ನವದೆಹಲಿಯಲ್ಲಿ ಇದೇ17ರಿಂದ ಮೂರು ದಿನಗಳ ಕಾಲ 2ನೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಜಾಗತಿಕ ಆರೋಗ್ಯ ಶೃಂಗಸಭೆ.
ನವದೆಹಲಿಯಲ್ಲಿ ಇದೇ17ರಿಂದ ಮೂರು ದಿನಗಳ ಕಾಲ 2ನೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಜಾಗತಿಕ ಆರೋಗ್ಯ ಶೃಂಗಸಭೆ. ಬೆಂಗಳೂರು ಡಿಸೆಂಬರ್ 13; ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ಆಯೋಜಿಸಿರುವ ಜಾಗತಿಕ ಶೃಂಗಸಭೆ ಡಿಸೆಂಬರ್ 17-19ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ಧ ವೈದ್ಯ ಸಂಶೋಧನಾ ಘಟಕದ ಸಂಶೋಧನಾ ಅಧಿಕಾರಿ ವಿಜ್ಞಾನಿ ಉಸ್ತುವಾರಿ,ಡಾ.ಕಣ್ಣನ್ ಡಿಸೆಂಬರ್ 17 ರಿಂದ 19 ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ 2 ನೇ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಶೃಂಗಸಭೆಯನ್ನು ಕೇಂದ್ರ ಸಚಿವ ಜಾಧವ್ ಚಾಲನೆ ನೀಡಲಿದ್ದು,ಕಳೆದ 2023 ರಲ್ಲಿ ಗುಜರಾತ್‌ನಲ್ಲಿ ನಡೆದ ಮೊದಲ ಆವೃತ್ತಿಯ ಯಶಸ್ವಿ ನಂತರ, ಭಾರತವು ಎರಡನೇ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಆಯುಷ್ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ, "ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಃ” ಎಂಬ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ, ಮಾನವೀಯತೆಯ ಆರೋಗ್ಯ ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ಸಾಂಪ್ರದಾಯಿಕ ಔಷಧವನ್ನು ಮುಖ್ಯವಾಹಿನಿಗೆ ತರುವ ಸಾಮೂಹಿಕ ಜಾಗತಿಕ ಪ್ರಯತ್ನದಲ್ಲಿ ಈ ಶೃಂಗಸಭೆ ಮತ್ತೊಂದು...