ವಚನ ದನಿ- ಶಬ್ದದಿಂದ ನಿಶ್ಯಬ್ದದೆಡೆಗೆ' ಏಕವ್ಯಕ್ತಿ ಪ್ರಯೋಗ ಸಂಗೀತದ ಅಂತರಯಾನ
ವಚನ ದನಿ- ಶಬ್ದದಿಂದ ನಿಶ್ಯಬ್ದದೆಡೆಗೆ' ಏಕವ್ಯಕ್ತಿ ಪ್ರಯೋಗ ಸಂಗೀತದ ಅಂತರಯಾನ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಹಾಗೂ ಕೊಳಲು ವಾದಕ ಬಾಪು ಪದ್ಮನಾಭ ಅವರಿಂದ 'ವಚನ ದನಿ -ಶಬ್ದದಿಂದ ನಿಶ್ಯಬ್ದದೆಡೆಗೆ' ಎಂಬ ಏಕವ್ಯಕ್ತಿ ಪ್ರಯೋಗವನ್ನು 'ಬೆನಕ' ತಂಡದಿಂದ ಆಯೋಜಿಸಲಾಗಿದೆ. ಈ ಪ್ರಯೋಗವು ವಚನಗಳ ಅಂತರಿಕ ಆಧ್ಯಾತ್ಮಿಕ ತಾತ್ವಿಕತೆಯನ್ನು ಧ್ಯಾನಾತ್ಮಕ ವಚನ ಗಾಯನದ ಮೂಲಕ ಪ್ರಸ್ತುತಪಡಿಸುತ್ತದೆ, ಶಬ್ದದಿಂದ ನಿಶ್ಯಬ್ದದತ್ತ ಸಾಗುವ ಈ ಯಾನವು ಭಾವನಾತ್ಮಕ ಸುಸ್ಥಿತಿ. ಮಾನಸಿಕ ಶಾಂತಿ ಮತ್ತು ಅಂತರಿಕ ಅರಿವಿಗೆ ಅನುವು ಮಾಡಿಕೊಡುತ್ತದೆ. ವಚನಗಳ ಅಂತರಾರ್ಥವನ್ನು ಸಂಗೀತದ ಮೂಲಕ ಆವಿಷ್ಕರಿಸುವ ಬಾಪು ಪದ್ಮನಾಭ ಅವರ ಈ ಪ್ರಯೋಗವು ಶರಣರ ತಾತ್ವಿಕ ಸಂದೇಶವನ್ನು ಹೊಸ ರೀತಿಯಲ್ಲಿ ಜನರ ಹೃದಯಕ್ಕೆ ಹತ್ತಿರಗೊಳಿಸುವ ಒಂದು ಪ್ರಯತ್ನವಾಗಿದೆ.
'ವಚನ ದನಿ – ಶಬ್ದದಿಂದ ನಿಶ್ಯಬ್ದದೆಡೆಗೆ' – ರಂಗಪ್ರಸ್ತುತಿ
ಪರಿಕಲ್ಪನೆ, ಸಂಗೀತ, ಗಾಯನು ಬಾಪು ಪದ್ಮನಾಭ
ನಿರ್ದೇಶನ: ಟಿ.ಎಸ್. ನಾಗಭರಣ
ವಸ್ತ್ರ ವಿನ್ಯಾಸ: ನಾಗಿಣಿ ಭರಣ
ರಂಗ ವಿನ್ಯಾಸ: ವಿಶ್ವಲ್ ಬಿ. ಅಪ್ಪಯ್ಯ
ಸಮಯ: ಸಂಜೆ 6:00 ರಿಂದ
: 18 ໙ 2025
ಸ್ಥಳ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಕರ್
ಬಿ.ಪಿ. ವಾಡಿಯಾ ರಸ್ತೆ, ಬೆಂಗಳೂರು
ಈ ಕಾರ್ಯಕ್ರಮದ ಕುರಿತು ಮಾಧ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಗಳಿಗೆ ಮಾಹಿತಿ ನೀಡುವ ಪತ್ರಿಕಾಗೋಷ್ಠಿಯನ್ನು 6 ನವೆಂಬರ್ 2025 ಗುರುವಾರ ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮಧ್ಯಾಹ್ನ 12 ರಿಂದ 12.30 ರ ಅವಧಿಯಲ್ಲಿ ಆಯೋಜಿಸಲಾಗಿದೆ. ತಾವು ದಯವಿಟ್ಟು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡಬೇಕಾಗಿ ವಿನಂತಿ.

Comments
Post a Comment