ಧರ್ಮಸ್ಥಳದ ಉಳಿವಿಗಾಗಿ ಮುಸ್ಲಿಂ, ಕ್ರಿಶ್ಚಿಯನ್ ರಿಂದ ಪಾದಯಾತ್ರೆ; ತನ್ವೀರ್ ಅಹಮ್ಮದ್.

 ಧರ್ಮಸ್ಥಳದ ಉಳಿವಿಗಾಗಿ  ಮುಸ್ಲಿಂ, ಕ್ರಿಶ್ಚಿಯನ್ ರಿಂದ ಪಾದಯಾತ್ರೆ; ತನ್ವೀರ್ ಅಹಮ್ಮದ್

ಬೆಂಗಳೂರು ನವೆಂಬರ್ 9; ನವೆಂಬರ್ 18ರಂದು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಸರ್ವಧರ್ಮ ಸಮ್ಮೇಳನಕ್ಕೆ  ಭಾಗವಹಿಸಲು ಸುಮಾರು 350 ಕಿ.ಮೀಟರ್ ಗಳ ಪಾದಯಾತ್ರೆ ಹಮ್ಮಿಕೊಳಲಾಗಿದೆ ಎಂದು ಮುಸ್ಲಿಂ ಮುಖಂಡ ತನ್ವೀರ್ ಅಹಮ್ಮದ್ ತಿಳಿಸಿದರು.


ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪಾದಯಾತ್ರೆ ಶನಿವಾರ ನಾಳೆ ಬೆಳಿಗ್ಗೆ 7 ಗಂಟೆಗೆ ವಿಧಾನಸೌಧದಿಂದ ಆರಂಭವಾಗಲಿದೆ,ನವೆಂಬರ್ 18ರಂದು ನಡೆಲಿಯಲಿರುವ ಸರ್ವಧರ್ಮ ಸಮ್ಮೇಳನಕ್ಕೆ 

 ಬರಿಯ ಭಾಷಣಕಾರನಾಗಿ ಹೋಗುವ ಬದಲಿಗೆ ಭಾರತದ ಪುನರ್ ನಿರ್ಮಾಣಕ್ಕೆ ಅಗತ್ಯವಿರುವ ಏಕತೆಯ ಸಂದೇಶವನ್ನು ಹೊತ್ತು ಸಾಗುತ್ತಿದ್ದೇನೆ.ಸುಮಾರು ಹತ್ತು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ ದಾರಿಯುದ್ದಕ್ಕೂ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಮತ್ತು ಆಲೋಚನೆಗಳನ್ನು ಆಲಿಸಿ ಸಾಗಲಿದೆ ಎಂದು ಹೇಳಿದರು.


ನನ್ನೊಂದಿಗೆ ಅಲ್ಲಲ್ಲಿ ಜಾತಿ-ಮತ-ಪಂಥವನ್ನು ಮರೆತು

ಧರ್ಮಸ್ಥಳದ ಮೇಲೆ ನಿರಂತರ ನಡೆದ ಆಘಾತಗಳಿಂದ ನಾಡಿನ ಕೋಟ್ಯಂತರ ಮಂದಿ ನೊಂದಿದ್ದಾರೆ. ವಿಶೇಷ ತನಿಖಾ ದಳ ವಿಚಾರಣೆ ನಡೆಸಲು ಆರಂಭಿಸಿದ ನಂತರವಂತೂ ಅನೇಕ ಆರೋಪಗಳು ನಿರಾಧಾರವೆಂದು ಸಾಬೀತಾಗಿದ್ದು ನಾಡಿನ ಜನರೆದುರು ನಿಚ್ಚಳವಾಗಿದೆ.ಜನರ ಮನಸ್ಸಲ್ಲಿ ಮನೆ ಮಾಡಿರುವ ಧರ್ಮಸ್ಥಳದ ಕುರಿತ ಕಟ್ಟ ಭಾವನೆಗಳನ್ನು ಹೋಗಲಾಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಧರ್ಮಸ್ಥಳ ಬರಿ ಒಂದು ಸಮುದಾಯಕ್ಕೆ ಸೇರಿದ ದೇವಸ್ಥಾನವಷ್ಟೇ ಅಲ್ಲ.  ನೂರಾರು ಜನೋಪಯೋಗಿ ಕೆಲಸಗಳನ್ನು ಮಾಡುತ್ತಾ, ನಾಡಿನ ಜನರ ಆಶಾಕಿರಣವಾಗಿದೆ. ಸ್ವಸಹಾಯ ಸಂಘಗಳ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಜಾತಿ-ಮತ-ಪಂಥ ಭೇದಗಳನ್ನು ಮರೆತು, ಎಲ್ಲರನ್ನೂ ಒಟ್ಟುಗೂಡಿಸಿ, ಸಾಲ ಕೊಟ್ಟು, ಅವರ ಆಶೋತ್ತರಗಳನ್ನು ಪೂರ್ಣಗೊಳಿಸಲು ಬೆಂಬಲವಾಗಿ ನಿಂತು, ಪ್ರತಿಯೊಬ್ಬರನ್ನೂ ಮೇಲೆತ್ತುವ ಕಾಯಕದಲ್ಲಿ ನಿರತವಾಗಿದೆ. ರುಡ್‌ಸೆಟ್ ಸ್ಥಾವಲಂಬಿಗೊಳಿಸಿದ ತರುಣರಲ್ಲಿ ಹಿಂದೂಗಳು ಮಾತ್ರವಿಲ್ಲ. ಎಲ್ಲ ಜಾತಿ-ಪಂಥ-ವರ್ಗಗಳವರೂ ಇದ್ದಾರೆ. ಧರ್ಮಸ್ಥಳ ಅನ್ನದಾಸೋಹ ನಡೆಸುವಾಗ, ಜ್ಞಾನದಾಸೋಹ ನಡೆಸುವಾಗ, ಸ್ತ್ರೀಯರ ಮೂಲಕ ಸಮಾಜ ಸಂಘಟನೆಯ ಕೆಲಸದಲ್ಲಿ ನಿರತವಾಗುವಾಗ ಅಲ್ಲೆಲ್ಲಾ ಯಾವ ಅಡೆತಡೆಗಳೂ ಇಲ್ಲದೇ ಎಲ್ಲರನ್ನೂ ಸಮದರ್ಶಿಯಾಗಿ ನೋಡುವ ಭಾವ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರದು ಎಂದು ತಿಳಿಸಿದರು.


ಧರ್ಮಸ್ಥಳಕ್ಕೆ ಧಕ್ಕೆ ಬಂದರೆ ಅದು ಸಮಾಜದ ಸ್ವಾಸ್ಥ್ಯವನ್ನು ಕಡಿಸಿದಂತೆ ಅನೇಕ ಮತಾಂಧರು ಸಮಾಜವನ್ನು ಜಾತಿ-ಜಾತಿಗಳಲ್ಲಿ ಒಡೆಯುವ,ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಂದು ವಿಭಜಿಸುವ ಪ್ರಯತ್ನದಲ್ಲಿರುವಾಗ ಧರ್ಮಸ್ಥಳ ಸದ್ದಿಲ್ಲದೇ ಎಲ್ಲರನ್ನೂ ಒಂದು ಛತ್ರದಡಿ ತರುವ ಯತ್ನ ಮಾಡುತ್ತಿದೆ. ಮಂದಿರ ಹಿಂದೂಗಳದ್ದು, ಅದರ ನಿರ್ವಹಣೆ ಜೈನರದ್ದು, ಅಲ್ಲಿಂದ ನಡೆಯುವ ಸೇವಾಕಾರ್ಯಗಳ ಫಲಾನುಭವಿಗಳು ಎಲ್ಲ ಪಂಥಗಳಿಗೆ ಸೇರಿದವರು, ಹೀಗಿರುವಾಗ ಸರ್ವಧರ್ಮ ಸಮನ್ವಯದ ಮತ್ತು ರಾಷ್ಟ್ರೀಯ ಏಕತೆಯ ಪಾಠ ಬೋಧಿಸುವ ಸಾಮರ್ಥ್ಯ ಇರುವುದು ಧರ್ಮಸ್ಥಳಕ್ಕೆ ಮಾತ್ರ, ಈ ಕ್ಷೇತ್ರದ ಮೇಲೆ ಸುಳ್ಳು ಆರೋಪ ಹೊರಿಸಿ ಅದನ್ನು ನಾಶಪಡಿಸಲು ಯತ್ನಿಸಿದರೆ ಅದು ನಮ್ಮ ಕಾಲಮೇಲೆ ನಾವೇ ಕೊಡಲಿ ಏಟು ಹಾಕಿಕೊಂಡಂತೆ ಎಂದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims