ದಲಿತ ಮುಖ್ಯಮಂತ್ರಿ ಕೋಟಾದಲ್ಲಿ ಸತೀಶ್ ಜಾರಕಿಹೊಳಿ ನೇಮಕಕ್ಕೆ ಒತ್ತಾಯ.

 ದಲಿತ ಮುಖ್ಯಮಂತ್ರಿ ಕೋಟಾದಲ್ಲಿ ಸತೀಶ್ ಜಾರಕಿಹೊಳಿ ನೇಮಕಕ್ಕೆ ಒತ್ತಾಯ.

ಬೆಂಗಳೂರು ಜನವರಿ 30;  ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ದಲಿತರಿಗೆ ಅದರಲ್ಲಿ ಪರಿಶಿಷ್ಟ ಪಂಗಡದ ಸತೀಶ್ ಜಾರಕಿಹೊಳಿ ರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕರ್ನಾಟಕ ನವ ಸಮಾಜ ನಿರ್ಮಾಣ ವೇದಿಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.


ಪ್ರತಿಭಟನೆಯಲ್ಲಿ ನೂರಾರು ದಲಿತ ನಾಯಕ ಸಮುದಾಯದವರು ಭಾಗವಹಿಸಿದ್ದರು.


ರಾಜ್ಯ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಇಲಾಖೆಯ ಎಸ್.ಸಿ.ಎಸ್.ಟಿ ನಿಗಮದ  ನಿರ್ದೇಶಕ ಯೋಗೇಶ್ ಮನವಿ ಸ್ವೀಕರಿಸಿದರು.

    

ವೇದಿಕೆ ರಾಜ್ಯಾಧ್ಯಕ್ಷ ಸಾಹೇಬ ರೆಡ್ಡಿ, ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಸಂಪುಟ ದರ್ಜೆ ಸಚಿವ ಸ್ಥಾನವನ್ನು ಮದುಗಿರಿ ಕ್ಷೇತ್ರದ ಶಾಸಕರಾದ ಕೆ .ಎನ್. ರಾಜಣ್ಣ, ರಾಯಚೂರು ಗ್ರಾಮೀಣ ಶಾಸಕರಾದ  ಬಸವನಗೌಡ ದದ್ದಲ್‌, ಚಳ್ಳಿಕೆರೆ ಶಾಸಕ ಟಿ. ರಘುಮೂರ್ತಿ ರವರನ್ನು ಆಯ್ಕೆ ಮಾಡಬೇಕು,ಎಸ್.ಟಿ. ಆಯೋಗ ರಚನೆ ಮಾಡಬೇಕು, ಸುಮ್ಮನಹಳ್ಳಿಯಲ್ಲಿ ಮಂಜೂರು ಮಾಡಿರುವ 2 ಎಕರೆ ಜಾಗದಲ್ಲಿ ವಾಲ್ಮೀಕಿ ಸೌಧ ನಿರ್ಮಾಣಕ್ಕೆ 50 ಕೋಟಿ ಅನುದಾನ ಮೀಸಲಿಡ ಬೇಕು ಎಂದು ಹೇಳಿದರು


ಎಸ್.ಸಿ.ಎಸ್.ಟಿ. ವಸತಿರಹಿತರಿಗೆ ಖಾಲಿ ನಿವೇಶನ ಅಥವಾ ಮನೆಯನ್ನು ನೀಡುವುದು, ಕರ್ನಾಟಕ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ,ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಕಾಯ್ದೆ ಅನುಷ್ಠಾನಗೊಳ್ಳಬೇಕು, ಮತ್ತು ಕೇಂದ್ರ ಸರ್ಕಾರವು ಸಂವಿಧಾನ ತಿದ್ದುಪಡಿ ಮಾಡಿ ಸದರಿ ಕಾಯ್ದೆ 9ನೇ ಶೆಡ್ಯೂಲ್ ನಲ್ಲಿ ಸೇರಿಸಲು ರಾಜ್ಯ ಸರ್ಕಾರವು ಶಿಫಾರಸು ಮಾಡಬೇಕು ಎಸ್ಸಿ ಎಸ್ ಪಿ / ಟಿ ಎಸ್ ಪಿ ಅನುದಾನ ಉದ್ದೇಶಿತ ಕಾರ್ಯಗಳಿಗೆ ಮಾತ್ರ ಉಪಯೋಗಿಸುವುದು. ಈ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು.

ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯನ್ನು ಬಲಪಡಿಸಲು 2018ರಲ್ಲಿ ಕೇಂದ್ರ ಸರ್ಕಾರ ಸದರಿ ಕಾಯ್ದೆಗೆ ಅಮೆಂಡೆಂಟ್ ಆಗಿರುವ 18 (ಎ ) ಕಾಲಂನಂತೆ ಎಲ್ಲಾ ದೌರ್ಜನ್ಯ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು. ಮತ್ತು ಕೌಂಟರ್ ಕೇಸುಗಳನ್ನು ಪೊಲೀಸ್ ಇಲಾಖೆ ತಿರಸ್ಕರಿಸಬೇಕು, ಸುಳ್ಳು ,ನಕಲಿ ಜಾತಿ ಪ್ರಮಾಣ ಪತ್ರಗಳಿಗೆ ತಡೆ ನೀಡುವ ಸಂಬಂಧ ಸೆಕ್ಷನ್ – 41 ಅನ್ನು ಈ ಕೂಡಲೇ ಜಾರಿ ಮಾಡಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಗಳನ್ನು ತಡೆ ಹಿಡಿಯಬೇಕು ಒತ್ತಾಯಿಸಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"