ ಕಾಲ OPS ಜಾರಿಗಾಗಿ ಪ್ರೀಡಂ ಪಾರ್ಕ್‌ಲ್ಲಿ ಅಹೋ ರಾತ್ರಿ ಧರಣಿ ನಡೆಸಲಾಗಿತ್ತು ಹಾಗೂ ಜನವರಿ ತಿಂಗಳಿಂದ ಮೂರು ತಿಂಗಳ ಕಾಲ Vote for OPS ಅಭಿಯಾನವನ್ನು ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು NPS ಯೋಜನೆಯನ್ನು ರದ್ದುಗೊಳಿಸುವ ಭರವಸೆಯನ್ನು ತನ್ನ ಪುಣಾಳಿಕೆಯಲ್ಲಿ ಸೇರಿಸಲಾಗಿತ್ತು


ಮುಂದುವರೆದು, ಮಾನ್ಯ ಮುಖ್ಯಮಂತ್ರಿಯವರು ಅಧಿಕಾರ ವಹಿಸಿಕೊಂಡ ತಕ್ಷಣ ನಮ್ಮ ಸಂಘದ ಪದಾಧಿಕಾರಿಗಳೊಂದಿಗೆ ದಿನಾಂಕ:13.06.2023 ರಂದು ಗ್ರಹ ಕಛೇರಿ ಕೃಷ್ಣಾದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಸಭೆ ನಡೆಸಿ ಭರವಸೆಯನ್ನು ನೀಡಲಾಗಿತ್ತು. ಮುಂದುವರೆದು ತಾವು ಸಹ ನಮ್ಮ ಸಂಘಟನೆಯೊಂದಿಗೆ ಸಭೆ ನಡೆಸಿ NPS ಯೋಜನೆಯನ್ನು ರದ್ದುಗೊಳಿಸುವ ಕುರಿತು ಕ್ರಮಕೈಗೊಳ್ಳುವುದಾಗಿ ತಿಳಿಸಿರುತ್ತಾರೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.


ಈ ಹಿನ್ನೆಲೆಯಲ್ಲಿ, ದಿನಾಂಕ:19.01.2025 ರಂದು ಬೆಂಗಳೂರಿನಲ್ಲಿ ನಡೆದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯು "ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ, NPS ಯೋಜನೆಯನ್ನು 2025-26ನೇ ಸಾಲಿನ ಆಯವ್ಯಯದಲ್ಲಿ ರದ್ದುಗೊಳಿಸುವಂತೆ, ದಿನಾಂಕ:07.02.2025 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ OPS ಹಕ್ಕೊತ್ತಾಯ' ಧರಣಿ ನಡೆಸಲು ಸರ್ವಾನುಮತದ ನಿರ್ಣಯ ಕೈಗೊಂಡಿರುತ್ತದೆ.


Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