ಜೋಳ ಮಾರಾಟ ಹಣ ಬಾಕಿ ಪಾವತಿಗೆ ಸಚಿವ ಜಮೀರ್ ಅಹಮದ್ ಗೆ ಗಡುವು; ಸಚಿವರ ಮನೆ ಮುಂದೆ ಪ್ರತಿಭಟನೆಗೆ ರೈತ ಡಿ.ಎನ್ .ರಾಮಕೃಷ್ಣ ಒತ್ತಾಯ.
ಜೋಳ ಮಾರಾಟ ಹಣ ಬಾಕಿ ಪಾವತಿಗೆ ಸಚಿವ ಜಮೀರ್ ಅಹಮದ್ ಗೆ ಗಡುವು; ಸಚಿವರ ಮನೆ ಮುಂದೆ ಪ್ರತಿಭಟನೆಗೆ ರೈತ ಡಿ.ಎನ್ .ರಾಮಕೃಷ್ಣ ಒತ್ತಾಯ
ಬೆಂಗಳೂರು ನವೆಂಬರ್ 9; ಸಚಿವ ಜಮೀರ್ ಅಹಮ್ಮದ್ ಅವರು ಹೈದರಾಬಾದ್ ಮೂಲದ ಸೈಯದ್ ಅಕ್ಬರ್ ಪಾಷಾ ಅವರಿಂದ ಒಂದು ವಾರದೊಳಗೆ ನನಗೆ ಬರಬೇಕಾದ ಒಂದು ಕೋಟಿ 89ಲಕ್ಷ ರೂಪಾಯಿ ಹಣ ಕೊಡಿಸದಿದ್ದರೆ ಅವರ ಮನೆಯ ಮುಂದೆ ಜೋಳದ ರೈತರ ಜತೆಗೂಡಿ ಪ್ರತಿಭಟನೆ ನಡೆಸುವುದಾಗಿ ಚಿಕ್ಕಬಳ್ಳಾಪುರದ ಜೋಳದ ವ್ಯಾಪಾರಿ ರಾಮಕೃಷ್ಣ ಎಚ್ಚರಿಕೆ ನೀಡಿದರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಮೀರ್ ಅಹಮದ್ ಸಚಿವರಾಗಿ ಮೋಸ ಮಾಡುವವರಿಗೆ ಸಹಾಯ ಮಾಡುವುದು ಸರಿಯಲ್ಲ,ಚಿಕ್ಕಬಳ್ಳಾಪುರದಲ್ಲಿ ಸಚಿವರನ್ನು ಬೇಟಿ ಮಾಡಿದ ಸಂದರ್ಭದಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಆದರೆ ಈಗ ಏಕಾಏಕಿ ಅವರ ಆಪ್ತ ಸಹಾಯಕರ ಮೂಲಕ ಅಕ್ರಮ್ ಪಾಷಾ ಅವರ ಸುದ್ದಿಗೋಷ್ಢಿ ನಡೆಸಿ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ,ಕ್ಯಾಬಿನೆಟ್ ಸಚಿವರಾಗಿ ನಮ್ಮಂಥವರಿಗೆ ಸಹಾಯ ಮಾಡುವುದನ್ನು ಬಿಟ್ಟು ಕಳ್ಳರಿಗೆ ಸಹಾಯ ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಕಳೆದ ಮೂವತ್ತು ವರ್ಷಗಳಿಂದ ದುಡಿದಿದ್ದೇನೆ,ಸೈಯದ್ ಅಕ್ರಮ್ ಪಾಷಾ ಕೊಟ್ಟಿರುವ ಚೆಕ್ ಗಳು ಬೌನ್ಸ್ ಆಗಿದ್ದು ಯಾವುದೇ ಬಾಕಿ ಹಣವನ್ನು ಕೊಟ್ಟಿಲ್ಲ,ರೈತರಿಗೆ ಸೇರಬೇಕಾದ ಜೋಳದ ಬಾಕಿ ಹಣ ಕೇಳಿದರೆ ಅವರ ಪತ್ನಿಯರ ಮೂಲಕ ನನ್ನ ವಿರುದ್ಧ ದೂರು ನೀಡಲಾಗಿದೆ,ದಿನನಿತ್ಯ ರೈತರು ನಮ್ಮ ಮನೆಯ ಮುಂದೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದಾರೆ,ಇದುವರೆಗೂ ಕಾನೂನು ಮೊರೆ ಹೋಗಿದ್ದೇನೆ,ಕಳೆದ 25ವರ್ಷಗಳಿಂದ ಸಂಪಾಧಿಸಿದ ಗೌರವ,ಮಾರ್ಯಾದೆ ಎಲ್ಲವೂ
ಹೊರಟು ಹೋಗಿದೆ ಎಂದು ಹೇಳಿದರು.
ನನ್ನ ಕುಟುಂಬ ಹಾಗೂ ಹಣ ಕೊಡಬೇಕಾದ ಹತ್ತಾರು ಕುಟುಂಬಗಳ ಮಾನ ಮಾರ್ಯಾದೆ ಮತ್ತು ಜೀವನ ಸಚಿವರಾದ ಜಮೀರ್ ಅವರು ಕರೆ ಮಾಡಿದ್ದರಿಂದ ಬೀದಿಗೆ ಬರುವ ಪರಿಸ್ಥಿತಿ ಬಂದೊಂದಗಿದೆ ಇದನ್ನು ಅರ್ಥಮಾಡಿಕೊಂಡು ಸಚಿವರಿ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು.

Comments
Post a Comment