ಸವಿತಾ ಸಮುದಾಯವನ್ನು ಹೀನಾಯವಾಗಿ ಮಾತಾನಾಡಿ ಜಾತಿ ನಿಂದನೆ ಪದವನ್ನು ಬಳಸಿರುವುದರಿಂದಸಿ.ಟಿ ರವಿಯನ್ನು ಸಮಾಜ ನೀಡಿರುವ FIR ನಂತೆ ಬಂದಿಸಬೇಕು ಎಂದು ಪ್ರತಿಭಟನೆ
ಸವಿತಾ ಸಮುದಾಯವನ್ನು ಹೀನಾಯವಾಗಿ ಮಾತಾನಾಡಿ ಜಾತಿ ನಿಂದನೆ ಪದವನ್ನು ಬಳಸಿರುವುದರಿಂದಸಿ.ಟಿ ರವಿಯನ್ನು ಸಮಾಜ ನೀಡಿರುವ FIR ನಂತೆ ಬಂದಿಸಬೇಕು ಎಂದು ಫ್ರೀಡಂ ಪಾರ್ಕಿನಲ್ಲಿ ದಿನಾಂಕ 2 ಪ್ರತಿಭಟನೆ
ಬಿ.ಜೆ.ಪಿ.ರಾಷ್ಟ್ರೀಯ ಮುಖಂಡ ಮತ್ತು ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿಯವರು ಸವಿತಾ ಸಮುದಾಯವನ್ನು ಹೀನಾಯವಾಗಿ ಮಾತಾನಾಡಿ ಜಾತಿ ನಿಂದನೆ ಪದವನ್ನು ಬಳಸಿರುವುದರಿಂದಸಿ.ಟಿ ರವಿಯನ್ನು ಸಮಾಜ ನೀಡಿರುವ FIR ನಂತೆ ಬಂದಿಸಬೇಕು ಎಂದು ಪ್ರತಿಭಟನೆ ಮತ್ತು ಹಿಂದುಳಿದ ವರ್ಗಗಳ ಆಯೋಗ ಜಾತಿ ನಿಂದನೆಗೆ ಕಾನೂನು ತರಲು ಹಿಂದುಳಿದ ವರ್ಗಗದ ಜಾತಿ ನಿಂದನೆ ನಿಯಂತ್ರಣ ವರದಿ ಯ ಮೇಲೆ ಕ್ರಮ ಕೈಗೊಂಡು ಸವಿತಾ ಸಮುದಾಯದ ಜಾತಿ ನಿಂದನೆ ತಡೆ ಸಹಿತ ಸವಿತ ಸಮಾಜದ ದೌರ್ಜನ್ಯ ತಡೆ ಕಾಯ್ದೆ ತರಲು ಮೆರವಣಿಗೆ ಸಹಿತ ಹಕ್ಕೊತ್ತಾಯದ ಧರಣಿಯನ್ನು ಪ್ರಿಡಂ ಪಾರ್ಕಿನಲ್ಲಿ ದಿನಾಂಕ 02-12-2025 ರಂದು ಮಾಡುವ ಬಗ್ಗೆ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ
ನಾಗರೀಕ ಸಮಾಜ ಹುಟ್ಟಿದ ದಿನದಿಂದ ಕ್ಷೌರಿಕ ವೃತ್ತಿಯನ್ನು ಮಾಡಿ ಕೊಂಡು ನಾಗರಿಕರಿಗೆ ಧರ್ಮಾಧಾರಿತವಾಗಿ ಅಂದರೆ ನಾಗರೀಕ ಹುಟ್ಟಿದ ದಿನದಿಂದ ಸಾಯುವ ತನಕ ಮತ್ತು ಸತ್ತ ಮೇಲೆಯೂ ಆತನ ಮಕ್ಕಳಿಗೆ ಕರ್ಮ ಕಳೆಯುವವರೆವಿಗೂ ನಾವು ಧಾರ್ಮಿಕವಾಗಿ ವೃತ್ತಿಯನ್ನು ಮಾಡಿಕೊಂಡು ಬಂದಿರುತ್ತೇವೆ. ರಾಜ್ಯದ ಬಹುತೇಕ ಎಲ್ಲಾ ಹಳ್ಳಿಗಳಲ್ಲಿ ದಲಿತರು ಮತ್ತು ಸವರ್ಣಿಯರ ನಡುವೆ ಅಡಕ ಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದವೆ. ದಲಿತರಿಗೆ ಕ್ಷೌರ ವೃತ್ತಿಯನ್ನು ಮಾಡಿದರೆ ಸವರ್ಣಿಯರು ನಮ್ಮ ಅಂಗಡಿಗೆ ಬೆಂಕಿ ಇಟ್ಟು ನಮ್ಮನ್ನು ಊರಿನಿಂದ ದಬ್ಬತ್ತಾರೆ. ದಲಿತರಿಗೆ ಕ್ಷೌರ ಮಾಡಲಿಲ್ಲ ಎಂದರೆ ನಮ್ಮ ಮೇಲೆ ಕೇಸ್ ದಾಖಲು ಮಾಡುತ್ತಾರೆ. ಈಗಾಗಲೇ ಸವರ್ಣಿಯರು ನಮ್ಮ ಜಮೀನನ್ನು ದೌರ್ಜನ್ಯ ಮಾಡಿ ಹಲವಾರು ಭಾಗಗಳಲ್ಲಿ ಜಮೀನು ಕಸಿದುಕೊಂಡಿರುತ್ತಾರೆ. ಅವರ ವಿರುದ್ಧ ಮಾತಾನಾಡುವುದಕ್ಕೆ ಅಗುವುದಿಲ್ಲ. ನಮ್ಮ ಅಪ್ಪಂದಿರು ನಮಗೆ ಹೆಸರಿಟ್ಟರು ನಾಗರೀಕರು ನಮ್ಮನ್ನು ಹಜಾಮರು ಎಂದು ನಿಂದಿಸುವುದು ರಾಜ್ಯದ ಬಹುತೇಕ ಹಲವು ಭಾಗಗಳಲ್ಲಿ ರೂಡಿಯಾಗಿದೆ. ನಮಗೆ ದೌರ್ಜನ್ಯ ಕಾಯ್ದೆ ದೂರೆತರೆ ನಾವು ದಲಿತರಿಗೆ ಕ್ಷೌರ ಮಾಡುವುದಕ್ಕೆ ಭಯವು ಇರುವುದಿಲ್ಲ. ಊರಿನಲ್ಲಿ ನಮ್ಮಗಳ ಮನೆಯು
ಇರುವುದರಿಂದ ನಾವುಗಳು ಅವರನ್ನು ಪ್ರಶ್ನೆ ಮಾಡುವುದು ಕಷ್ಟ ಹಾಗಾಗಿ ಸವಿತಾ ಸಮೂದಯಕ್ಕೆ ಜಾತಿ ನಿಂದನೆ ತಡೆ ಸಹಿತ ದೌರ್ಜನ್ಯ ಕಾಯ್ದೆ ಅವಶ್ಯಕ.
ಸವಿತಾ ಸಮುದಾಯವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಸಮಾಜ. ಇಂತಹ ಜಾತಿಯು ಸಾಮಾಜಿಕವಾಗಿ ನಾಗರಿಕರಿಂದ, ರಾಜಕೀಯ ವ್ಯಕ್ತಿಗಳಿಂದ, ಜೋತಿಷ್ಯರಿಂದ, ನಟ ನಟಿಯರಿಂದ ಜಾತಿ ನಿಂದನೆ ಪದವಾದ ಹಜಾಮ ಜಾತಿ ಪದವನ್ನು ಇನ್ನೊಬ್ಬರಿಗೆ ಬೈಗುಳವಾಗಿ ಬಳಸಿ ಸಮುದಾಯವನ್ನು ಅವಮಾನ ಮಾಡುತ್ತಿರುವ ಕಾರಣ ನಮ್ಮಗಳ ಮನವಿ ಮೇರೆಗೆ ಸರ್ಕಾರ ಈ ಪದವನ್ನು ಜಾತಿ ಕಾಲಂ ನಿಂದ ತೆಗೆದಿರುತ್ತಾರೆ. ನಂತರ ನಮ್ಮಗಳ ಮನವಿ ಮೇರೆಗೆ ಸರಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದು ಸವಿತಾ ಸಮೂದಯದ ಜಾತಿ ನಿಂದನೆಯ ತಡೆ ಕಾಯ್ಕೆ ತರಲು ವರದಿಯನ್ನು ನೀಡಲು ನಿರ್ದೇಶನ ನೀಡಿರುತ್ತಾರೆ. ಅದರಂತೆ 2018 ರಲ್ಲಿ ಹಿಂದುಳಿದ ವರ್ಗಗಳ ವಿಚಾರಣೆ ಮಾಡಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿರುತ್ತಾರೆ.
