Posts

Showing posts from February, 2026

ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಂದ 26 ಕೋಟಿ ಷೇರು ಬಂಡವಾಳ ಸಂಗ್ರಹ; ನೂತನ ಅಧ್ಯಕ್ಷ ಸದಾಶಿವ ರೆಡ್ಡಿ.

Image
 ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಂದ 26 ಕೋಟಿ ಷೇರು ಬಂಡವಾಳ ಸಂಗ್ರಹ; ನೂತನ ಅಧ್ಯಕ್ಷ ಸದಾಶಿವ ರೆಡ್ಡಿ.    ಬೆಂಗಳೂರು ಫೆಬ್ರವರಿ 4;  ಬೆಂಗಳೂರು ನಗರದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ಸುಮಾರು 11 ಸಾವಿರ ಸದಸ್ಯರನ್ನು ಹೊಂದಿದ್ದು,26 ಕೋಟಿ ಷೇರು ಬಂಡವಾಳ ಹೊಂದಿದೆ ಎಂದು ನೂತನ ಅಧ್ಯಕ್ಷ ಸದಾಶಿವ ರೆಡ್ಡಿ, ಉಪಾಧ್ಯಕ್ಷ ಸಿ ಚೆನ್ನಾರೆಡ್ಡಿ ತಿಳಿಸಿದರು.   ಪ್ರೆಸ್ ಕ್ಲಬ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು,ಜನವರಿ 2026ರ ಅಂತ್ಯಕ್ಕೆ ಬ್ಯಾಂಕಿನ ಠೇವಣಿ 478 ಕೋಟಿ ರೂಪಾಯಿಗಳಷ್ಟಿದ್ದು,336 ಕೋಟಿ ರೂಪಾಯಿ ಸಾಲ ವಿತರಿಸಲಾಗಿದೆ. ಬ್ಯಾಂಕಿನ ಒಟ್ಟು ಹೂಡಿಕೆಗಳು 204 ಕೋಟಿ ರೂಪಾಯಿಗಳಷ್ಟಿದ್ದು, ಇದರಲ್ಲಿ ಶೇ.68% ರಷ್ಟನ್ನು ಸರ್ಕಾರಿ ಹೂಡಿಕೆಗಳಲ್ಲಿ ತೊಡಗಿಸಲಾಗಿದೆ. ಬ್ಯಾಂಕಿನ ಒಟ್ಟಾರೆ 814 ಕೋಟಿ ರೂಪಾಯಿಗಳಷ್ಟು ವ್ಯವಹಾರ ಹೊಂದಿದೆ ಹಾಗೂ 2024-25 ನೇ ಸಾಲಿನಲ್ಲಿ 8.07 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿದೆ ಎಂದರು. ಮಾರ್ಚ್ 2025ರ ಅಂತ್ಯಕ್ಕೆ ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿಯ ಪ್ರಮಾಣ ಶೇ.1.25 ರಷ್ಟಿದ್ದು ಹಾಗೂ ಸತತ ಮೂರು ವರ್ಷಗಳಿಂದ ಶೂನ್ಯ ನಿವ್ವಳ ನಿಷ್ಕ್ರಿಯ ಆಸ್ತಿಗಳನ್ನು  ಹೊಂದಿದೆ. Phonepay, Google pay, POS ಇ- ಕಾಮರ್ಸ್‌ಗಳೊಂದಿಗೆ ಎಲ್ಲಾ ರೀತಿಯ ...

ಪರಿಶಿಷ್ಟ ಭೂ ಮಂಜೂರಿದಾರರಿಗೆ ಹಕ್ಕು ದಾಖಲೆಗಳನ್ನು ಒದಗಿಸಲು ಒತ್ತಾಯ.

Image
 ಪರಿಶಿಷ್ಟ ಭೂ ಮಂಜೂರಿದಾರರಿಗೆ ಹಕ್ಕು ದಾಖಲೆಗಳನ್ನು ಒದಗಿಸಲು ಒತ್ತಾಯ.   ಬೆಂಗಳೂರು ಫೆಬ್ರವರಿ 2:ರಾಜ್ಯ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಇತರೆ ಜನಾಂಗದವರಿಗಾಗಿ ಸರ್ಕಾರಿ ಗೋಮಾಳ ಹಾಗೂ ಇನ್ನಿತರೆ ಪ್ರವರ್ಗಗಳ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿದ್ದ ರೈತರಿಗೆ 1960ರ ಪೂರ್ವದಲ್ಲಿ ಹಾಗೂ ನಂತರದಲ್ಲಿ ಜಮೀನುಗಳನ್ನು ಮಂಜೂರು ಮಾಡಿದ್ದು ಮಂಜೂರುದಾರರು ತಮ್ಮ ಹಕ್ಕು ದಾಖಲೆಗಳನ್ನು ಪಡೆಯಲು ಹಲವಾರು ದಶಕಗಳಿಂದಲೂ,ದಾಖಲೆಗಳನ್ನು ಪಡೆಯದೆ ವಿಫಲರಾಗಿರುವುದರಿಂದ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಭೂ ಮಂಜೂರಿದಾರರಿಗೆ ಹಕ್ಕು ದಾಖಲೆಗಳನ್ನು ಒದಗಿಸಬೇಕೆಂದು  ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ರೈತರ ಹಿತಾರಕ್ಷಣಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ಡಾ.ಬಿ. ಆರ್. ಅಂಬೇಡ್ಕ‌ರ್ ಭೀಮರಥ ಸೇನೆ, ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ,ಭಾರತೀಯ ಬೌದ್ಧ ಮಹಾಸಭಾ ಒತ್ತಾಯಿಸಿದೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತಯ್ಯ,ನಾಗರತ್ನಮ್ಮ,ಮಂಜುಳಾ, ದರಖಾಸ್ತು ಪೋಡಿಯಾಗಿ ದಶಕಗಳಿಗೂ ಹೆಚ್ಚಿನ ಅವಧಿಯಿಂದ ಪಹಣಿ ದಾಖಲೆ ಪಡೆಯಲು ಅರ್ಜಿ ಸಲ್ಲಿಸಿದ್ದರೂ ಸಹ ಭೂಮಿ ತಂತ್ರಾಂಶದಲ್ಲಿ ಈ ಹಿಂದೆ ಪೋಡಿಯಾಗಿರುವ ಪ್ರಕರಣಗಳಿಗೆ ಪಹಣಿ ದಾಖಲಿಸಲು ತಹಸೀಲ್ದಾರ್ ಹಾಗೂ ಎ.ಡಿ.ಎಲ್.ಆರ್. ಕಛೇರಿಗಳಲ್ಲಿ ಹಲವಾರು ವರ್ಷಗಳಿಂದ ಕಡತಗಳು ಇತ್ಯರ್ಥಕ್ಕೆ ಬಾಕಿ ಉಳಿದು...

