ವಿ.ಆರ್. ಹನುಮಂತಯ್ಯ ರವರ ಕುರುಬರ ಚರಿತ್ರೆ ಪುಸ್ತಕ ಬಿಡುಗಡೆ.ಭಾರತದಲ್ಲಿ ಕುರುಬರು ಹೆಚ್ಚು ಪ್ರಾಬಲ್ಯವಿರುವ ಸಮುದಾಯವಾಗಿದೆ; ಎಚ್.ಎಂ.ರೇವಣ್ಣ.
|ವಿ.ಆರ್. ಹನುಮಂತಯ್ಯ ರವರ ಕುರುಬರ ಚರಿತ್ರೆ ಪುಸ್ತಕ ಬಿಡುಗಡೆ.ಭಾರತದಲ್ಲಿ ಕುರುಬರು ಹೆಚ್ಚು ಪ್ರಾಬಲ್ಯವಿರುವ ಸಮುದಾಯವಾಗಿದೆ; ಎಚ್.ಎಂ.ರೇವಣ್ಣ.
ಬೆಂಗಳೂರು ನವೆಂಬರ್ 9; ಹಾಲುಮತ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ಮತ್ತು ಶ್ರೀ ಕನಕದಾಸ ಆಧ್ಯಾತ್ಮ ಪ್ರತಿಷ್ಠಾನ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ವಿ.ಆರ್. ಹನುಮಂತಯ್ಯ ರವರ “ಕುರುಬರ ಚರಿತ್ರೆ” ಗ್ರಂಥ ಬಿಡುಗಡೆ ಸಮಾರಂಭ ಇಂದು ನಡೆಯಿತು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಮಾಜಿ ಸಚಿವ ಎಚ್.ಎಂ.ರೇವಣ್ಣ, ತಿಂಥಣಿ ಕನಕ ಗುರುಪೀಠದ ಸಿದ್ಧರಾಮ ಸ್ವಾಮೀಜಿ,ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್ ಕಾರ್ಯಕ್ರಮ ಉದ್ಘಾಟಿಸಿ ಪುಸ್ತಕ ಬಿಡುಗಡೆಗೊಳಿಸಿದರು.
ಮಾಜಿ ಸಚಿವ ರೇವಣ್ಣ ಮಾತನಾಡಿ, ದೇವರಾಜು ಅರಸು ಮತ್ತು ಸಿದ್ಧರಾಮಯ್ಯನಂತಹ ನಾಯಕರು ರಾಜ್ಯ ರಾಜಕಾರಣದಲ್ಲಿ ಉತ್ತಮ ಹಿಂದುಳಿದ ನಾಯಕರಾಗಿ ಹೊರಹೊಮ್ಮಿದ್ದರೆ ಅದಕ್ಕೆ ಕುರುಬ ಸಮಾಜದ ಕೊಳ್ಳೂರು ಮಲ್ಲಪ್ಪನವರು,ಭಾರತದಲ್ಲಿ ದಲಿತ ಸಮುದಾಯ ಹೊರತು ಪಡಿಸಿದರೆ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಮುದಾಯವೆಂದರೆ ಕುರುಬ ಸಮುದಾಯದವರು,ಕುರುಬ ಸಮುದಾಯದವರು ಕುರುಬರು ಎಂದು ಹೇಳುವುದಕ್ಕೆ ಹಿಂಜರಿಯುವುದು ಸರಿಯಲ್ಲ, ಎಂದು ಹೇಳಿದರು.
ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ,ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್ ಮಾತನಾಡಿ,ಕುರುಬ ಸಂಸ್ಕೃತಿಯನ್ನು ಸಾರುವ ಇಂತಹ ಸಂಶೋಧನಾ ಗ್ರಂಥಗಳು ಹೊರಬರಲಿ,ಇದಕ್ಕೆ ತಮ್ಮ ಸಹಕಾರ ನೀಡುವುದಾಗಿ ಹೇಳಿದರು.
ತಿಂಥಣಿ ಮಠದ ಸಿದ್ಧರಾಮ ಸ್ವಾಮೀಜಿ ಮಾತನಾಡಿ,ಸಾಹಿತ್ಯದ ಹಿನ್ನಲೆಯಲ್ಲಿ ಸಮುದಾಯವನ್ನು ಕಟ್ಟುವ ಅಗತ್ಯವಿದೆ,ನಮ್ಮ ಮಠದ ವತಿಯಿಂದ ಇದುವರೆಗೂ ಹಾಲಮತ ಕುರಿತು 21ಪುಸ್ತಕಗಳನ್ನು ಹೊರತರಲಾಗಿದೆ,ಸಾಹಿತ್ಯ ಮತ್ತು ಸಂಸ್ಕೃತಿಯ ನಲೆಗಟ್ಟಿನಲ್ಲಿ ಸಮುದಾಯ ಒಂದಾಗಬೇಕು, ಹಾಲುಮತ ಧರ್ಮ ಸಿದ್ಧರ ಧರ್ಮ ವಾಗಿದೆ, ಇಂತಹ ಪುಸ್ತಕಗಳು ಹೊರಬರುವುದಕ್ಕೆ ಎಲ್ಲರ ಸಹಕಾರವಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪರಶಿವಮೂರ್ತಿ ಕುಲಪತಿಗಳು, ಹಂಪಿ ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ವಹಿಸಿದ್ದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ|| ಚನ್ನಪ್ಪ ಕಟ್ಟಿ ಆಶಯ ಭಾಷಣ ಮಾಡಿದರು
ವಿ.ಆರ್. ಹನುಮಂತಯ್ಯ ರವರ ಸಾಹಿತ್ಯ ವಿಚಾರ ಸಂಕಿರಣದಲ್ಲಿ ಡಾ|| ಎಫ್.ಟಿ.ಹಳ್ಳಿಕೇರಿ, ಡಾ|| ಗಂಗಾಧರ್ ಕೊಡ್ಲಿಯವರ, ಡಾ||. ಲಿಂಗದಹಳ್ಳಿ ಹಾಲಪ್ಪ, ಡಾ|| ಎನ್.ಬಿ. ವಿರೂಪಾಕ್ಷಿ ಮತ್ತು ಗೋಣಿಬಸಪ್ಪ ಪಿ ವಿಚಾರ ಮಂಡನೆ ಮಾಡಿದರು.

Comments
Post a Comment