ಸಿ.ಟಿ.ರವಿಯವರು ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದಾಗ ಅಲ್ಲಿನ ಡೀನ್ ಗೆ ದೂರವಾಣಿ ಮಾಡಿ ಸಂಭಾಷಣೆಯಲ್ಲಿರ ಬೇಕಾದರೆ ನಾನು ಕಾಯುವುದಕ್ಕೆ ಹಜಾಮನಾ ಎಂಬ ಪದವನ್ನು ಬಳಸಿರುತ್ತಾರೆ. ಈ ಅಮಾನುಷ್ಯ ಕೃತ್ಯದ ವಿರುದ್ಧ ಆನೇಕಲ್ ಪೋಲಿಸ್ ಠಾಣೆಯಲ್ಲಿ FIR NO. 0001/2025 ಮತ್ತು ಮಾಡಿವಾಳ ಪೋಲಿಸ್ ಠಾಣೆ FIR NO - ZERO -0001 ನಲ್ಲಿ ದೂರು ದಾಖಲಾಗಿದೆ.
ಕರ್ನಾಟಕ ರಾಜ್ಯ ಸವಿತಾ ಸಮಾಜದ ವತಿಯಿಂದ ಸಿ.ಟಿ.ರವಿ ವಿರುದ್ಧಪ್ರತಿಭಟನೆ ಮತ್ತು ಅನೇಕಲ್ ಮತ್ತು ಮಡಿವಾಳ ಪೋಲಿಸ್ ಠಾಣೆ ಯಲ್ಲಿ FIR ನಂತೆ ಕೂಡಲೇ ಬಂದಿಸಬೇಕು ಎಂದು ದಿನಾಂಕ 02-12-2025ರ ಮಂಗಳವಾರ ರಂದು ಬೆಳ್ಳಗ್ಗೆ 10-00 ಗಂಟೆಗೆ KRS ರೈಲ್ವೆ ನಿಲ್ದಾಣದಿಂದ ಮೆರವಣಿಗೆಯಲ್ಲಿ ಸಾಗಿ ಪ್ರೀಡಂ ಪಾರ್ಕಿನಲ್ಲಿ ಹಿಂದುಳಿದ ವರ್ಗಗಳ ಆಯೋಗ ಜಾತಿ ನಿಂದನೆಗೆ ಕಾನೂನು ತರಲು ಹಿಂದುಳಿದ ವರ್ಗಗಳ ಜಾತಿ ನಿಂದನೆ ನಿಯಂತ್ರಣ ವರದಿ ಯ ಮೇಲೆ ಕ್ರಮ ಕೈಗೊಂಡು ಜಾತಿ ನಿಂದನ ಕಾಯ್ದೆ ಸಹಿತ ಸವಿತ ಸಮಾಜದ ದೌರ್ಜನ್ಯ ತಡೆ ಕಾಯ್ದೆ ನೀಡಬೇಕೆಂದು ಹಕ್ಕೊತ್ತಾಯದ ಧರಣಿಯನ್ನು ಹಮ್ಮಿಕೊಂಡಿದ್ದೇವೆ.
ಈ ಪತ್ರಿಕಾಗೋಷ್ಠಿ ಮುಖಂತರ ಎಲ್ಲಾ ಜಿಲ್ಲೆಯ ತಾಲೋಕಿನ : ಹೋಬಳಿಯ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯ ವಿದಾನಸಬಾ ಕ್ಷೇತ್ರದ ಶಾಸಕರಿಗೆ ಜಾತಿ ನಿಂದನ ಕಾಯ್ದೆ ಸಹಿತ ಸವಿತಾ ಸಮಾಜದ ದೌರ್ಜನ್ಯ ಕಾಯ್ದೆ ತರಲು ಮುಖ್ಯಮಂತ್ರಿ ಗಳಿಗೆ ಪತ್ರ ಬರೆಯಲು ಮನವಿ ಮಾಡಿ ಶಾಸಕರಿಂದ ಪತ್ರವನ್ನು ಕರ್ನಾಟಕ ರಾಜ್ಯ ಸವಿತಾ ಸಮಾಜಕ್ಕೆ ನೀಡಬೇಕು. ರಾಜ್ಯದ ಎಲ್ಲಾ ಶಾಸಕರಿಂದ ಬಂದ ಪತ್ರವನ್ನು ದಿನಾಂಕ 02-12-2025 ರ ಮಂಗಳವಾರ ಹಕ್ಕೂತ್ರಯದ ಧರಣಿ ಮಾಡಿದ ನಂತರ ನೇರವಾಗಿ ಮುಖ್ಯಮಂತ್ರಿ ಗಳಿಗೆ ಬಹುಮತವಿರುವ ಶಾಸಕರ ಪತ್ರವನ್ನು ನೀಡಲಾಗುವುದು ಹಾಗಾಗಿ ದಿನಾಂಕ 01-12-2025
ರ ಒಳಗೆ ಕರ್ನಾಟಕ ರಾಜ್ಯ ಸವಿತಾ ಸಮಾಜಕ್ಕೆ ತಲುಪಿಸಬೇಕು ಎಂದು ಮನವಿ ಮಾಡುತ್ತವೆ.

Comments
Post a Comment