ಕನ್ನಡ ರಕ್ಷಣಾ ವೇದಿಕೆಯ ಎಲ್.ಆರ್.ಶಿವರಾಮೇ ಗೌಡ ಅವರ ಹುಟ್ಟು ಹಬ್ಬ ಆಚರಣೆ; ಆರ್.ಆರ್ ನಗರ ಎಸ್.ಜಯನ್ ಅವರಿಂದ ಶುಭ ಹಾರೈಕೆ.

Image
  ಕನ್ನಡ ರಕ್ಷಣಾ ವೇದಿಕೆಯ  ಎಲ್.ಆರ್.ಶಿವರಾಮೇ ಗೌಡ  ಅವರ ಹುಟ್ಟು ಹಬ್ಬ ಆಚರಣೆ; ಆರ್.ಆರ್ ನಗರ ಎಸ್.ಜಯನ್ ಅವರಿಂದ ಶುಭ ಹಾರೈಕೆ.  ಬೆಂಗಳೂರು ಫೆಬ್ರವರಿ 2; ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲ್.ಆರ್.ಶಿವರಾಮೇ ಗೌಡ ಹಾಗೂ ಮಲೇಶ್ವರ ಶಾಸಕ ಆಶ್ವಥ್ ನಾರಾಯಣ ಅವರ ಹುಟ್ಟು ಹಬ್ಬ ಕಾರ್ಯಕ್ರಮ ಮಲೇಶ್ವರದ ರೋಟರಿ ಕ್ಲಬ್ ಸಭಾಂಣದಲ್ಲಿ ಅದ್ದೂರಿಯಾಗಿ ಜರುಗಿತು. ಪರಸ್ಪರ ಇಬ್ಬರು ನಾಯಕರು ಕೇಕ್  ಕತ್ತರಿಸಿ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಶಾಸಕ ಆಶ್ವಥ್ ನಾರಾಯಣ ಮಾತನಾಡಿ,ಮಲೇಶ್ವರಂ ವಿಧಾನ ಸಭಾ ಕ್ಷೇತ್ರ ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ ಡಾ.ರಾಜ್ ಕುಮಾರ್ ಅವರ ಜತೆಯಲ್ಲಿ ಸಾ.ರಾ.ಗೋವಿಂದ್ ಹಾಗೂ ಶಿವರಾಮೇ ಗೌಡರು ಗೋಕಾಕ್ ಚಳುವಳಿಗೆ ಸಾಥ್ ನೀಡಿದರು.ಆಗ ನಾನು ಚಿಕ್ಕವನಿದ್ದೆ ಎಂದು ಹೇಳಿದರು. ಶಿವರಾಮೇ ಗೌಡ ಮಾತನಾಡಿ,ಕನ್ನಡದ ನೆಲ,ಜಲ, ವಿಚಾರದಲಿ ಕಂಟಕ ಎದುರಾದಗ  ಸಂಪೂರ್ಣವಾಗಿ ಪ್ರಾಣ ತ್ಯಾಗ ಮಾಡಿ ನಾವು ಹೋರಾಟ ನಡೆಸಲು ಸಿದ್ಧರಿದ್ದೇವೆ.ಹೊರ ರಾಜ್ಯಗಳಲ್ಲಿ ಕನ್ನಡಿಗ ಯಾತ್ರಿಕರಿಗೆ ತೊಂದರೆ ನೀಡಿದರೆ ಯಾವುದೇ ಮುಲ್ಲಾಜಿಲ್ಲದೇ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.   ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಾ.ರಾ.ಗೋವಿಂದ್,ಮಲೇಶ್ವರಂ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ  ಜಯಕುಮಾರ್, ರಾಜರಾಜೇಶ್ವರಿ ನಗರದ ಎಸ್.ಜಯನ್‌ ಸೇರಿದಂತೆ ವಿ...